ಅಮರಮುಡ್ನೂರು ಪಂಚಾಯತ್ ಸಾಮಾನ್ಯ ಸಭೆ

Advt_Headding_Middle

 

ಅಮರಮುಡ್ನೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಮೇ.25 ರಂದು ಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯ ಮೇಲ್ತೋಟ ರವರ ಅಧ್ಯಕ್ಷ ತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಪಂ.ಉಪಾಧ್ಯಕ್ಷೆ ಶಶಿಕಲಾ ಕೇನಡ್ಕ, ಪಿಡಿಒ ಆಕಾಶ್, ಕಾರ್ಯದರ್ಶಿ ದಯಾನಂದ ಪತ್ತುಕುಂಜ ಉಪಸ್ಥಿತರಿದ್ದರು.
ಪರಿಶಿಷ್ಟ ಜಾತಿ ಮತ್ತು ಪ.ಪಂಗಡ ವರ್ಗಕ್ಕೆ ಸೇರಿದ ಕಡು ಬಡವರ ಶವಸಂಸ್ಕಾರ ನೆರವೇರಿಸಲು ಪಂಚಾಯತ್ ನಿಂದ ರೂ.2000/- ಸಹಾಯ ಧನ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಶೇಣಿ ಎಂಬಲ್ಲಿ ವಿವೇಕ ರೈ ಎಂಬವರು ನಿರ್ಮಿಸಿರುವ ಕೊಳವೆ ಬಾವಿ ಕಾನೂನು ಪ್ರಕಾರ ನಿರ್ಮಿಸಲಾಗಿದೆಯೇ? ಕೊರೆಯಲಾದ ಕೊಳವೆ ಬಾವಿಯನ್ನು ಅವರ ಸ್ವಂತ ವರ್ಗ ಜಾಗದಲ್ಲಿ ನಿರ್ಮಿಸಿರುತ್ತಾರೆಯೇ? ಅಥವಾ ಸರಕಾರಿ ಜಾಗದಲ್ಲಿ ಇದೆಯಾ ? ಪಂಚಾಯತ್ ಬೋರ್ ವೆಲ್ ಗಿಂತ ಎಷ್ಟು ಮೀಟರ್ ದೂರದಲ್ಲಿದೆ ಇದರ ಬಗ್ಗೆ ಪರಿಶೀಲನೆ ನಡೆಸಬೇಕು. ಈ ಬಗ್ಗೆ ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲಿಸಬೇಕು ಎಂದು ಸದಸ್ಯ ಅಶೋಕ್ ಚೂಂತಾರು ಆಗ್ರಹಿಸಿದರು.
ಶೇಣಿಯಲ್ಲಿ ಒಬ್ಬರು ಮಾತ್ರ ಕೊಳವೆ ಬಾವಿ ತೆರೆದಿರುವುದು ಅಲ್ಲ. ಹಲವು ಮಂದಿ ತೆಗೆಸಿದ್ದಾರೆ ಹಾಗಿರುವಾಗ ಎಲ್ಲಾ ಬೋರ್ ವೆಲ್ ಗಳನ್ನು ಕಾನೂನು ಪ್ರಕಾರ ಪರಿಶೀಲಿಸಬೇಕು ಎಂದು ಜಯಪ್ರಕಾಶ ದೊಡ್ಡಿಹಿತ್ಲು ಮತ್ತಿತರ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪಿ.ಡಿ.ಒ.ರವರು ಕೂಡಲೇ ಕೊಳವೆ ಬಾವಿಯು ತೆರೆದ ಸ್ಥಳಕ್ಕೆ ತೆರಳಿ ಪರಿಶೀಲಿಸುವುದಾಗಿ ಉತ್ತರಿಸಿದರು.
ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ರವರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡುವ ವ್ಯವಸ್ಥೆ ಆಗಬೇಕು.
ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ ವಾರ್ಡಿನ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಬಗ್ಗೆ ಪ್ರಸ್ತಾಪ ವ್ಯಕ್ತವಾಯಿತು.
ಪಂಚಾಯತ್ ನಲ್ಲಿ ಇಂಟರ್ ನೆಟ್ ಸಮಸ್ಯೆ ಇದೆ. ಪಂಚಾಯತ್ ಆನ್ ಲೈನ್ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದೆ. ಈ ಬಗ್ಗೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಪತ್ರ ಬರೆಯುವ ಬಗ್ಗೆ ತೀರ್ಮಾನಿಸಲಾಯಿತು.
15 ನೇ ಹಣಕಾಸು ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸುವ ಕುರಿತು ಮಾರ್ಗಸೂಚಿಯನ್ನು ಪಿ.ಡಿ.ಒ.ರವರು ತಿಳಿಸಿದರು. ವಾರ್ಡುವಾರು ಹಂಚಿಕೆ ಮಾಡುವುದಾಗಿ ನಿರ್ಣಯಿಸಲಾಯಿತು.
ಗ್ರಾಮಕ್ಕೆ ಹಿಂದೆ ಬೀಟ್ ಪೋಲಿಸ್ ಬರುತ್ತಿದ್ದವರನ್ನು ಏಕಾಏಕಿ ವರ್ಗಾವಣೆ ಮಾಡಲಾಗಿದೆ. ಮತ್ತೆ ಅವರನ್ನು ಬರುವಂತೆ ಮಾಡಬೇಕು ಈ ಬಗ್ಗೆ ಇಲಾಖೆಗೆ ತಿಳಿಸುವಂತೆ ಸದಸ್ಯರು ತಿಳಿಸಿದರು.
ಚಾಮಡ್ಕ ಫಾಲ್ಸ್ ಪ್ರವಾಸಿ ತಾಣದ ಅಭಿವೃದ್ಧಿ ಕಾಮಗಾರಿ ಕೆಲಸ ನಡೆಯುತ್ತಿದೆ. ಲಾಕ್ ಡೌನ್ ಸಂದರ್ಭ ಕೆಲವರು ಪ್ರವಾಸಿ ತಾಣ ವೀಕ್ಷಿಸಲು ಬರುತ್ತಾರೆ. ಇದರಿಂದ ಸಮಸ್ಯೆ ಎದುರಾಗುವುದು. ಸದ್ಯಕ್ಕೆ ಲಾಕ್ ಡೌನ್ ವೇಳೆಯಲ್ಲಿ ಅಲ್ಲಿಗೆ ಪ್ರವೇಶ ನಿರ್ಬಂಧ ಹೇರುವಂತೆ ನಿರ್ಣಯಿಸಲಾಯಿತು. ಒಂದು ವೇಳೆ ಫಾಲ್ಸ್ ಗೆ ತಿರುಗಾಡಿಕೊಂಡು ಬಂದವರು ಕಂಡು ಬಂದಲ್ಲಿ ಅಂತವರ ಮೇಲೆ ಕಾನೂನು ನಿಯಮ ಉಲ್ಲಂಘನೆಯಡಿಯಲ್ಲಿ ದಂಡ ವಿಧಿಸುವುದಾಗಿ ತೀರ್ಮಾನಿಸಲಾಯಿತು. ಸಭೆಯಲ್ಲಿ
ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ಪಂ.ಸಿಬ್ಬಂದಿ ವರ್ಗದವರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.