Breaking News

ಬಳ್ಳಕ್ಕ: ಸ್ಥಳೀಯರ ವಿರೋಧ ಲೆಕ್ಕಿಸದೆ ಕೊಳವೆ ಬಾವಿ ಕೊರೆಯಲು ಮುಂದಾದ ಪಂಚಾಯತ್ ವಿರುದ್ಧ ಡಿ.ಸಿ.ಗೆ ದೂರು, ಇಂದು ಬೆಳ್ಳಂಬೆಳಗ್ಗೆ ಆಗಮಿಸಿದ ಬೋರ್ ವೆಲ್ ಲಾರಿ

Advt_Headding_Middle

 

ಗುತ್ತಿಗಾರು ಗ್ರಾಮದ ಬಳ್ಳಕ್ಕ ಎಂಬಲ್ಲಿ ಕುಡಿಯುವ ನೀರಿಗಾಗಿ ಎಸ್ಸಿ ಕುಟುಂಬವೊಂದು ಪಂಚಾಯತ್ ಗೆ ಬೇಡಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಪಂಚಾಯತು ಎಸ್.ಟಿ ಕುಟುಂಬಿಕರ ಜಾಗದ ಸಮೀಪ ಕೊಳವೆ ಬಾವಿ ಕೊರೆಯಲು ಮುಂದಾದಾಗ ಸ್ಥಳೀಯ ಎಸ್.ಟಿ. ಕುಟುಂಬಗಳು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿತ್ತು. ಈ ವಿರೋಧಕ್ಕೆ ಸೊಪ್ಪು ಹಾಕದೆ ಬೋರ್ ಕೊರೆಯಲು ಪಂಚಾಯತು ಮುಂದಾದಾಗ
ಸ್ಥಳೀಯ ಪರಿಶಿಷ್ಟ ಪಂಗಡದ ಕುಟುಂಬದವರು, ಜನಪ್ರತಿನಿಧಿಗಳಿಗೆ, ಸುಬ್ರಹ್ಮಣ್ಯ ಪೋಲಿಸ್ ಠಾಣೆಗೆ ಮತ್ತು ಅಧಿಕಾರಿಗಳಿಗೆ ದೂರು ನೀಡಿದ್ದರು. ಇದರಿಂದಾಗಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ಪಂಚಾಯತ್ ಸದಸ್ಯರು ಮತ್ತು ಪಿ.ಡಿ.ಒ.ರವರು ಸ್ಥಳ ತನಿಖೆಗೆ ಬಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಯವರು ಇದೇ ಜಾಗದಲ್ಲಿ‌ ಕೊಳವೆ ಬಾವಿ ಕೊರೆಯಿರಿ ಎಂದು ಸೂಚಿಸಿದರೆನ್ನಲಾಗಿದೆ.
ಬಳಿಕ ಮೇ. 25ರಂದು ಸ್ಥಳೀಯರು ಡಿ.ಸಿ.ಯವರಿಗೆ ದೂರು ಸಲ್ಲಿಸಿದ್ದರು. ಆದರೆ ಮೇ. 26ರಂದು ಬೆಳ್ಳಂಬೆಳಗ್ಗೆ ಸ್ಥಳೀಯರ ವಿರೋಧದ ನಡುವೆಯೇ ಕೊಳವೆಬಾವಿ ಕೊರೆಯುವ ಯಂತ್ರ ಆಗಮಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಪಂಚಾಯತ್ ನ ಸ್ಥಳೀಯ ವಾರ್ಡ್ ಸದಸ್ಯರು ಆ ಜಾಗದಲ್ಲಿ ಬೋರ್ ಕೊರೆಯುವುದು ಬೇಡವೆಂದು ತಿಳಿಸಿದ್ದರೂ, ಬೇರೆ ವಾರ್ಡಿನ ಸದಸ್ಯರು ಬಂದು ಹಠದಿಂದ ಕೊಳವೆ ಬಾವಿ ಕೊರೆಯಲು ಬಂದಿರುವುದಾಗಿ ಆರೋಪಿಸಿರುವ ಸ್ಥಳೀಯರು ಬೋರ್ ಲಾರಿಯ ಮುಂದೆ ಪ್ರತಿಭಟಿಸುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.