ಐವರ್ನಾಡು ಗ್ರಾಮ ಪಂಚಾಯತ್ : ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳು ಕೊರೋನಾ ಹರಡದಂತೆ ಮುಂಜಾಗ್ರತೆ ವಹಿಸಲು ಮನವಿ

Advt_Headding_Middle

 

 

ನಗರ ಪ್ರದೇಶದಲ್ಲಿ ವ್ಯಾಪಕವಾಗಿದ್ದ ಕೊರೋನಾ ಇದೀಗ ಗ್ರಾಮೀಣಾ ಪ್ರದೇಶದಲ್ಲಿ ಹೆಚ್ಚಾಗಿ ಹರಡುತ್ತಿದ್ದು ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು ಈವರೆಗೆ 19 ಪ್ರಕರಣಗಳು ದಾಖಲಾಗಿರುತ್ತದೆ . ಮೇ.28 ರಂದು ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಸಿ.ಆರ್.ಸಿ ಪರಿಸರದ ನಿವಾಸಿಯೊಬ್ಬರು ಕೊರೋನಾ ಸೋಂಕಿನಿಂದ ಮೃತಪಟ್ಟಿರುತ್ತಾರೆ. ಈ ಹಿನ್ನೆಲೆಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ನಾಗರಿಕರು,ನಿವಾಸಿಗಳು ಕೊರೋನಾ ವೈರಸ್ ಹರಡದಂತೆ ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು.
1. ಜ್ವರ, ಶೀತ ಹಾಗೂ ಕೆಮ್ಮು ಹಾಗೂ ಗಂಟಲು ನೋವಿನ ಲಕ್ಷಣಗಳಿರುವವರು ಕೂಡಲೇ ಕೋವಿಡ್ ಪರೀಕ್ಷೆಯನ್ನು ಮುಂಚಿತವಾಗಿ ಮಾಡಿಸಿಕೊಳ್ಳುವುದು.
2. ಕೊರೋನಾ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರು ಹಾಗೂ ಕೋವಿಡ್ ರೋಗ ಲಕ್ಷಣಗಳಿರುವವರು ಕೋವಿಡ್ ಟೆಸ್ಟನ್ನು ಮಾಡಿಸಿಕೊಳ್ಳುವುದು.ಈ ಬಗ್ಗೆ ಗ್ರಾಮ ಪಂಚಾಯತ್ ವಾರ್ಡಿನ ಸದಸ್ಯರು, ಆಶಾ ಕಾರ್ಯಕರ್ತೆಯರು,ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡುವುದು.ಕೋವಿಡ್ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವವರು ಯಾವುದೇ ರೋಗ ಲಕ್ಷಣಗಳು ಇಲ್ಲದವರು 14 ದಿನಗಳ ಕಾಲ ಹೋಂ ಕ್ವಾರಂಟೈನ್ ಗೆ ಒಳಗಾಗುವುದು ಹಾಗೂ ಈ ಅವಧಿಯಲ್ಲಿ ಗರ್ಭಿಣಿಯರು,ವೃದ್ದರು ಹಾಗೂ ಮಕ್ಕಳಿಂದ ಪ್ರತ್ಯೇಕ ಕೊಠಡಿಯಲ್ಲಿ ಇರತಕ್ಕದ್ದು. ಹಾಗೂ ನಿಮ್ಮ ಕೋಣೆಯನ್ನು ಬಿಟ್ಟು ಮನೆಯ ಇತರ ಜಾಗದಲ್ಲಿ ಓಡಾಡುವುದನ್ನು ನಿರ್ಬಂಧಿಸುವುದು.
3. ಹ್ಯಾಂಡ್ ವಾಷ್ ಅಥವಾ ಹ್ಯಾಂಡ್ ಸ್ಯಾನಿಟೈಸರ್ ನಿಂದ ಆಗಾಗ ಕೈಗಳನ್ನು ತೊಳೆದುಕೊಳ್ಳುವುದು.
4. ಮನೆಯಲ್ಲಿ ಸತತವಾಗಿ ಮಾಸ್ಕ್ ಧರಿಸಿ 6-8 ಗಂಟೆಗೊಮ್ಮೆ ಮಾಸ್ಕ್ ಬದಲಾಯಿಸಿ ಬಳಸಲ್ಪಟ್ಟ ಮಾಸ್ಕ್ ಮುಚ್ಚಿದ ಡಸ್ಟ್ ಬಿನ್ ಗೆ ಹಾಕಿ ಯಾರೂ ಮುಟ್ಟದಂತೆ ಎಚ್ಚರವಹಿಸಿ.
5. ಹೋಂ ಕ್ವಾರಂಟೈನ್ ಗೆ ಒಳಗಾದವರು 14 ದಿನಗಳಲ್ಲಿ ನೆಗಡಿ, ಕೆಮ್ಮು ,ಜ್ವರ ಅಥವಾ ಗಂಟಲು ನೋವು ಕಂಡುಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹಾಗೂ ಗ್ರಾಮ ಪಂಚಾಯತಿಗೆ ಮಾಹಿತಿ ನೀಡಿ .
“ನಿಮ್ಮನ್ನು ನೀವು ಪ್ರತ್ಯೇಕಿಸಿ ಕೊಳ್ಳಿ ಕೊರೋನಾ ವಿರುದ್ದದ ಸಮರದಲ್ಲಿ ಕೈ ಜೋಡಿಸಿ”
6. ಕೊರೋನಾ ಸೋಂಕಿತರು ತಮ್ಮ ಮನೆಗಳಲ್ಲಿ ಪ್ರತ್ಯೇಕವಾಗಿ ಇರುವುದಕ್ಕೆ ಅವಕಾಶವಿಲ್ಲದಿದ್ದಲ್ಲಿ ಅಂತವರು ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗುವುದು. ಈ ಬಗ್ಗೆ ಗ್ರಾಮ ಪಂಚಾಯತ್ ನ್ನು ಸಂಪರ್ಕಿಸುವಂತೆ ಕೋರಿದೆ.
7. ಹೋಂ ಐಸೋಲೇಷನ್ ನಲ್ಲಿರುವ ವ್ಯಕ್ತಿಯು ತಮ್ಮ ಕೋಣೆಯಲ್ಲಿಯೇ ಇರುವುದು. ತಮ್ಮ ಮನೆಯವರಿಂದ ಕನಿಷ್ಟ 2 ಮೀಟರ್ ಅಥವಾ 6 ಅಡಿ ಅಂತರ ಕಾಪಾಡಬೇಕು. ಅಧಿಕ ರಕ್ತದೊತ್ತಡ ,ಹೃದಯದ ಸಮಸ್ಯೆಯಿಂದ ಬಳಲುತ್ತಿರುವವರಿಂದ ದೂರವಿರುವುದು.
8. ಹೋಂ ಐಸೋಲೇಷನ್ ನಲ್ಲಿರುವವರು ವಿಶ್ರಾಂತಿ ಪಡೆಯಬೇಕು.ನೀರನ್ನು ಬಿಸಿ ಮಾಡಿ ಕುದ್ದು ತಣ್ಣಗಾದ ನಂತರ ಕುಡಿಯುವುದು ಸೂಕ್ತ . ಕೆಮ್ಮುವಾಗ ಹಾಗೂ ಸೀನುವಾಗ ಟಿಶ್ಯೂ ಪೇಪರ್ ಅಥವಾ ಕರವಸ್ತ್ರ ಬಳಸಬೇಕು ಹಾಗೂ ಸತತ 40 ಸೆಕೆಂಡುಗಳ ಕಾಲ ಕೈಗಳನ್ನು ಸೋಪು ಬಳಸಿ ತೊಳೆದುಕೊಳ್ಳಬೇಕು ಆಲ್ಕೋಹಾಲ್ ಯುಕ್ತ ಸ್ಯಾನಿಟೈಸರ್ ನ್ನು ಬಳಸಬೇಕು.
9. ನಿಯಮಿತವಾಗಿ ಬಳಸುವ ಅಥವಾ ಮುಟ್ಟುವ ಜಾಗಗಳನ್ನು ಎಂದರೆ ಟೇಬಲ್ ,ಬಾಗಿಲ ಚಿಲಕ ಸ್ವಿಚ್ಚನ್ನು 7% ಲೈಸಾಲ್ ಅಥವಾ 1% ಸೋಡಿಯಂ ಹೈಪೋಕ್ಲೋರೈಡ್ ಸೊಲ್ಯೋಷನ್ ಹಾಕಿ ಶುಚಿ ಮಾಡಬೇಕು ಮನೆಯ ಟಾಯ್ಲೆಟನ್ನು ದಿನದಲ್ಲಿ ಒಂದು ಬಾರಿಯಾದರು ಸೋಪು ವಾಟರ್ ನಿಂದ ಸ್ವಚ್ಚಗೊಳಿಸಬೇಕು .ತಮ್ಮ ಆರೋಗ್ಯದ ವರದಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಐವರ್ನಾಡು ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡಬೇಕು ಆರೋಗ್ಯದ ವ್ಯತ್ಯಾಸ ಕಂಡುಬಂದಲ್ಲಿ ಕೂಡಲೇ ವೈದ್ಯರಿಗೆ ಮಾಹಿತಿ ನೀಡಬೇಕು.
10. ಕೋವಿಡ್ ಸೋಂಕಿನಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಕೋವಿಡ್ ಲಕ್ಷಣ ಕಂಡುಬಂದ ಕೂಡಲೇ ಕೋವಿಡ್ ತಪಾಸಣೆಯನ್ನು ಹತ್ತಿರದ ಆರೋಗ್ಯಕೇಂದ್ರದಲ್ಲಿ ಅಥವಾ ಕೋವಿಡ್ ತಪಾಸಣೆ ಕೇಂದ್ರಕ್ಕೆ ತೆರಳಿ ಮಾಡಿಸಿಕೊಳ್ಳಬೇಕು.
ಆದ್ದರಿಂದ ಐವರ್ನಾಡು ಗ್ರಾಮ ಪಂಚಾಯತದ ಎಲ್ಲಾ ನಿವಾಸಿಗಳು ಕೊರೋನಾ ಸೋಂಕನ್ನು ತಡೆಗಟ್ಟಲು ಪಾಲಿಸಬೇಕಾದ ಎಲ್ಲಾ ಸಮುಚಿತ ಅಂಶಗಳನ್ನು ಪಾಲನೆ ಮಾಡುವಂತೆ ಈ ಮೂಲಕ ತಿಳಿಯಪಡಿಸಿದೆ.ಹಾಗೂ ಕ್ವಾರೆಂಟೈನ್ ಅವಧಿಯಲ್ಲಿ ಅವಶ್ಯಕ ಸಾಮಾಗ್ರಿ ಪೂರೈಕೆಯಲ್ಲಿ ತೊಂದರೆಯಿದ್ದಲ್ಲಿ ಐವರ್ನಾಡು ಕೃಷಿ ಪತ್ತಿನ ಸಹಕಾರಿ ಸಂಘ ಅಥವಾ ಗ್ರಾಮ ಪಂಚಾಯತ್ ನ್ನು ಪೋನ್ ಮೂಲಕ ಸಂಪರ್ಕಿಸಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ತಿಳಿಸಿದ್ದಾರೆ.6

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.