ಪಂಜ: ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮುಕ್ತಿಧಾಮಕ್ಕೆ ಕಟ್ಟಿಗೆ ಸಂಗ್ರಹ

Advt_Headding_Middle

ಪಂಜ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪಂಜ ಗ್ರಾಮ ಪಂಚಾಯತ್ ನ ಸಾರ್ವಜನಿಕ ಮುಕ್ತಿಧಾಮ(ಸ್ಮಶಾನ)ಕ್ಕೆ ಕಟ್ಟಿಗೆ ಸಂಗ್ರಹ ಮಾಡುವ ಕರ ಸೇವೆಯು ಮೇ.೨೬ ರಂದು ನಡೆಯಿತು. ಲಾಕ್ ಡೌನ್ ಹಿನ್ನೆಲೆ ಮೃತ ಪಟ್ಟವರ ಅಂತ್ಯಕ್ರಿಯೆಗೆ ಕಟ್ಟಿಗೆ ಸಂಗ್ರಹಿಸಲು ಮೃತರು ಸಂಬಂಧಿಕರು ಕಷ್ಟ ಪಡುತ್ತಾರೆ. ಈ ವಿಚಾರ ಮನಗಂಡು ಪಂಜ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಪಂಜ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಸುಮಾರು ೩ ತಿಂಗಳಿಗೆ ಬೇಕಾದ ಕಟ್ಟಿಗೆ ಸಂಗ್ರಹಿಸಿದ್ದಾರೆ.
ಕರ ಸೇವೆಯಲ್ಲಿ ಕ್ಲಬ್ ನ ೩೦ ಸದಸ್ಯರು ಪಾಲ್ಗೊಂಡಿದ್ದರು. ಇದೇ ಸಂಸ್ಥೆ ಲಾಕ್‌ಡೌನ್ ವೇಳೆ ಪಂಜದಲ್ಲಿ ಪ್ರತೀ ದಿನ ಎಲ್ಲಾ ಅಂಗಡಿಗಳ ಮುಂದೆ ಗ್ರಾಹಕರು ಬಂದಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮತ್ತು ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುವ ಕೆಲಸ , ಕೊರೋನಾ ಪಾಸಿಟಿವ್ ಬಂದ ಮನೆಗಳಿಗೆ ಅಗತ್ಯ ಸೇವೆಗಳ ನೀಡುತ್ತಿದ್ದಾರೆ.ಕಳೆದ ಲಾಕ್ ಡೌನ್ ವೇಳೆ ಕೂಡ ಇವರು ಇದೇ ರೀತಿ ಸೇವೆ ಸಲ್ಲಿಸಿದ್ದಾರೆ.ವಿಶೇಷವಾಗಿ ದಿನ ೨೪ ಗಂಟೆಯೂ ಜೀವ ರಕ್ಷಕ ಅಂಬ್ಯುಲೆನ್ಸ್ ಸೇವೆ ನೀಡುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.