ಮೇ.31 ರಂದು ಸುಳ್ಯ ಕೆ.ಎಸ್.ಆರ್.ಟಿ.ಸಿ ಸಹಾಯಕ ಸಂಚಾರ ನಿರೀಕ್ಷಕ ಕರುಣಾಕರ ಕರ್ಲಪ್ಪಾಡಿ ನಿವೃತ್ತಿ

Advt_Headding_Middle

 

ಕೆ.ಎಸ್ ಆರ್.ಟಿ.ಸಿ ಪುತ್ತೂರು ವಿಭಾಗದ ಸುಳ್ಯ ಡಿಪೋದಲ್ಲಿ ಸಹಾಯಕ ಸಂಚಾರ ನಿರೀಕ್ಷಕಾರಾಗಿ ಸೇವೆ ಸಲ್ಲಿಸುತ್ತಿರುವ ಅಜ್ಹಾವರ ಗ್ರಾಮದ ಕರ್ಲಪ್ಪಾಡಿಯ ಕರುಣಾಕರರು ಮೇ.31 ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.

ಕರುಣಾಕರರು 15.8.1984ರಲ್ಲಿ ಕ.ರಾ.ರ.ಸಾ ಸಂಸ್ಥೆಯ ಮಂಗಳೂರು ವಿಭಾಗದ ಧರ್ಮಸ್ಥಳ ಘಟಕದಲ್ಲಿ ನಿರ್ವಾಹಕನಾಗಿ ಕೆಲಸಕ್ಕೆ ಸೇರ್ಪಡೆಗೊಂಡು 2 ವರುಷಗಳ ಕಾಲ ಧರ್ಮಸ್ಥಳ ಘಟಕದಲ್ಲಿ ಸೇವೆ ಸಲ್ಲಿಸಿ ಕೋರಿಕೆ ಮೇರೆಗೆ ಮಂಗಳೂರು 1ನೇ ಘಟಕಕ್ಕೆ ವರ್ಗಾವಣೆಗೊಂಡು ಸುಮಾರು 15 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. ನಂತರ ಮಂಗಳೂರು ಹೊಸದಾಗಿ 2ನೇ ಘಟಕಕ್ಕೆ ವರ್ಗಾವಣೆಗೊಂಡು ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸಿ, ನಂತರ ಸಂಚಾರ ನಿಯಂತ್ರಕನಾಗಿ ಮುಂಭಡ್ತಿಗೊಂಡು ಪುತ್ತೂರು ಘಟಕಕ್ಕೆ ವರ್ಗಾವಣೆಯಾಗಿ ಬೆಳ್ಳಾರೆ ಬಸ್ ನಿಲ್ದಾಣದಲ್ಲಿ ಒಂದು ವರ್ಷ ಕರ್ತವ್ಯ ಸಲ್ಲಿಸಿದರು. ನಂತರ ಸುಳ್ಯ ಬಸ್ ನಿಲ್ದಾಣ ಸಂಚಾರ ನಿಯಂತ್ರಕನಾಗಿ ನಂತರ
ಸಹಾಯಕ ಸಂಚಾರ ನಿರೀಕ್ಷಕರಾಗಿ ಭಡ್ತಿಗೊಂಡು ನಿಲ್ದಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ

ಸಂಸ್ಥೆಗೆ ಉತ್ತಮ ಆದಾಯ ತರುವ ನಿರ್ವಾಹಕರೆಂಬ ನೆಲೆಯಲ್ಲಿ ಪ್ರಶಸ್ತಿ, ಉತ್ತಮ ಸಂಚಾರ ನಿಯಂತ್ರಕರೆಂದು ಪ್ರಶಸ್ತಿ ನೀಡಿ ನಿಗಮವು ಗೌರವಿಸಿದೆ.

ಕರುಣಾಕರರು ಅಜ್ಜಾವರ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಇದರ ಉಗ್ರಾಣಾಧಿಕಾರಿಯಾಗಿ ಹಾಗೂ ಕರ್ಲಪ್ಪಾಡಿ ಶ್ರೀ ಮಹಾವಿಷ್ಣು ಮೂರ್ತಿ ದೈವದ ಅರ್ಚಕರಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ.
ಇವರು ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ದಿ ಕೃಷ್ಣಪ್ಪ ಮತ್ತು ಜಾನಕಿ ದಂಪತಿಗಳ ಪುತ್ರ. ಇವರ ಪತ್ನಿ ಶೇಷಮ್ಮ ಗೃಹಿಣಿ ಯಾಗಿದ್ದು, ಮೂವರು ಮಕ್ಕಳಲ್ಲಿ ಪ್ರಥಮ ಪುತ್ರಿ ರೇಖಾ ಎಂ.ಎಸ್ಸಿ, ಬಿ.ಎಡ್ ವಿದ್ಯಾಭ್ಯಾಸ ಮಾಡಿ ಮಂಗಳೂರಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ದ್ವಿತೀಯ ಪುತ್ರಿ ರೇಣುಕಾ ಬಿ.ಎಸ್ಸಿ, ಬಿ.ಎಡ್ ಆಗಿ ಸುಳ್ಯ ಸ.ಪ.ಪೂ. ಕಾಲೇಜಿನಲ್ಲಿ ಅತಿಥಿ ಅಧ್ಯಾಪಿಕೆಯಾಗಿದ್ದಾರೆ. ಪುತ್ರ ರಾಘವೇಂದ್ರ ಡಿಪ್ಲೊಮಾ ಮಾಡಿ ಬೆಂಗಳೂರಿನ ಬಾಶ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.