ಮಹಾಮಾರಿಗೆ ಬಲಿಯಾದ ಶಿಕ್ಷಣ : ಪ್ರಜ್ಞಾ ಎನ್ . ರೈ ಗೂಡಂಬೆ

Advt_Headding_Middle

ಮನೆಯೇ ಮೊದಲ ಪಾಠ ಶಾಲೆ ಎಂಬ ಮಾತಿದೆಯಾದರು ಮಗುವಿನ ಸರ್ವ ತೋಮುಖ ಬೆಳವಣಿಗೆಯಾಗುವುದು ಶಾಲೆಯಲ್ಲಿಯೆ. ಕೇವಲ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಿರದೆ ಸಾಂಸ್ಕೃತಿಕ , ಕ್ರೀಡೆ ಇನ್ನಿತರ ಕ್ಷೇತ್ರಗಳಲ್ಲಿ ಕೂಡಾ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಂಡು ಸಹಪಾಠಿಗಳೊಂದಿಗೆ ಬಾಲ್ಯವನ್ನು ಅತ್ಯಂತ ಆನಂದವಾಗಿ ಕಳೆಯುತ್ತಾರೆ. ಶಾಲಾ ವಠಾರ ಒಂದು ಅದ್ಭುತ ಪ್ರಪಂಚ. ಸದಾ ಗದ್ದಲಗಳಿಗೆ ಕಿವಿಯಾಗಿರೋ ಗೋಡೆಗಳಿಂದು ಮೌನವಾಗಿ ರೋಧಿಸುತ್ತಿವೆ. ವಿದ್ಯಾರ್ಥಿಗಳ ಕೈಯಲ್ಲಿ ನಜ್ಜುಗುಜ್ಜಾಗಿತಿರೋ ಕ್ರೀಡಾ ಪರಿಕರಗಳು ಮೂಲೆಗುಂಪಾಗಿವೆ. ಸಮಯಕ್ಕೆ ಸರಿಯಾಗಿ ಢಣ ಧಣಿಸುತ್ತಿದ್ದ ಗಂಟೆ ಸ್ತಬ್ದವಾಗಿ ನಿಂತಿದೆ. ತನ್ನ ಮೇಲೆ ಸದಾ ಪೆನ್ನು , ಕೈವಾರಗಳಿಂದ ಗೀಚಿಸಿಕೊಳ್ಳುತ್ತಿರೋ ಬೆಂಚು ಡೆಸ್ಕ್ ಗಳು ಅನಾಥವಾಗಿವೆ. ಇದಿಷ್ಟು ನಿರ್ಜಿವ ವಸ್ತುಗಳ ಗೋಳಾದರೆ ಸದಾ ಕೀಟಲೆಯೊಂದಿಗೆ ಬೆರಗುಗಣ್ಣಿನಿಂದ ಪಾಠ ಆಲಿಸುತ್ತಿರೋ ಆ ಮುಗ್ದ ಪುಟಾಣಿಗಳಿಂದು ನೀರಸವಾಗಿ ಮೊಬೈಲ್ ಮುಂದೆ ಸಜೀವಗೊಂಬೆಗಳಾಗಿದ್ದಾರೆ. ಸೀಮೆ ಸುಣ್ಣದ ಬಿಳುಪನೊಂದಿಗೆ ಕರಿಹಲಗೆಯಲ್ಲಿ ಗೀಚುತ್ತಿರೋ ಶಿಕ್ಷಕರ ಕೈಗಳಿಂದು ಸಹಾಯ ಹಸ್ತ ಚಾಚುತ್ತಿವೆ. ಅದೇಷ್ಟೋ ವೈದ್ಯರು, ವಿಜ್ಞಾನಿಗಳು ‘ ತಂತ್ರಜ್ಞರು ಸೈನಿಕರಾಗಲು ದಾರಿದೀಪವಾಗಿರೋ ಶಿಕ್ಷಕ ವೃತ್ತಿಯಲ್ಲಿರೋ ಶಿಕ್ಷಕರ ಬದುಕಿನ ಹಾದಿ ಕತ್ತಲ ಕೂಪವಾಗಿದೆ. ಶಿಕ್ಷಕ ವೃತ್ತಿಯೆಂಬುದು ಒಂದು ಗೌರವಯುತವಾದ ನಿಸ್ವಾರ್ಥ ಕೆಲಸ. ಯಾವುದೇ ಲಂಚ ., ಸ್ವಾರ್ಥಗಳಿಗೆ ಎಡೆಯಿಲ್ಲದೆ ಮಣ್ಣಿನ ಮುದ್ದೆಗೆ ಮೂರ್ತಿ ರೂಪವನ್ನು ನೀಡುವ ಜವಬ್ದಾರಿ ಪ್ರತಿಯೊಬ್ಬ ಶಿಕ್ಷಕನಾಗಿರುತ್ತದೆ. ಅಮ್ಮ ಎಂಬ ಜ್ಞಾನದಪುಟ್ಟ ಪ್ರಪಂಚದಿಂದ ಶಾಲಾ ಮೆಟ್ಟಿಲಿಗೆ ಹೆಜ್ಜೆಯಿಡೋ ಪುಟಾಣಿ ತನ್ನ ಜೀವನದ ಗುರಿಯನ್ನು ತಲುಪಲು ಪ್ರತಿಯೊಂದು ಹೆಜ್ಜೆಗು ಕಣ್ಗಾವಲಾಗಿದ್ದು ಆತನನ್ನು ದಡ ಸೇರಿಸುವಲ್ಲಿ ಪೋಷಕರೊಂದಿಗೆ ಸರಿಸಮಾನ ಹೆಚ್ಚೆಯನಿಡುವವರೆಂದರೆ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು. ಪ್ರಪಂಚದ ಬೆನ್ನೆಲುಬುಗಳಾಗಿರೋ ಶಿಕ್ಷಣ ಸಂಸ್ಥೆ ಕುಸಿತದ ಹಂತದಲ್ಲಿದೆ. ಕೊರೋನಾ ಮಹಾಮಾರಿಗೆ ಬಲಿಯಾದ ಉಳಿದೆಲ್ಲವುಗಳನ್ನು ಮತ್ತೆ ಸರಿಪಡಿಸಿಕೊಳ್ಳಬಹುದು. ಆದರೆ ಶಿಕ್ಷಣ ಕ್ಷೇತ್ರದ ಪರಿಸ್ಥಿತಿ ಕೈಮೀರಿದೆ. ಪರೀಕ್ಷೆ ಇಲ್ಲದೆ ಉತ್ತೀರ್ಣರಾಗಿರೋ ವಿದ್ಯಾರ್ಥಿಗಳು ಒಂದೆಡೆಯಾದರೆ ದ್ವಿತೀಯ ಪಿಯುಸಿ ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳ ಪಾಡು ಅಯ್ಯೋ ಎನಿಸುತ್ತಿದೆ. ಏಕೆಂದರೆ ಪ್ರತಿ ವರ್ಷ ಮೇ ತಿಂಗಳಲ್ಲಿ ವಿದ್ಯಾರ್ಥಿಗಳು ಫಲಿತಾಂಶದ ಸಂಭ್ರಮದೊಂದಿಗೆ ಮುಂದಿನ ಕಾಲೇಜ್ ಜೀವನದ ಕನಸುಗಳಿಗೆ ಬಣ್ಣ ಬಳಿಯುತ್ತಿದ್ದರು. ಆದರೆ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯ ಗೊಂದಲದಲ್ಲಿ ಬಿದ್ದು ಇದು ರಜಾ ದಿನಗಳಲ್ಲ ಸಜಾ ದಿನಗಳು ಎಂಬಂತಾಗಿದೆ. ಒಂದಷ್ಟು ವಿದ್ಯಾರ್ಥಿಗಳು ಯಾರದೋ ಬಲವಂತದಿಂದ ಆನ್ ಲೈನ್ ಮುಂದೆ ಕುಳಿತರೆ ಕೆಲವರು ಶೈಕ್ಷಣಿಕ ವಿಷಯವನ್ನು ಮರೆತು ಬಿಟ್ಟು ಸಾಮಾಜಿಕ ಜಾಲತಾಣಗಳಿಗೆ ಬಲಿಯಾಗುತ್ತಿದ್ದಾರೆ. ಯಾವಾಗಲೂ ಬೇಸಿಗೆ ರಜೆಗೆ ಹಂಬಲಿಸುತಿರೋ ವಿದ್ಯಾರ್ಥಿಗಳು ಶಾಲಾ ಪುನರಾರಂಭದ ನಿರೀಕ್ಷೆಯಲ್ಲಿದ್ದಾರೆ. ಪೋಷಕರು ಮಕ್ಕಳ ಭವಿಷ್ಯದ ಕುರಿತು ಚಿಂತಿತರಾಗಿದ್ದಾರೆ. ಇವೆಲ್ಲದರ ನಡುವೆ ತಮ್ಮೆಲ್ಲ ನೋವನ್ನು ನುಂಗಿ ಮುಂಬರುವ ಪರೀಕ್ಷೆಯ ನಿರೀಕ್ಷೆಯಲ್ಲಿ ಶಿಕ್ಷಕರು ಆನ್ ಲೈನ್ ಶಿಕ್ಷಣದ ಮೂಲಕ ವಿದ್ಯಾರ್ಥಗಳನ್ನು ತಲುಪುವ ಪ್ರಯತ್ನದಲ್ಲಿದ್ದಾರೆ. ಇವೆಲ್ಲವುಗಳಿಗೆ ಆದಷ್ಟು ಬೇಗ ಪರಿಹಾರ ದೊರೆತು ಮೊದಲಿನಂತೆ ಜ್ಞಾನಮಂದಿರಗಳಲ್ಲಿ ಸಂಭ್ರಮದ ಜ್ಯೋತಿ ಬೆಳಗಲಿ . ಸದಾ ಮುಗ್ಧ ಜೀವಿಗಳಿಂದ ಸಂಭ್ರಮಿಸೋ ಶೈಕ್ಷಣಿಕ ಸಂಸ್ಥೆಗಳು ಮತ್ತೆ ಹೊಸದಾಗಿ ಬಿರಿದ ಸುಮದಂತೆ ನಳನಳಿಸಲಿ ಎ೦ದು ಆಶಿಸೋಣ.

ಪ್ರಜ್ಞಾ ಎನ್ . ರೈ
ಗೂಡಂಬೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.