ಗುತ್ತಿಗಾರು ಕೋವಿಡ್ ಕಾರ್ಯಪಡೆ ಸಭೆ

Advt_Headding_Middle

ಗುತ್ತಿಗಾರು ಕೋವಿಡ್ ಕಾರ್ಯಪಡೆ ಸಭೆಯು ಇಂದು ( ಮೇ.25 ರಂದು ) ಗ್ರಾ.ಪಂ ಅಧ್ಯಕ್ಷರಾದ ರೇವತಿ ಆಚಳ್ಳಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗದಂತೆ ಜಾಗೃತಿಯ ಕ್ರಮ ವಹಿಸುವುದು , ಕಿಟ್ ನೀಡುವುದರ ಬಗ್ಗೆ ಚರ್ಚೆ ನಡೆಯಿತು.


ಕೋರೋನಾ ಸೋಂಕು ಬಂದವರ ಮನೆಯವರು ಪೇಟೆಗಳಲ್ಲಿ ತಿರುಗಾಡುವವರ ಬಗ್ಗೆ ಕ್ರಮವಹಿಸಿ ಎಂದು ಕಾರ್ಯಪಡೆಯವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿ ಕೊಂಡರು. ಸೋಂಕು ಬಂದ ಮನೆಯವರಿಗೆ ಸೀಲ್ ಹಾಕುವ ಬಗ್ಗೆ ಚರ್ಚೆ ನಡೆಯಿತು. ಗುತ್ತಿಗಾರು ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಗ್ರಾಮ ಪಂಚಾಯತ್ ವತಿಯಿಂದಲೇ ಕಿಟ್ ನೀಡುವುದು ಎಂದು ಸಭೆಯಲ್ಲಿ ನಿರ್ಣಹಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರು ,ಕಾರ್ಯಪಡೆ ಸದಸ್ಯರು ,ಆಶಾ ಕಾರ್ಯಕರ್ತೆಯರು ,ಪ್ರಾಥಮಿಕ ಅರೋಗ್ಯ ಕೇಂದ್ರ ಸಿಬ್ಬಂದಿಗಳು ,ಗ್ರಾ.ಪಂ ಸಿಬ್ಬಂದಿ ಗಳು ,ಉಪಸ್ಥಿತರಿದ್ದರು.ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.