ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ರೈತರ ನೆರವಿಗೆ ನಿಂತ ಎಪಿಎಂಸಿ

Advt_Headding_Middle

ಅಡಿಕೆ, ಕಾಳುಮೆಣಸಿಗೆ ಅಡಮಾನ ಸಾಲ ಸೌಲಭ್ಯ

ಕೋವಿಡ್‌ನ ಸಂಕಷ್ಟ ಸಮಯದಲ್ಲಿ ಸುಳ್ಯದ ಎಪಿಎಂಸಿ ರೈತರ ನೆರವಿಗೆ ಮುಂದಾಗಿದೆ. ಅಡಿಕೆ, ಕಾಳುಮೆಣಸಿಗೆ ಅಡಮಾನ ಸಾಲ ಸೌಲಭ್ಯ ನೀಡುವುದರ ಜೊತೆಗೆ ಇನ್ನಿತರ ಯೋಜನೆಗಳನ್ನು ರೈತರಿಗಾಗಿ ನೀಡುತ್ತಿದೆ ಎಂದು ಎಪಿಎಂಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಮಿತಿ ವ್ಯಾಪ್ತಿಯ ಪ್ರಮುಖ ಕೃಷಿ ಉತ್ಪನ್ನಗಳಾದ ಅಡಿಕೆ ಮತ್ತು ಕಾಳುಮೆಣಸುಗಳ ಮೇಲೆ ಅಡಮಾನ ಸಾಲ ಯೋಜನೆ ಜಾರಿಯಲ್ಲಿದೆ. ಉತ್ಪನ್ನಗಳ ಮೌಲ್ಯದ ಶೇಕಡಾ ೬೦ರಷ್ಟು ಅಡಮಾನ ಸಾಲದ ಮೊತ್ತ ಗರಿಷ್ಠ ರೂ.೨.೦೦ ಲಕ್ಷಗಳನ್ನು ೧೮೦ ದಿನಗಳಿಗೆ ನೀಡಲಾಗುತ್ತಿದೆ. ಮೊದಲ ೯೦ ದಿನಗಳಿಗೆ ಬಡ್ಡಿ ರಹಿತವಾಗಿ, ನಂತರದ ದಿನಗಳಿಗೆ ಸಾಲದ ಮೊತ್ತಕ್ಕೆ ಅನುಗುಣವಾಗಿ ರೂ.೨೫,೦೦೦.೦೦ರವರೆಗೆ ಶೇ.೪, ರೂ.೫೦,೦೦೦.೦೦ರವರೆಗೆ ಶೇ.೬, ರೂ.೧.೦೦ಲಕ್ಷದವರೆಗೆ ಶೇ.೮ ಹಾಗೂ ರೂ.೨.೦೦ಲಕ್ಷಗಳಿಗೆ ಶೇ.೧೦ ರಂತೆ ಬಡ್ಡಿ ಪಾವತಿಸಬೇಕಾಗಿರುತ್ತದೆ. ಸುಳ್ಯ ತಾಲ್ಲೂಕು ವ್ಯಾಪ್ತಿಯ ಕೃಷಿಕರು ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬಹುದು.

ಸರಕಾರದ ೨೦೨೦-೨೧ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರವನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ(ನಿ),ಸುಳ್ಯ ಶಾಖೆ ಇವರ ಮೂಲಕ ಸಮಿತಿ ಪ್ರಾಂಗಣದಲ್ಲಿನ ೧೫೦ ಎಂ.ಟಿ.ಸಾಮರ್ಥ್ಯದ ಗೋದಾಮಿನಲ್ಲಿ ತೆರೆಯಲಾಗಿರುತ್ತದೆ. ಸುಳ್ಯ ತಾಲ್ಲೂಕಿನ ಭತ್ತ ಬೆಳೆಯುವ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಮಂಗಳೂರು ಇವರಿಗೆ ಪಡಿತರ ಅಕ್ಷರ ದಾಸೋಹ ಯೋಜನೆಯ ಅಹಾರ ಧಾನ್ಯಗಳನ್ನು ಶೇಖರಣೆ ಮಾಡುವ ಸಲುವಾಗಿ ಸಮಿತಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿನ ೧೫೦ ಎಂ.ಟಿ. ಸಾಮರ್ಥ್ಯದ ಸುಸಜ್ಜಿತ ಗೋದಾಮನ್ನು ಒದಗಿಸಲಾಗಿರುತ್ತದೆ.

ಕೋವಿಡ್-೧೯ ೨ನೇ ಅಲೆಯ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೋಷಣೆಯಾದ ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆ, ಮಾಸ್ ಲಿಮಿಟೆಡ್ ಮತ್ತು ಪ್ರಾಂಗಣದೊಳಗಿನ ಪೇಟೆ ಕಾರ್ಯಕರ್ತರ ಮೂಲಕ ಅಡಿಕೆ ಮತ್ತು ಇತರೆ ಕೃಷಿ ಉತ್ಪನ್ನಗಳನ್ನು ಪೂರ್ವಾಹ್ನ ೬.೦೦ಗಂಟೆಯಿಂದ ೧೦ ಗಂಟೆಯವರೆಗೆ ಖರೀದಿಸಲು ಅವಕಾಶ ಕಲ್ಪಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದೆ ಹಾಗೂ

ಸಮಿತಿಯಲ್ಲಿ ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆ ಜ್ಯಾರಿಯಲ್ಲಿದ್ದು, ೧೮ ರಿಂದ ೬೦ ವರ್ಷದೊಳಗಿನ ವಯೋಮಿತಿಯಲ್ಲಿರುವ ರೈತರು ಮತ್ತು ಆ ಕುಟುಂಬದ ಸದಸ್ಯರು ಕೃಷಿ ಹಾಗೂ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿದ್ದಾಗ ಅಪಘಾತ ಸಂಭವಿಸಿ ಸಾವು, ಅಂಗವಿಲತೆ ಉಂಟಾದಲ್ಲಿ ಅಂತವರು ಸದರಿ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಿದ್ದು ಸಮರ್ಪಕ ದಾಖಲೆಗಳನ್ನು ಒದಗಿಸಿ ಸಾವು ಉಂಟಾದಾಗ ರೂ.೧,೦೦,೦೦೦.೦೦ ಎರಡು ಕೈಗಳು ಅಥವಾ ಎರಡು ಕಾಲುಗಳನ್ನು ಕಳೆದುಕೊಂಡಾಗ ರೂ.೫೦,೦೦೦.೦೦, ಎರಡು ಕಣ್ಣುಗಳನ್ನು ಕಳೆದುಕೊಂಡಾಗ ರೂ.೫೦,೦೦೦.೦೦, ಒಂದು ಕೈ ಅಥವಾ ಒಂದು ಕಾಲನ್ನು ಕಳೆದುಕೊಂಡಾಗ ರೂ.೩೦,೦೦೦.೦೦, ಒಂದು ಕಣ್ಣು ಕಳೆದುಕೊಂಡಾಗ ರೂ.೩೦,೦೦೦.೦೦, ಕೈ ಅಥವಾ ಕಾಲುಗಳ ಬೆರಳುಗಳನ್ನು ಕಳೆದುಕೊಂಡಾಗ ಪ್ರತಿ ಬೆರಳಿಗೆ ರೂ೧೦,೦೦೦.೦೦, ಸೊಂಟ ಮುರಿದಾಗ ರೂ.೫೦,೦೦೦.೦೦ ವಿಮಾ ಪರಿಹಾರ ಪಡೆಯಬಹುದಾಗಿರುತ್ತದೆ.
ಸುಳ್ಯ ಸಮಿತಿಯು ಪ್ರಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ. ಮಂಜೂರಾದ ರಸ್ತೆ ಕಾಮಗಾರಿಗಳನ್ನು ತುರ್ತಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸದಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಅವಶ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರಾಂಗಣದಲ್ಲಿನ ಎಲ್ಲಾ ಗೋದಾಮು-ವ-ಕಟ್ಟಡಗಳು,ವಾಣಿಜ್ಯ ಸಂಕೀರ್ಣದ ಮಳಿಗೆಗಳನ್ನು ನಿಯಮಾನುಸಾರ ಹಂಚಿಕೆ ಮಾಡಲಾಗುತ್ತಿದ್ದು ರೈತರು,ಪೇಟೆ ಕಾರ್ಯಕರ್ತರ ಹಿತದೃಷ್ಠಿಯನ್ನು ಕಾಯ್ದುಕೊಂಡು ಸಂಸ್ಥೆಯನ್ನು ಮುನ್ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.