ಕೊರೊನಾ ಲಾಕ್ ಡೌನ್ : ಸದಸ್ಯರ ನೆರವಿಗೆ ನಿಂತ ಸಂಪಾಜೆ ಸಹಕಾರಿ ಸಂಘ

Advt_Headding_Middle

 

ಸಾಲದ ಮೇಲಿನ ಶೇ.2 ಬಡ್ಡಿ ಮನ್ನಾ ಸಹಿತ ವಿವಿಧ ಸಹಾಯ ನಿರ್ಧಾರ

ದೇಶದಾದ್ಯಂತ ಅಪಾಯಕಾರಿ ಕೊರೋನ ವೈರಸ್ ಹೆಚ್ಚಾಗುತ್ತಿದ್ದು ಇದರಿಂದಾಗಿ ಆರ್ಥಿಕತೆಯ ಮೇಲೆ ಈಗಾಗಲೇ ಪ್ರತಿಕೂಲ ಪರಿಣಾಮ ಬೀರಿದ್ದು ನಾಡಿನ ಜನತೆಯು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಂಕಷ್ಟದ ಸಂದರ್ಭದಲ್ಲಿ ಸರ್ವರಿಗೆ ಸಹ ಬಾಳು ಸರ್ವರಿಗೆ ಸಮಪಾಲು ಎಂಬ ಸಹಕಾರಿ ತತ್ವದಡಿಯಲ್ಲಿ ತನ್ನ ಸಂಘದ ಸದಸ್ಯರಿಗೆ ಆರ್ಥಿಕ ಸಹಾಯ ಹಸ್ತವನ್ನು ನೀಡುವ ನಿಟ್ಟಿನಲ್ಲಿ ಸುಳ್ಯ ತಾಲೂಕಿನ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಕಳೆದ ಬಾರಿಯಂತೆಯೇ ಈ ಬಾರಿಯೂ ನೆರವಿಗೆ ನಿಂತಿದೆ.

ಇಂದು ನಡೆದ ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಸಂಘದ ಹೊರಬಾಕಿ ಸಾಲದ 59 % ರಷ್ಟಿರುವ ಕೃಷಿಯೇತರ ಸಾಲಗಳ ಚಾಲ್ತಿ ಹಾಗೂ ಸುಸ್ತಿ ಸಾಲದ ಕಂತುಗಳಲ್ಲಿ 3 ತಿಂಗಳ ಕಂತುಗಳನ್ನು ಸಾಲದ ಅವಧಿಯಲ್ಲಿ ಮುಂದೂಡಲಾಗಿದೆ ಹಾಗೂ ಬಡ್ಡಿಯನ್ನು ಪಾವತಿಸುವ ಸಂದರ್ಭದಲ್ಲಿ 2 % ಬಡ್ಡಿ ಮನ್ನಾ ಘೋಷಣೆ ಮಾಡಲಾಗಿದೆ. 2021ನೇ ಮೇ, ಜೂನ್ ಹಾಗೂ ಜುಲೈ ತಿಂಗಳ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿಯೇತರ ಸಾಲ ( ವ್ಯಾಪಾರ ಸಾಲ, ಹಳ್ಳಿ ವ್ಯಾಪಾರ ಸಾಲ, ವಾಹನ ಸಾಲ, ಮನೆ ಖರೀದಿ ಸಾಲ, ಮನೆ ದುರಸ್ತಿ ಸಾಲ, ವಾಣಿಜ್ಯ ಸಂಕೀರ್ಣ ನಿರ್ಮಾಣ ಸಾಲ, ಆಭರಣ ಸಾಲ ಇತ್ಯಾದಿ) ಗಳ ಚಾಲ್ತಿ ಹಾಗೂ ಸುಸ್ತಿ ಸಾಲಗಳ ಕಂತುಗಳಲ್ಲಿ 3 ತಿಂಗಳ ಸಾಲದ ಕಂತಿನ ಅವಧಿಯನ್ನು ಮುಂದೂಡಲಾಗಿದೆ. ಸದಸ್ಯ ಸಾಲಗಾರ ಸದಸ್ಯರು ಆಗಸ್ಟ್ ತಿಂಗಳ ಕಂತನ್ನು ಮರು ಪಾವತಿಸುವಾಗ ಮೇ,ಜೂನ್ ಹಾಗೂ ಜುಲೈ ತಿಂಗಳ ಹೊರಬಾಕಿ ಸಾಲದ ಮೇಲಿನ ಬಡ್ಡಿ ಯಲ್ಲಿ 2% ಬಡ್ಡಿಯನ್ನು ಮನ್ನಾ ಮಾಡಲಾಗುವುದು. ಅಲ್ಪಾವಧಿ ಬೆಳೆ ಸಾಲ (ಎಂಕೆಸಿಸಿ ) ವು ಸರಕಾರದ ಆದೇಶದಂತೆ ಒಂದು ಕುಟುಂಬಕ್ಕೆ ಗರಿಷ್ಠ ಮೂರು ಲಕ್ಷ ಮಾತ್ರ ಆಗಿದ್ದು, ತೆರಿಗೆ ಪಾವತಿದಾರ, ಪಿಂಚಣಿದಾರ ಹಾಗೂ 20 ಸಾವಿರಕ್ಕಿಂತ ಹೆಚ್ಚು ಮಾಸಿಕ ವೇತನದಾರರಿಗೆ ಶೂನ್ಯ ಬಡ್ಡಿದರ ಅನ್ವಯಿಸುವುದಿಲ್ಲ. ಹಳದಿ ರೋಗ ಬಾಧಿತ ಪ್ರದೇಶವಾಗಿದ್ದು ಹಾಗೂ ಕರೋನದ ಆರ್ಥಿಕ ಸಂಕಷ್ಟದ ಈ ಸಂದರ್ಭದಲ್ಲಿ ಅಂತಹ ಸದಸ್ಯರು ಶೇ.7 ಬಡ್ಡಿದರ ಪಾವತಿಸಲು ಕಷ್ಟವಾಗುವುದನ್ನು ಮನಗಂಡು ಪ್ರಸ್ತುತ ಅವಧಿಯ ಶೇ. 7 ಬಡ್ಡಿದರವನ್ನು ಸಂಘದಿಂದಲೇ ಭರಿಸಲಾಗುವುದು. ಇದರಿಂದಾಗಿ ಸಂಘದಿಂದ ಅಲ್ಪಾವಧಿ ಕೃಷಿ ಸಾಲ ಪಡೆದ ಎಲ್ಲಾ ಸದಸ್ಯರಿಗೂ ಶೂನ್ಯ ಬಡ್ಡಿದರ ಅನ್ವಯಿಸಿ ದಂತಾಗುತ್ತದೆ.
ಸಂಪಾಜೆ ಗ್ರಾಮವು ಬೆಳೆಯುತ್ತಿರುವ ಪಟ್ಟಣ ಪ್ರದೇಶವಾಗಿದ್ದು ಈಗಾಗಲೇ ಪರಿಸರ ಸ್ವಚ್ಛತೆಯನ್ನು ಕಾಪಾಡಲು ಗ್ರಾಮ ಪಂಚಾಯತ್ ಬಾಡಿಗೆ ವಾಹನದ ಮುಖಾಂತರ ತ್ಯಾಜ್ಯ ವಿಲೇವಾರಿಯನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಸ್ವಂತ ವಾಹನ ಖರೀದಿ ಮಾಡಲು ಸಹಕರಿಸುವ ಉದ್ದೇಶದಿಂದ ಸಂಘದಿಂದ 25000 ವನ್ನು ಸಹಾಯಧನವಾಗಿ ನೀಡುವುದು ಹಾಗೂ ತ್ಯಾಜ್ಯ ವಿಲೇವಾರಿ ವಾಹನ ಖರೀದಿಗೆ ನಿಬಡ್ಡಿ ಸಾಲ ನೀಡುವುದು.
4. ಕರೋನದ ಈ ಸಂದರ್ಭದಲ್ಲಿ ಸದಸ್ಯರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದಿರುವುದರಿಂದ ಸಂಘದಿಂದ ಕೃಷಿ ಸಾಲ ಪಡೆದ ಸದಸ್ಯರಿಗೆ ಗರಿಷ್ಠ ಎರಡು ಕ್ವಿಂಟಲ್ ಕೃಷಿ ಉತ್ಪನ್ನಗಳ ಮೇಲೆ ಅಡಮಾನ ಸಾಲ , ರಾಸಾಯನಿಕ ಹಾಗೂ ಸಾವಯವ ಗೊಬ್ಬರ ಹಾಗೂ ಕೃಷಿ ಉಪಕರಣ ಖರೀದಿ ಸಾಲಗಳ ಮೇಲೆ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು.
5. ಇಂದಿನ ಈ ಸಂಕಷ್ಟದ ಸಂದರ್ಭದಲ್ಲಿ ಕೇವಲ ಸಂಘದ ಸದಸ್ಯರಿಗೆ ಮಾತ್ರವಲ್ಲದೆ ಸಂಪಾಜೆ ಗ್ರಾಮದ ಪ್ರತಿ ಬಡ ಕುಟುಂಬದ ಬಿಪಿಎಲ್ ಹಾಗೂ ಅಂತ್ಯೋದಯದ ಎಲ್ಲಾ ಪಡಿತರ ಚೀಟಿದಾರರ ಪ್ರತಿ ಕುಟುಂಬಕ್ಕೆ ಸುಮಾರು 500 ಮೌಲ್ಯದ ಅವಶ್ಯಕ ಸಾಮಗ್ರಿಗಳನ್ನು ವಿತರಿಸಲಾಗುವುದು. ನಮ್ಮ ಸಂಪಾಜೆ ಗ್ರಾಮ ವ್ಯಾಪ್ತಿಯ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಕುಟುಂಬದವರಿಗೆ ಜೂನ್ ತಿಂಗಳಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಕಿಟ್ ವಿತರಿಸಲಾಗುವುದು. ಸಂಪಾಜೆ ಗ್ರಾಮದಲ್ಲಿ ಪಡಿತರ ಕಾರ್ಡು ಹೊಂದಿಲ್ಲದ ಕುಟುಂಬದವರಿಗೂ ಆಹಾರ ಕಿಟ್ ವಿತರಿಸಲಾಗುವುದು. ಇದರಿಂದಾಗಿ ಸಂಪಾಜೆ ಗ್ರಾಮದ ಪ್ರತಿಯೊಂದು ಕುಟುಂಬದವರಿಗೂ ಆರ್ಥಿಕ ಸಹಾಯವನ್ನು ನೀಡಿದಂತಾಗುವುದು. ಬಹುಶಃ ಇದು ರಾಜ್ಯಮಟ್ಟದಲ್ಲಿಯೇ ಪ್ರಪ್ರಥಮವಾಗಿ ಒಂದು ಸಹಕಾರಿ ಸಂಘವು ಗ್ರಾಮದ ಜನತೆಯ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿ ಮಾದರಿಯಾಗುವಂತದ್ದು.
6. ಸಂಘದ ಸಿಬ್ಬಂದಿಗಳಿಗೆ, ದಿನಗೂಲಿ ನೌಕರರಿಗೆ ಹಾಗೂ ದೈನಿಕ ಠೇವಣಿ ಸಂಗ್ರಹಕಾರರಿಗೆ ರುಪಾಯಿ 50000 ವರೆಗೆ ತುರ್ತು ಮುಂಗಡ ಸಾಲ ವಿತರಿಸಲಾಗುವುದು.
7. ಸಂಪಾಜೆ ಗ್ರಾಮದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಆಹಾರ ಕಿಟ್ ವಿತರಿಸುವುದು.
8. ವಾರದ ಪ್ರತಿ ಸೋಮವಾರ ಅಡಿಕೆ ಖರೀದಿ, ಪ್ರತಿ ಬುಧವಾರ ಕೊಕ್ಕೋ ಖರೀದಿ ಹಾಗೂ ವಾರದ ಪ್ರತಿ ದಿನ ರಜಾ ದಿನವನ್ನು ಹೊರತುಪಡಿಸಿ ಬೆಳಗ್ಗೆ 8.00 ರಿಂದ 12.00ಗಂಟೆ ವರೆಗೆ ಖರೀದಿ ಇರುತ್ತದೆ.
9. ಅದು ಅಲ್ಲದೆ ರಾಜ್ಯ ಸರಕಾರದ ಆದೇಶದಂತೆ ಎಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ವಾಯ್ದೆ ಬರುವ ಅಲ್ಪಾವಧಿ ಹಾಗೂ ದೀರ್ಘಾವಧಿ ಸಾಲದ ಕಂತನ್ನು ಮರುಪಾವತಿಸಲು 30.06.2021 ರ ವರಿಗೆ ಕಾಲಾವಕಾಶ ನೀಡಲಾಗಿದೆ.
ಆದುದರಿಂದ ಸಂಘದ ಸದಸ್ಯರು ಮೇಲಿನ ಸೌಲಭ್ಯಗಳ ಪ್ರಯೋಜನವನ್ನು ಪಡೆಯಬೇಕಾಗಿ ವಿನಮ್ರವಾಗಿ ವಿನಂತಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.