Breaking News

ಆಲೆಟ್ಟಿ ಪಂಚಾಯತ್ ನಲ್ಲಿ ಸಾಮಾನ್ಯ ಸಭೆ

Advt_Headding_Middle

 

 

ಆಲೆಟ್ಟಿ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯು ಪಂ.ಅಧ್ಯಕ್ಷೆ ಪುಷ್ಪವಾತಿ ಕುಡೆಕಲ್ಲು ರವರ ಅಧ್ಯಕ್ಷತೆಯಲ್ಲಿ ಮೇ.21 ರಂದು ನಡೆಯಿತು. ಕಳೆದ ತಿಂಗಳ ಸಮಾನ್ಯ ಸಬೆಯ ನಿರ್ಣಯದ ಪ್ರತಿಯನ್ನು ಸದಸ್ಯರಿಗೆ ನಿಡಲಾಯಿತು . ನೀರಿನ ಬಿಲ್ಲು ಸಂಗ್ರಹದ ಬಗ್ಗೆ ವಿವರ ನೀಡುವಂತೆ ಸದಸ್ಯ ಧರ್ಮಪಾಲ ಕೊಯಿಂಗಾಜೆ ಪ್ರಸ್ತಾಪಿಸಿ ಕಳೆದ ಸಭೆಯಲ್ಲಿ ನೀರು ಬಿಡುವವರನ್ನು ಕರೆದು ಸಭೆ ನಡೆಸುವಂತೆ ನಿರ್ಧರಿಸಲಾಗಿತ್ತು. ಇದುವರೆಗೆ ನಡೆಸಿಲ್ಲ ಯಾಕೆ ? ಎಂದು ಪ್ರಶ್ನಿಸಿದರು. ಕೊರೊನಾ ಪ್ರಕರಣ ಇರುವುದರಿಂದ ಈಗ ಮನೆ ಮನೆಗೆ ಹೋಗಲು ಸಾಧ್ಯವಿಲ್ಲ ಆದ್ದರಿಂದ ಸಭೆ ಕರೆದಿಲ್ಲ. ಈಗಾಗಲೇ ನೀರಿನ ಬಿಲ್ಲು ಸಂಗ್ರಹ ಮಾಡಲು ಹೊಸ ನೇಮಕಾತಿ ಮಾಡಿದ್ದೇವೆ ಎಂದು ಅಧ್ಯಕ್ಷರು ಉತ್ತರಿಸಿದರು.
14 ನೇ ಹಣಕಾಸಿನ ಉಳಿಕೆ ಮೊತ್ತದ ಹಾಗೂ ಖರ್ಚಾದ ವಿವರ ಬೇಕು ಎಂದು ಕೇಳಿದರು. ವಿವರವನ್ನು ಇಂಜಿನಿಯರ್ ರವರು ನೀಡಿದ ವೇಳೆ ವ್ಯಾಪಕ ಚರ್ಚೆಯು ನಡೆಯಿತು. ಬಡ್ಡಡ್ಕದಲ್ಲಿ ವೃದ್ದೆಯೊಬ್ಫರಿಗೆ ಮನೆ ಇಲ್ಲದಿರುವ ಬಗ್ಗೆ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದ ನಮ್ಮ ಗ್ರಾಮಕ್ಕೆ ಮತ್ತು ಪಂಚಾಯತ್ ನವರಿಗೆ ಮುಜುಗರ ತರುವಂತಾಗಿದೆ. ಪಂ.ಸದಸ್ಯರು ಈ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿ ಚರ್ಚಿಸಿದ ನಂತರ ಪತ್ರಿಕೆಯವರನ್ನು ಕರೆಸಬಹುದಿತ್ತು ಎಂದು ಶಿವಾನಂದ ರಂಗತ್ತಮಲೆ, ದಿನೇಶ್ ಕಣಕ್ಕೂರು ರವರು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಕೆಲ ಮಂದಿ ಸದಸ್ಯರು ಧ್ವನಿಗೂಡಿಸಿದರು.
ಪಂಚಾಯತ್ ನಿಂದ ಅವರಿಗೆ ಮನೆ ನಿರ್ಮಿಸಿಕೊಡಲು ಸಾಧ್ಯವಾಗುವುದಿದ್ದರೆ ಮಾಡಿಕೊಡಿ ಇಲ್ಲದಿದ್ದರೆ ಸಾಧ್ಯವಿಲ್ಲ ಎಂಬುದಾಗಿ ಸ್ಪಷ್ಟೀಕರಣ ಕೊಡಿ ಎಂದು ಸತ್ಯ ಕುಮಾರ್ ಆಡಿಂಜ ರವರು ಆಕ್ರೋಶಭರಿತರಾಗಿ ಹೇಳಿದರು.
ವೃದ್ದೆಯ ಬಳಿ ದಾಖಲೆ ಪತ್ರ ಇಲ್ಲದಿರುವುದರಿಂದ ಪಂಚಾಯತ್ ವತಿಯಿಂದ ಮನೆ ನಿರ್ಮಿಸಲು ಆಗುವುದಿಲ್ಲ. ದಾನಿಗಳ ಸಹಕಾರದಿಂದ ನಿರ್ಮಿಸುವುದಾದರೆ ನಾವು ಸಹಕಾರ ನೀಡುತ್ತೇವೆ ಎಂದು ಉಪಾಧ್ಯಕ್ಷ ದಿನೇಶ್ ರವರು ಪ್ರತಿಕ್ರಿಯಿಸಿದರು.
ಗ್ರಾಮದಲ್ಲಿ ಸೊಳ್ಳೆ ಕಾಟದಿಂದ ರೋಗ ಹರಡುವುದನ್ನು ತಡೆಗಟ್ಟಲು ತುರ್ತಾಗಿ ಫಾಗಿಂಗ್ ಮಾಡುವಂತೆ ಮುತ್ತಪ್ಪ ಪೂಜಾರಿಯವರು ಸಲಹೆ ನೀಡಿದರು. 15 ನೇ ಹಣಕಾಸು ಕ್ರಿಯಾ ಯೋಜನೆಯ ಕುರಿತು ಪಿ.ಡಿ.ಒ.ರವರು ವಾರ್ಡುವಾರು ಹಂಚಿಕೆಯ ವಿವರ ನೀಡಿದರು. ಗ್ರಾಮದ 8 ವಾರ್ಡಿಗೆ ಸಮನಾಗಿ ಹಂಚಿಕೆ ಮಾಡುವ ಬಗ್ಗೆ ಅಧ್ಯಕ್ಷರು ತೀರ್ಮಾನಿಸಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಸತ್ಯಕುಮಾರ್ ಆಡಿಂಜ, ಮುತ್ತಪ್ಪ ಪೂಜಾರಿ, ಸುದೇಶ್ ಅರಂಬೂರು , ಕುಸುಮ ಬಿಲ್ಲರಮಜಲು, ಕಮಲ ನಾಗಪಟ್ಟಣ ರವರು ಒಂದು ವಾರ್ಡಿನಲ್ಲಿ ನಾಲ್ಕು ಸದಸ್ಯರಿರುವಲ್ಲಿ ತಲಾ ಸದಸ್ಯರೊಬ್ಬರಿಗೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು. ಇದಕ್ಕೆ ಅಸಮಾಧಾನಗೊಂಡ ಸದಸ್ಯರ ಪೈಕಿ ಗೀತಾ ಕೋಲ್ಚಾರು, ಚಂದ್ರಕಾಂತ ನಾರ್ಕೋಡು, ರತೀಶನ್ ಅರಂಬೂರು, ವೇದಾವತಿ ನೆಡ್ಚಿಲು, ಶಂಕರಿ ಕೊಲ್ಲರಮೂಲೆ, ವೀಣಾ ಆಲೆಟ್ಟಿ, ದಿನೇಶ್ ಕಣಕ್ಕೂರು ರವರು ಒಂದೊಂದು ವಾರ್ಡಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿದರು.ಅನುದಾನ ಹಂಚಿಕೆಯ ವಿಚಾರದಲ್ಲಿ ಸ್ವಲ್ಪ ಸಮಯ ಗದ್ದಲವೇ ನಡೆದು ಹೋಯಿತು. ಬಳಿಕ ಸ್ಥಾಯಿ ಸಮಿತಿಯ ರಚನೆಯನ್ನು ನಿಯಮದ ಪ್ರಕಾರ ಮಾಡಬೇಕು. ಒಬ್ಬರ ಹೆಸರನ್ನು ಸೂಚಿಸಿ ಅವರನ್ನು ಅನುಮೋದಿಸುವ ಮೂಲಕ ನೇಮಕ ಮಾಡುವುದು ಕ್ರಮ.ನಿಮಗೆ ಇಷ್ಟದ ಪ್ರಕಾರ ಆಯ್ಕೆ ಮಾಡುವುದು ಸೂಕ್ತವಲ್ಲ ಎಂದು ಧರ್ಮಪಾಲ ಗೌಡ ಕೊಯಿಂಗಾಜೆ ಮತ್ತು ಗೀತಾ ಕೋಲ್ಚಾರು ಆಕ್ಷೇಪಿಸಿದರು. ಇದಕ್ಕೆ
ಒಪ್ಪಿದ ಆಡಳಿತ ಮಂಡಳಿ ಕಾನೂನಿನ ನಿಯಮದಂತೆ ಸ್ಥಾಯಿ ಸಮಿತಿ ರಚಿಸಿದರು.
ಜಿಲ್ಲಾಡಳಿತದ ಸೂಚನೆಯಂತೆ ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ವಿಧಿಸಿ ಕ್ರಮ ಜರುಗಿಸಲಾಗುವುದು ಎಂದು ಪಿ.ಡಿ.ಒ.ರವರು ತಿಳಿಸಿದರು.
ನೀವು ಪ್ರತಿ ಬಾರಿ ಸಭೆಯಲ್ಲಿ ಕೆಲವೊಂದು ನಿರ್ಣಯ ಕೈಗೊಂಡಾಗ ಮಾಡುತ್ತೇನೆಂದು ಸಬೂಬು ಉತ್ತರ ನೀಡಿ ನಿರ್ಲಕ್ಷ್ಯ ವಹಿಸುತ್ತೀರಿ. ಕೋವಿಡ್ ವಿಷಯದಲ್ಲಿ ಕಾನೂನು ಪ್ರಕಾರ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿ. ಮುಂದಿನ ಸಭೆಯಲ್ಲಿ ನೀವು ಎಷ್ಟರ ಮಟ್ಟಿಗೆ ಕಾರ್ಯ ಪೃವೃತ್ತರಾಗಿದ್ದೀರಿ ಎಷ್ಟು ದಂಡ ವಿಧಿಸಿದ್ದೀರಿ ಎಂಬುದು ಗೊತ್ತಾಗುವುದು ಎಂದು ಧರ್ಮಪಾಲ ರು ಪಿ.ಡಿ.ಒ.ರವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಪಂಚಾಯತ್ ನಲ್ಲಿ ಅಗತ್ಯ ಪಿ.ಪಿ.ಇ.ಕಿಟ್ ತಂದಿರಿಸಬೇಕೆಂದು ಚಂದ್ರಕಾಂತ ಸೂಚನೆ ನೀಡಿದರು.
ಗ್ರಾಮದ ಕೆಲವು ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಕೋಳಿ ಅಂಕ, ಮೈದಾನದಲ್ಲಿ ಕ್ರಿಕೆಟ್ ಆಟಗಳು ನಡೆಯುತ್ತಿದೆ. ಅಧಿಕಾರಿಗಳು ಈ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಸದಸ್ಯರು ಒತ್ತಾಯಿಸಿದರು. ಗ್ರಾಮಕ್ಕೆ ಬೀಟ್ ಪೋಲೀಸರು ಬರುತ್ತಿಲ್ಲ ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸದಸ್ಯರು ತಿಳಿಸಿದರು.ಮೂವರು ಸದಸ್ಯರನ್ನು ಹೊರತು ಪಡಿಸಿ ಉಳಿದ ಎಲ್ಲಾ ಸದಸ್ಯರು ಹಾಜರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.