ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಷಾಯ-ಆಯುಷ್ ಕ್ವಾಥ ಚೂರ್ಣ

Advt_Headding_Middle

ಸತತ ಒಂದುವರೆ ವರ್ಷಗಳಿಂದ ವಿಶ್ವದ ಜನರನ್ನು ಕಾಡುತ್ತಿರುವ ಕೊರೊನಾ ಖಾಯಿಲೆ ಪ್ರಸಕ್ತ ಕೈಮೀರಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಕೊರೊನಾ ರೋಗಕ್ಕೆ ನಿರ್ಧಿಷ್ಟ ಔಷಧಿ ಇಲ್ಲದಿರುವುದು ಚಿಂತನೀಯ ಸಂಗತಿ. ಹಾಗಾಗಿ, ರೋಗ ಬಾರದಿರುವಂತೆ ತಡೆಗಟ್ಟುವುದು ಒಂದು ಸುಲಭ ಚಿಕಿತ್ಸೆ. ಮನುಷ್ಯನ ರೋಗ ನಿರೋಧಕ ಶಕ್ತಿ ಎಷ್ಟು ಹೆಚ್ಚುತ್ತದೆಯೊ ಅಷ್ಟು ಸಮಯ ಆತ ರೋಗದ ವಿರುದ್ಧ ಹೋರಾಡಬಹುದು.

ಏನಿದು ರೋಗ ನಿರೋಧಕ ಶಕ್ತಿ?:
ರೋಗವನ್ನು ಪ್ರತಿರೋಧಿಸುವ ಸಾಮರ್ಥ್ಯಕ್ಕೆ ರೋಗನಿರೋಧಕ ಶಕ್ತಿ ಎನ್ನುತ್ತೇವೆ.ನಮ್ಮ ದೇಹಕ್ಕೆ ವೈರಸ್ ಗಳಂತಹ ಯಾವುದೇ ಸೂಕ್ಷ್ಮಣು ಜೀವಿ ದಾಳಿ ಮಾಡಿದಾಗ ಅದನ್ನು ಗುರುತಿಸಿ, ಹೊಡೆದು ಹಾಕುವ ಕೆಲಸವನ್ನು ರೋಗ ನಿರೋಧಕ ಶಕ್ತಿ ಮಾಡುತ್ತದೆ. ಒಳ್ಳೆಯ ಆಹಾರಾಭ್ಯಾಸ,ಆರೋಗ್ಯಯುತ ನೈಸರ್ಗಿಕ ಜೀವನ ಶೈಲಿಯನ್ನು ಹೊಂದಿರುವವರಲ್ಲಿ ಉತ್ತಮ ರೋಗ ನಿರೋಧಕ ಶಕ್ತಿ ಇರುತ್ತದೆ.

ಕಷಾಯ ಎಂದರೇನು?:
ಪ್ರಾಚೀನ ಆಯುರ್ವೇದ ವಿಜ್ಞಾನದ ಪ್ರಕಾರ ಕಷಾಯ ಎಂದರೆ, ಒಂದು ಭಾಗ ದ್ರವ್ಯವನ್ನು16 ಭಾಗ ನೀರಿನೊಂದಿಗೆ ಸೇರಿಸಿ ಇದನ್ನು ಕುದಿಸಿ ಅದರ ಅರ್ಧ ಪ್ರಮಾಣಕ್ಕೆ ತರುವ ವಿಧಾನವನ್ನು ಕಷಾಯ ಎನ್ನುತ್ತಾರೆ.

ಆಯುಷ್ ಕ್ವಾಥ ಚೂರ್ಣ ಕಷಾಯ ತಯಾರಿಸುವ ವಿಧಾನ:
ಆಯುಷ್ ಇಲಾಖೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ತಯಾರಿಸಿದ ಔಷಧೀಯೆ ಆಯುಷ್ ಕ್ವಾಥ ಚೂರ್ಣ ಕಷಾಯ ಪುಡಿ. ಇದನ್ನು ಮನೆಯಲ್ಲಿಯೇ ತಯಾರಿಸಬಹುದು. 4 ಭಾಗದಷ್ಟು ಒಣಗಿಸಿದ ತುಳಸಿ ಎಲೆ, ದಾಲ್ಚಿನ್ನಿ ಒಣಶುಂಠಿ ತಲಾ 2ಭಾಗ ಹಾಗು 1ಭಾಗ ಕರಿಮೆಣಸು ಈ ನಾಲ್ಕು ಪದಾರ್ಥಗಳನ್ನು ಇದೇ ಅನುಪಾತದಲ್ಲಿ ಸೇರಿಸಿ ಚೆನ್ನಾಗಿ ಪುಡಿ ಮಾಡಿ ಒಂದು ಗಾಜಿನ ಬಾಟಲಿಯಲ್ಲಿ ಶೇಖರಿಸಿಟ್ಟುಕೊಳ್ಳಬೇಕು.ನಂತರ, ಕಾಲು ಚಮಚ ಕಷಾಯ ಪುಡಿಯನ್ನು 150ಮಿಲಿ ನೀರಿನಲ್ಲಿ 5-10 ನಿಮಿಷಗಳ ಕಾಲ ಕುದಿಸಿ ಸೋಸಿ. ಬೇಕಿದ್ದರೆ ಬೆಲ್ಲ ಅಥವಾ ನಿಂಬೆರಸವನ್ನು ಸೇರಿಸಬಹುದು. ಹೀಗೆ ದಿನಕ್ಕೆ ಒಂದು ಅಥವಾ ಎರಡು ಬಾರಿ 15-20ಮಿಲಿನಷ್ಟು ಕುಡಿಯಿರಿ.

ಪ್ರಯೋಗಗಳು:
-ವೈಜ್ಞಾನಿಕ ಅಧ್ಯಯನದ ಪ್ರಕಾರ ಆಯುಷ್ ಕ್ವಾಥ ಚೂರ್ಣದಲ್ಲಿ ಸೇರಿಸಿರುವ ಗಿಡ ಮೂಲಿಕೆಗಳು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.ಜೊತೆಗೆ, ಆಂಟಿ ವೈರಲ್,ಆಂಟಿ ಇನ್ ಫ್ಲಮೇಟರಿ (ನಂಜು ನಿವಾರಕ), ಪ್ಲೇಟ್ ಲೇಟ್ ಪ್ರತಿರೋಧಕ, ಮೂತ್ರಕೋಶದ ರಕ್ಷಣಾತ್ಮಕ ಗುಣ,ಯಕೃತ್ತ್ ನ ರಕ್ಷಣಾತ್ಮಕ ಗುಣವನ್ನು ಹೊಂದಿದೆ ಎಂದು ತಿಳಿದು ಬಂದಿದೆ.
-ತುಳಸಿ,ದಾಲ್ಚಿನ್ನಿ,ಕರಿಮೆಣಸುಗಳು ಅ್ಯಂಟಿ ಓಕ್ಸಿಡೆಂಟ್ ಅಂಶವನ್ನು ಹೊಂದಿರುವುದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
-ತುಳಸಿ, ಶುಂಠಿ, ದಾಲ್ಚಿನ್ನಿ ಗಳು ಆಂಟಿ ಅಲರ್ಜಿಕ್ ಅಂಶವನ್ನು ಹೊಂದಿರುವುದರಿಂದ ಕಫ ಸಂಬಂಧಿರೋಗವನ್ನು ದೂರಮಾಡುತ್ತದೆ.
-ಆಯುರ್ವೇದದ ಪ್ರಕಾರ, ಆಯುಷ್ ಕ್ವಾಥ ದೇಹದ ಏಳು ಧಾತುಗಳು ಅಥವಾ ಅಂಗಾಂಶಗಳನ್ನು ಸಮತೋಲನದಲ್ಲಿರಿಸುತ್ತದೆ ಎಂದು ಹೇಳಲಾಗಿದೆ.
-ಕರಿಮೆಣಸು ದೇಹದ ಕಲ್ಮಶವನ್ನು ಹೊರ ಹಾಕುವ ಶಕ್ತಿಯನ್ನು ಹೊಂದಿದೆ. ಹಾಗಾಗಿ,ದೇಹವನ್ನು ಆರೋಗ್ಯದಿಂದಿರಿಸಲು ಸ ಹಾಯ ಮಾಡುತ್ತದೆ.
ಹಾಗೇ ನೋಡಿದರೆ ನಮ್ಮ ಅಡುಗೆ ಮನೆಯೇ ಸಣ್ಣ ಔಷಧಾಲಯ ಇದ್ದ ಹಾಗೆ.ಅಲ್ಲಿ ದೊರೆಯುವ ಓಂಕಾಳು, ಲವಂಗ,ಅರಶಿನ ಪುಡಿ,ಪುದಿನಾ ಸೊಪ್ಪುಗಳನ್ನು ಅಮೃತಬಳ್ಳಿ,ಅಶ್ವಗಂಧ,ನೆಲನೆಲ್ಲಿಯ ಜೊತೆಗೆ ಸರಿ ಪ್ರಮಾಣದಲ್ಲಿ ಸೇರಿಸಿ ಕಷಾಯ ತಯಾರಿಸಿ ಕುಡಿಯುವುದು. ಇದು ಕೂಡ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಾಯಕಾರಿ.

ಡಾ|| ಗ್ರೀಷ್ಮಾ ಗೌಡ ಆರ್ನೋಜಿ
ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಆಂಡ್ ಯೋಗಿಕ್ ಸೈನ್ಸ್, ಮೂಡಬಿದರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.