ಮಲ್ಲಿಗೆ

Advt_Headding_Middle

ನಸು ನಾಚದೆ ತುಸು ಬೇಗ ಅರಳು ಮಲ್ಲಿಗೆ
ಕಾತರಿಸುತಿರುವೆ ನಿನ್ನ ನೀಡಲು ನನ್ನ ನಲ್ಲೆಗೆ
ಹಸಿರ ಚಪ್ಪರಕ್ಕೆ ನೀ ನೀಡುವೆ ಸುಂದರಮೆರುಗು
ಮನದಾಳದಲ್ಲಿದೆ ಬೇಗ ಬಾಡುವೆನೆಂಬ ಕೊರಗು
ಕೆಲ ಕ್ಷಣಗಳಷ್ಟೆ ಸೀಮಿತ ನಿನ್ನ ಬದುಕಿನ ಆಯಸ್ಸು
ಮುತ್ತೈದೆ ಮುಡಿಗೆ ನಿನ್ನ ಆಶಿರ್ವಾದವೇ ಶ್ರೇಯಸ್ಸು
ತಂಗಾಳಿಗೆ ಮೈಯೊಡ್ಡಿ ನೀ ಅರೆಬಿರಿದು ನಗಲು
ನಿನ್ನಂದಕ್ಕೆ ಸೋತು ನಾಚಿಹುದು ಮುಗಿಲು
ನಿನ್ನ ಸಂಗಂಧದ ಕಂಪಿಗೆ ಗರಿಕೆದರಿಹುದು ಕನಸು
ಮುಡಿಯೇರಲು ನನ್ನೊಡತಿ ಮರೆವಳು ಮುನಿಸು
ನೀ ನಿಲ್ಲದೆಅವಳ ಶೃಂಗಾರ ಎಂದಿಗೂ ಅಪರಿಪೂರ್ಣ ‘
ಪ್ರತಿಬಿಂಬವ ನೀಡಲು ಹೆಮ್ಮೆ ಪಡುತಿಹುದು ದರ್ಪಣ
ತುಸು ಜಂಭದಿ ಹಾರವಾಗಿ ಏರುವೆ ನೀ ಕೃಷ್ಣನ ಕೊರಳ
ನನ್ನ ರಾಧೆಯ ಹಂಬಲಕ್ಕೆ ನಿನ್ನರಸುತಿರುವನು ಈ ಮರುಳ
ನಿನ್ನ ಬಯಸಿ ಕಾದು ಕುಳಿತಿಹಲು ನನ್ನ ಪ್ರೀತಿಯ ಒಡತಿ
ನಿನ್ನ ನಿತ್ತರೆ ಮಾತ್ರ ಸಿಗುವುದು ಸಿಹಿ ಮುತ್ತಿನ ಸಮ್ಮತಿ

– ಪ್ರಜ್ಞಾ ಎನ್. ರೈ
ಗೂಡಂಬೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.