ಸುದ್ದಿ ಪತ್ರಿಕೆಯ ವರದಿಗೆ ಸ್ಪಂದಿಸಿದ ಬಡ್ಡಡ್ಕ ಅಮರ ಕ್ರೀಡಾ ಕಲಾ ಸಂಘ

Advt_Headding_Middle

ಸೂರಿಲ್ಲದ ವೃದ್ದೆಗೆ ಸೂರು ನಿರ್ಮಾಣ

ಇಲ್ಲೊಬ್ಬರು ವೃದ್ದೆ ಇದ್ದಾರೆ. ಅವರಿಗೆ ಭೂಮಿಯೇ ನೆಲ! ಆಕಾಶವೇ ಮೇಲ್ಛಾವಣಿ! ಮಳೆ ಗಾಳಿ ಬಿಸಿಲಿಗೆ ನೆನೆದು ಒಣಗಿ ಕಾದು ತಪಸ್ಸಿನಂತೆ ತನ್ನ ಅಂಗೈ ಅಗಲದ ಜಾಗ ಬಿಟ್ಟಗಲಲು ಮನಸ್ಸಿಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಎಂಬ ಶೀರ್ಷಿಕೆಯಡಿ ಒಂದು ವಾರದ ಹಿಂದಿನ ಸುದ್ದಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.


ಆಲೆಟ್ಟಿ ಗ್ರಾಮದ ಬಡ್ಡಡ್ಕದ ಬಳಿ ನೆಲ್ಲಿಕೋಡಿ ಎಂಬಲ್ಲಿ ಆಲೆಟ್ಟಿಯ ಗ್ರಾಮ ಕರಣಿಕರ ಕಛೇರಿಯಲ್ಲಿ ಉಗ್ರಾಣಿಯಾಗಿದ್ದ ದಿ.ಕರಿಯಪ್ಪ ನಾಯ್ಕ ಎಂಬವರ ಪತ್ನಿ ಚಿನ್ನಮ್ಮ ಯಾನೆ ಹೇಮಾವತಿ ಯವರು ವಾಸಿಸುತ್ತಿದ್ದ ಪರಿಯನ್ನು ಆ ವರದಿಯಲ್ಲಿ ವಿವರಿಸಿ ಯಾರಾದರೂ ಈ ವೃದ್ಧೆಗೆ ಸೂರು ನಿರ್ಮಿಸಿಕೊಡುವಿರಾ? ಎಂದು ಕರೆ ನೀಡಲಾಗಿತ್ತು.
ಸುಮಾರು 20 ವರ್ಷಗಳಿಂದ ಹೇಮಾವತಿ ಯಾನೆ ಚಿನ್ನಮ್ಮರವರು ಮುರುಕಲು ಕುಟೀರದಲ್ಲಿರುವುದನ್ನು ನೋಡುತ್ತಿದ್ದ ಸ್ಥಳೀಯ ಬಡ್ಡಡ್ಕ ಅಮರ ಕ್ರೀಡಾ ಕಲಾ ಸಂಘದವರು ಕೆಲ ವರ್ಷಗಳ ಹಿಂದೆಯೇ ಅವರಿಗೆ ಸೂರು ನಿರ್ಮಿಸಲು ಮುಂದಾಗಿದ್ದರು.

ಆದರೆ ಹೇಮಾವತಿಯವರ ಮಾನಸಿಕ ಸ್ಥಿತಿ ಸರಿಯಿಲ್ಲದೆ ಇದ್ದುದರಿಂದ ಸೂರು ನಿರ್ಮಿಸಿಕೊಡುವ ಉದ್ದೇಶದಿಂದ ಹೋದ ಯುವಕರನ್ನು ಅವರು ಬೈದು ಕತ್ತಿ ಹಿಡಿದು ಓಡಿಸಿದ್ದರು. ಅಂದಿನ ಗ್ರಾ.ಪಂ. ಆಡಳಿತ ಮಂಡಳಿಯವರು ಇವರಿಗೆ ಸೂರು ನಿರ್ಮಿಸುವ ವಿಚಾರ ಚರ್ಚಿಸಿದ್ದರು. ಆದರೆ ಯಾರಿಗೂ ವೃದ್ಧೆಯೊಡನೆ ಮಾತನಾಡಿಸಲು ಸಾಧ್ಯವಾಗುತ್ತಿರಲಿಲ್ಲ. ಅದ್ದರಿಂದ ಯಾರಿಗೂ ಉಪಕಾರ ಮಾಡಲು ಆಗಿರಲಿಲ್ಲ.

ಹೇಮಾವತಿಯವರ ಅಣ್ಣನ ಮಗ ವಾಸುದೇವ ನಾಯ್ಕರು ಒಂದೆರಡು ಬಾರಿ ಅತ್ತೆಯ ಪರ್ಣಕುಟೀರವನ್ನು ದುರಸ್ತಿ ಮಾಡಿಸಿದ್ದರು.
ಎರಡು ವರ್ಷದ ಹಿಂದೆ ಗಂಡನೊಂದಿಗೆ ಊರಿಗೆ ಬಂದಿದ್ದ ಅವರ ಮಗಳು, ತಾಯಿಯನ್ನು ಗಂಡ ಮತ್ತು ಮಾವನವರ ಸಹಾಯದಿಂದ ಬಲಾತ್ಕಾರವಾಗಿ ಅರ್ಧ ಕಿ.ಮೀ. ದೂರದಲ್ಲಿರುವ ಮಾವನ ಮನೆಗೆ ಕರೆತಂದು ಬಿಟ್ಟಿದ್ದಳು. ಆ ಬಳಿಕ ಹೇಮಾವತಿಯವರಿದ್ದ ಪರ್ಣಕುಟೀರ ಪೂರ್ಣ ನೆಲಸಮವಾಗಿತ್ತು.
ಸುಮಾರು 2 ವರ್ಷ ತನ್ನಣ್ಣನ ಮನೆಯಲ್ಲಿದ್ದ ಹೇಮಾವತಿಯವರು ಮೂರು ವಾರದ ಹಿಂದೆ ಪುನಹ ತಾನು ಹಿಂದೆ ಇದ್ದ ನೆಲ್ಲಿಕೋಡಿಯ ಜಾಗಕ್ಕೇ ಬಂದರು. ಈ ಜಾಗ ಬಿಟ್ಟು ಬರಲು ಅವರು ಸಿದ್ಧರಿರಲಿಲ್ಲ. ಹಿಂದೆ ಇದ್ದ ಕುಟೀರ ನಾಮಾವಶೇಷವಾಗಿದ್ದುದರಿಂದ ಹೇಮಾವತಿಯವರು ಮಳೆಗೆ ನೆನೆಯುತ್ತ ಬಿಸಿಲಿಗೆ ಒಣಗುತ್ತ ಅಲ್ಲಿ ನಿಲ್ಲತೊಡಗಿದ್ದರು. ಇದನ್ನು ಗಮನಿಸಿದ ಗ್ರಾಮ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜ ರವರು ಸುದ್ದಿಗೆ ತಿಳಿಸಿದರು.


ಸುದ್ದಿ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ರವರು ಪಂಚಾಯತ್ ಸದಸ್ಯರು, ಪಿ.ಡಿ.ಒ. ಮತ್ತು ಗ್ರಾಮಕರಣಿಕರೊಂದಿಗೆ ಸ್ಥಳಕ್ಕೆ ಹೋಗಿ ವೃದ್ಧೆಯೊಂದಿಗೆ ಮಾತನಾಡಿದ್ದಲ್ಲದೆ, ಅವರ ನಿಕಟ ಬಂಧು ವಾಸುದೇವ ನಾಯ್ಕರ ಮನೆಗೆ ಹೋಗಿ ಮಾತನಾಡಿ ” ಈ ವೃದ್ದೆಗೆ ಸೂರು ನಿರ್ಮಿಸಲು ಮುಂದೆ ಬರುತ್ತೀರಾ? ” ಎಂಬ ವರದಿಯನ್ನು ಸುದ್ದಿ ಬಿಡುಗಡೆಯಲ್ಲಿ ಪ್ರಕಟಿಸಿದ್ದರು.

ಸುದ್ದಿ ವರದಿಗೆ ಸ್ಪಂದಿಸಿದ ಸ್ಥಳೀಯ ಬಡ್ಡಡ್ಕ ಅಮರ ಕ್ರೀಡಾ ಕಲಾ ಸಂಘದ ಸದಸ್ಯರು ಒಂದು ವಾರದಲ್ಲೇ ( ಮೇ.24 ರಂದು ) ವೃದ್ಧೆಗೆ ತಾತ್ಕಾಲಿಕ ಮನೆ ನಿರ್ಮಿಸುವ ಪುಣ್ಯದ ಕಾರ್ಯ ನಡೆಸಿದ್ದಾರೆ.
ವೃದ್ದೆ ಹಿಂದೆ ಕುಟೀರ ನಿರ್ಮಿಸಿಕೊಂಡಿದ್ದ ಜಾಗದಲ್ಲೇ ಅಲ್ಲಿದ್ದ ಗುಡಿಸಲಿನ ಅಡಿಪಾಯ ಸ್ಥಳದಲ್ಲೇ ತಾತ್ಕಾಲಿಕ ಶೀಟ್ ಅಳವಡಿಸಿದ ಸೂರನ್ನು ನಿರ್ಮಿಸಿದರು. ಮನೆಯ ಮೇಲ್ಭಾಗದಲ್ಲಿ ಇದ್ದ ಅಪಾಯಕಾರಿ ಮರಗಳನ್ನು ಕಡಿದು ಹಾಕಿ, ಸುತ್ತಮುತ್ತಲಿನ ಕಾಡು ಪೊದೆಗಳನ್ನು ಮೆಷಿನ್ ಬಳಸಿ ಸ್ವಚ್ಛ ಮಾಡಿದ್ದಾರೆ. ಮನೆಯ ಮೇಲ್ಛಾವಣಿಗೆ ಸಿಮೆಂಟ್ ಶೀಟ್ ಹಾಗೂ ಸುತ್ತಲೂ ತಗಡಿನ ಶೀಟ್ ಅಳವಡಿಸಿದ್ದಾರೆ. ನೆಲಕ್ಕೆ ಸಿಮೆಂಟ್ ಸಾರಣೆ ಮಾಡಿದ್ದಾರೆ. ಶೀಟಿನಿಂದ ಬಾಗಿಲು ನಿರ್ಮಿಸಿದ್ದಾರೆ. ಸಂಘಟನೆಯ ಯುವಕರು ತಮ್ಮ ಶ್ರಮದಾನದ ಮೂಲಕ ಕೆಲಸ ನಿರ್ವಹಿಸಿರುವುದಲ್ಲದೆ ಕೈಯಿಂದ ಆದಷ್ಟು ಧನಸಹಾಯವನ್ನು ನೀಡಿ ಸೂರು ನಿರ್ಮಾಣದ ಸಾಮಾಗ್ರಿಗಳನ್ನು ಜೋಡಿಸಿರುತ್ತಾರೆ. ಗುತ್ತಿಗೆದಾರರ ತೀರ್ಥಕುಮಾರ್ ಕುಂಚಡ್ಕ ರವರು ಶೀಟಿನ ಬಾಬ್ತು ಸಹಾಯಧನ ನೀಡಿದರು. ಮೇ. 24 ರಂದು ಬೆಳಗ್ಗೆ ಆರಂಭಿಸಿದ ಶ್ರಮದಾನವು ಸಂಜೆಯಾಗುತ್ತಲೇ ಪೂರ್ತಿಗೊಂಡಿತು. ಬಳಿಕ ಬಡ್ಡಡ್ಕ (ಮುನ್ನ) ಭುವನೇಶ್ವರ ರವರ ಮನೆಯಲ್ಲಿ ಕೂರಿಸಲಾಗಿದ್ದ ವೃದ್ದೆಯನ್ನು ಕರೆದುಕೊಂಡು ಬರಲಾಯಿತು. ಹೊಸ ಮನೆ ನಿರ್ಮಾಣಗೊಂಡಿರುವುದನ್ನು ಕಣ್ಣಾರೆ ನೋಡಿದ ಚಿನ್ನಮ್ಮ ರವರು ನಗುಮುಖದಿಂದ ಹರ್ಷವ್ಯಕ್ತಪಡಿಸಿದರಲ್ಲದೆ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಶ್ರಮದಾನ ಕಾರ್ಯದಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರಾದ ಶಾಂತಪ್ಪ ಪಿಂಡಿಬನ, ಸತ್ಯ ಕುಮಾರ್ ಆಡಿಂಜ, ಮಾಜಿ ಸದಸ್ಯ ಪುಂಡರೀಕ ಕಾಪುಮಲೆ, ಹೇಮನಾಥ ಬಡ್ಡಡ್ಕ, ವೈಕುಂಠ ನಾಯಕ್ ದೋಣಿಮೂಲೆ, ದಿನೇಶ್ ಬಡ್ಡಡ್ಕ, ಭುವನೇಶ್ವರ ಬಡ್ಡಡ್ಕ, ವೆಂಕಟ್ರಮಣ ದೋಣಿಮೂಲೆ, ಕಮಲಾಕ್ಷ ಬಡ್ಡಡ್ಕ, ನಾಗರಾಜ ಬಡ್ಡಡ್ಕ, ನಿತ್ಯಾನಂದ ಗುಂಡ್ಯ, ಗಂಗಾಧರ ಬಡ್ಡಡ್ಕ , ಬೆಳ್ಳಕುಂಞ ಗುಂಡ್ಯ, ಶಂಕರ ಪಾಟಾಳಿ ಬಡ್ಡಡ್ಕ, ಸುಕುಮಾರ ಗುಂಡ್ಯ, ಚಂದ್ರಶೇಖರ ಬಡ್ಡಡ್ಕ, ಮುರಳಿ, ಸಂದೀಪ್, ಅಭಿಜಿತ್, ರಂಜಿತ್, ಸತೀಶ್. ಜಿ, ಅರುಣ ಗೂಡಿಂಜ, ಐತ್ತಪ್ಪ, ನಾಗೇಶ್, ವಿನೋದ್ ರಾಜ್, ವಸಂತ, ಚಂದ್ರಶೇಖರ. ಜಿ,ಶ್ರವಣ್, ವಿಘ್ನೇಶ್, ಮಂಜುನಾಥ, ಅನಿಲ್, ಅನೀಶ್, ನವೀನ್. ಪಿ, ಸುನೀಲ್. ಪಿ, ವೀಕ್ಷಿತ್, ನಾರಾಯಣ, ಶ್ರೀಧರ, ಪಾರ್ವತಿ, ಚಂದ್ರಾವತಿ ಮತ್ತಿತರರು ಪಾಲ್ಗೊಂಡಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.