Breaking News

ಸುಳ್ಯದ ಯುವಕನಿಂದ  ಮಂಗಳೂರು ಪರಿಸರದ ಬಡ ಕೂಲಿ ಕಾರ್ಮಿಕರಿಗೆ  ಅಗತ್ಯವಸ್ತುಗಳ  ಕಿಟ್ ವಿತರಣೆ

Advt_Headding_Middle

ಸುಳ್ಯದ ಜಯನಗರ ನಿವಾಸಿ ಹಿರಿಯ ಆಟೋ ಚಾಲಕ ರಿಚರ್ಡ್ ಕ್ರಾಸ್ತಾರವರ ಪುತ್ರ ಆದರ್ಶ ಕ್ರಾಸ್ತರವರು ಉದ್ಯೋಗದ ನಿಮಿತ್ತ ಮಂಗಳೂರಿನಲ್ಲಿ ನೆಲೆಸಿದ್ದು,  ಲಾಕ್ಡೌನ್ ನ ಈ ಸಂದರ್ಭದಲ್ಲಿ ಅಸಂಘಟಿತ ಕೂಲಿ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದಾರೆ.

ಆದರ್ಶ ಕ್ರಾಸ್ತಾರವರು  ತಮ್ಮ ಸ್ನೇಹಿತರಾದ ನವೀನ್ ಬೋಳೂರು,  ದೇವಪ್ಪ, ಜಯಲಕ್ಷ್ಮಿ  ರೊಂದಿಗೆ ಸೇರಿ ಟೀಮ್ ಸೌಹಾರ್ದ ಎಂಬ  ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ. ರಾಜ್ಯ ದಲಿತ ಮುಖಂಡರಾದ ಅಶೋಕ್ ಕೊಂಚಾಡಿ ರವರ ಮಾರ್ಗದರ್ಶನ ಪಡೆದು ಈ ಸಹಾಯವಾಣಿಯ ಮೂಲಕ ದಾನಿಗಳ ಸಹಕಾರವನ್ನು ಪಡೆದು ಅರ್ಹ ಬಡ ಫಲಾನುಭವಿಗಳನ್ನು ಆಯ್ಕೆ ಮಾಡಿ ಸಾವಿರಕ್ಕೂ ಹೆಚ್ಚು ಆಹಾರಧಾನ್ಯಗಳ ಕಿಟ್ಟನ್ನು ವಿತರಿಸುವ ಮೂಲಕ ಬಡವರಿಗೆ ಆಸರೆಯಾಗಿದ್ದಾರೆ. ಸ್ಥಳೀಯ ಪರಿಸರದ ದಾನಿಗಳ,  ಚರ್ಚಿನ ಫಾದರ್ ಗಳ ಸಹಾಯವನ್ನು ಪಡೆದು ಆಹಾರ ಧಾನ್ಯಗಳ ಕಿಟ್ಟನ್ನು ವಿತರಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ  ಬಿಶಪ್ ರವರಾದ ಪೀಟರ್ ಪೌಲ್ ಸಲ್ಡಾನ ರವರ ಬಳಿ ತಮ್ಮ ಕಾರ್ಯವನ್ನು ಪ್ರಸ್ತಾಪಿಸಿದಾಗ ಅವರು ಸುಮಾರು 3 ಟನ್ನಿನಷ್ಟು ಅಕ್ಕಿ ಹಾಗೂ ದವಸಧಾನ್ಯಗಳನ್ನು  ನೀಡಿ ಇವರ ಕಾರ್ಯಕ್ಕೆ ಪ್ರೋತ್ಸಾಹವನ್ನು ನೀಡಿದ್ದಾರೆ.  ಜಾತಿ ಧರ್ಮ ಭೇದವಿಲ್ಲದೆ  ನೂರಾರು ಕುಟುಂಬಕ್ಕೆ ಸಹಾಯ ಹಸ್ತವನ್ನು ನೀಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.