Breaking News

ಬೆಳ್ಳಿಪ್ಪಾಡಿ: ಬಿ.ಎಸ್.ಎನ್.ಎಲ್. ಟವರ್ ಸ್ತಬ್ಧ

Advt_Headding_Middle

 

ಕರ್ನಾಟಕ-ಕೇರಳ ಗಡಿಪ್ರದೇಶದಲ್ಲಿ ತೀವ್ರಗೊಂಡ ನೆಟ್ ವರ್ಕ್ ಸಮಸ್ಯೆ
ಕರ್ನಾಟಕ-ಕೇರಳ ಗಡಿಪ್ರದೇಶವಾದ ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿಯಲ್ಲಿರುವ ಬಿ.ಎಸ್.ಎನ್.ಎಲ್. ಟವರ್ ಸ್ಥಬ್ದಗೊಂಡಿದ್ದು, ಗಡಿಪ್ರದೇಶದ ಜನತೆ ನಿರಂತರ ನೆಟ್ ವರ್ಕ್ ಸಮಸ್ಯೆ ಎದುರಿಸುವಂತಾಗಿದೆ.

ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿಯಲ್ಲಿ ಸುಮಾರು ಇಪ್ಪತ್ತು ವರ್ಷಕ್ಕೂ ಹಿಂದೆ ಬಿ.ಎಸ್.ಎನ್.ಎಲ್. ಟವರ್ ನಿರ್ಮಾಣಗೊಂಡಿದ್ದು, ಈ ಟವರ್ ಮೂಲಕ ಕರ್ನಾಟಕದ ಕನಕಮಜಲು, ಜಾಲ್ಸೂರು, ಮಂಡೆಕೋಲು, ಅಜ್ಜಾವರ ಸೇರಿದಂತೆ ದೇಲಂಪಾಡಿ ಗ್ರಾಮ ವ್ಯಾಪ್ತಿಯ ಜನರು ನೆಟ್ ವರ್ಕ್ ಸೇವೆ ಬಳಸುತ್ತಿದ್ದರು. ಆದರೆ ಇತ್ತೀಚೆಗೆ ವಿದ್ಯುತ್ ಪೂರೈಕೆ ಇಲ್ಲದಿದ್ದರೆ ಟವರ್ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತಿತ್ತು. ಆದರೆ ಇದೀಗ ಕಳೆದ ಕೆಲ ದಿನಗಳಿಂದ ವಿದ್ಯುತ್ ಪೂರೈಕೆ ಇದ್ದರೂ ಟವರ್ ಸ್ತಬ್ಧಗೊಂಡಿದ್ದು, ಇದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಮನಹರಿಸಿ, ಸಮಸ್ಯೆ ಬಗೆಹರಿಸಬೇಕಾಗಿದೆ.
ಈ ಭಾಗದ ಶೇಕಡಾ 75ರಷ್ಟು ಜನತೆ ಬಿ.ಎಸ್.ಎನ್.ಎಲ್. ಮೊಬೈಲ್ ಸೇವೆಯನ್ನೇ ನಂಬಿದ್ದು, ಇದೀಗ ನೆಟ್ ವರ್ಕ್ ಸಮಸ್ಯೆ ತೀವ್ರಗೊಂಡಿದ್ದು, ಅಧಿಕಾರಿಗಳು ಇದರತ್ತ ಗಮನಹರಿಸಬೇಕಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.