Breaking News

ಐವರ್ನಾಡಿನಲ್ಲಿ ಗ್ರಾಮ ಸ್ಪಂದನಾ ಸಂವಹನ ಕಾರ್ಯಕ್ರಮ

Advt_Headding_Middle

ಐವರ್ನಾಡು ಗ್ರಾಮ ಪಂಚಾಯತ್, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೇತೃತ್ವದಲ್ಲಿ ಸುದ್ದಿ ಚಾನೆಲ್ ಮಾಧ್ಯಮ ಸಹಯೋಗದಲ್ಲಿ ಗ್ರಾಮಸ್ಪಂದನ ಸಂವಹನ ಕಾರ್ಯಕ್ರಮವು ಇಂದು ಐವರ್ನಾಡಿನಲ್ಲಿ ನಡೆಯಿತು.
ನೇರ ಫೋನ್‌ಇನ್ ಮೂಲಕ ಗ್ರಾಮಸ್ಥರಿಗೆ ಸಮಸ್ಯೆ, ಅಹವಾಲು ಮಂಡಿಸಲು ಅವಕಾಶ ನೀಡಲಾಗಿದ್ದು, ಹಲವು ಮಂದಿ ಕರೆಮಾಡಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಉತ್ತರ ಪಡೆದರು. ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು..ಡಿ.ಶೇಖರ್, ಸೊಸೈಟಿ ಅಧ್ಯಕ್ಷ ಎಸ್.ಎನ್.ಮನ್ಮಥ, ಉಪಾಧ್ಯಕ್ಷ ವಿಕ್ರಂ ಪೈ, ಕಾರ್ಯನಿರ್ವಹಣಾಧಿಕಾರಿ ಸಿ.ಕೆ.ರವಿಪ್ರಸಾದ್ ವೇದಿಕೆಯಲ್ಲಿದ್ದು, ಪ್ರಶ್ನೆಗಳಿಗೆ ಉತ್ತರ ನೀಡಿದರು. ಲೋಕೋಪಯೋಗಿ ಇಲಾಖೆಯ ಎಇಇ ಸಣ್ಣೇಗೌಡ, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಮೋಹನ್ ನಂಗಾರು,   ತೋಟಗಾರಿಕಾ ಇಲಾಖೆಯ ಸಹಾಯಕಿ ನಿರ್ದೇಶಕಿ ಶ್ರೀಮತಿ ಸುಹಾನ, ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ಉಷಾ, ತಾಲೂಕು ಪಂಚಾಯತ್‌ನ ಉದ್ಯೋಗ ಖಾತರಿ ಯೋಜನಾ ವಿಭಾಗದ ನಮಿತಾ, ಆರೋಗ್ಯ ಇಲಾಖೆಯ ವಾಸುದೇವ, ಗ್ರಾಮ ಕರಣಿಕ ಕಾರ್ತಿಕ್ ಮೊದಲಾದವರೂ ಜನರ ಪ್ರಶ್ನೆಗೆ ಉತ್ತರ ನೀಡಿದರು. ಸುದ್ದಿಚಾನೆಲ್ ವಿಭಾಗದ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ ಕಾರ್ಯಕ್ರಮ ನಡೆಸಿಕೊಟ್ಟರು. ಐವರ್ನಾಡು ಭಾಗದ ವರದಿಗಾರ ಗಣೇಶ್ ಕುಕ್ಕುದಡಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.