ಸುಬ್ರಹ್ಮಣ್ಯ: ಅಪ್ರಾಪ್ತೆಯ ಅಪಹರಿಸಿ ಲೈಂಗಿಕ ಕಿರುಕುಳ ಆರೋಪ

Advt_Headding_Middle

 

ಯುವಕನ ಮೇಲೆ ಕೇಸು ದಾಖಲು


ಅಪ್ರಾಪ್ತ ಯುವತಿಯೋರ್ವಳನ್ನು ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಕಾರಣಕ್ಕಾಗಿ ಯುವಕನ ಮೇಲೆ ಕೇಸು ದಾಖಲಿಸಿಕೊಂಡು ಆತನನ್ನು ಬಂಧಿಸಿದ ಘಟನೆ ಸುಬ್ರಹ್ಮಣ್ಯದ ಕುಲ್ಕುಂದದಿಂದ ಮೇ. 27 ರಂದು ವರದಿಯಾಗಿದೆ.
ಸುಬ್ರಹ್ಮಣ್ಯ ಕುಲ್ಕುಂದದ ಪವನ್‌ಕುಮಾರ್ ಎಂಬಾತ ಆರೋಪಿ.
ಯುವತಿ ನೆಟ್ಟಣದ ಬೆಳಿನೆಲೆ ಗ್ರಾಮದವರಾಗಿದ್ದು, ಪ್ರಸ್ತುತ ಕುಲ್ಕುಂದದಲ್ಲಿ ವಾಸವಿರುವುದಾಗಿ ಹೇಳಲಾಗಿದೆ. ಯುವತಿ ಮೇ.೧೯ ರಂದು ಕಾಣೆಯಾಗಿದ್ದು ಪವನ್ ಕುಮಾರ್ ಎಂಬವರೊಂದಿಗೆ ಹೋಗಿರುವ ಸಂಶಯವಿರುವುದಾಗಿ ಯುವತಿಯ ಮನೆಯವರು ಸುಬ್ರಹ್ಮಣ್ಯ ಪೊಲೀಸರಿಗೆ ಮೇ.೨೧ ದೂರು ನೀಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಪವನ್ ಕುಮಾರ್ ಮತ್ತು ಯುವತಿಯನ್ನು ಕುಮುಟಾ ಬಳಿ ಪತ್ತೆ ಹಚ್ಚಿದ್ದು, ಪವನ್‌ಕುಮಾರ್ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ಯುವತಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಾಗಿದ್ದು, ಪವನ್‌ನನ್ನು ವಶಕ್ಕೆ ಪಡೆದರು. ಪೋಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.