ಕಾನತ್ತಿಲ ವಿದ್ಯುತ್ ಲೈನ್ ಗಳಿಗೆ ಅಡ್ಡಿಯಾದ ಮರಗಳ ಕೊಂಬೆಗಳ ತೆರವು- ಬದಲಿ ಟ್ರಾನ್ಸ್ ಫಾರ್ಮ್ ಅಳವಡಿಕೆ

Advt_Headding_Middle

 

ಜಟ್ಟಿಪಳ್ಳ – ಕಾನತ್ತಿಲ ರಸ್ತೆ ಬದಿ ಇರುವ ಕರೆಂಟ್ ಲೈನಿಗೆ ತಾಗುವ ಕಾಡು ಕಡಿಯುವ ಶ್ರಮದಾನ ಕಾರ್ಯಕ್ರಮ ಮತ್ತು ವಿದ್ಯುತ್ ವ್ಯತ್ಯಯ ಸಮಸ್ಯೆಗೆ ಪರಿಹಾರವಾಗಿ ಕಾನತ್ತಿಲ ಭಾಗಕ್ಕೆ ವಿದ್ಯುತ್ ಪೂರೈಕೆಯಾಗುವ ಟ್ರಾನ್ಸ್ ಫಾರ್ಮರ್ ಬದಲಾವಣೆ ಕಾರ್ಯ ಮೇ 29ರಂದು ಸ್ಥಳೀಯ ಪ್ರತಿನಿಧಿ ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ ಮತ್ತು ಬಿಜೆಪಿ ನಗರ ಅಧ್ಯಕ್ಷ ಐಬಿ ಚಂದ್ರಶೇಖರ್ ಅವರ ಮುಂದಾಳತ್ವದಲ್ಲಿ ಕಾನತ್ತಿಲ ಭಾಗದ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ನಡೆಯಿತು.
ಕಾನತ್ತಿಲ ತಿರುವಿನಿಂದ ಉಳ್ಳಾಕುಲು ದೈವಸ್ಥಾನದವರೆಗೆ ಮತ್ತು ಅಣ್ಣು ನಾಯ್ಕ್ ಮನೆ ಭಾಗಕ್ಕೆ ಹೋಗುವ ರಸ್ತೆಗಳ ಎರಡೂ ಬದಿ ಕರೆಂಟ್ ಲೈನಿಗೆ ಮರದ ಗೆಲ್ಲುಗಳು ತಾಗಿ ಕರೆಂಟ್ ಆಗಾಗ ಕೈಕೊಡುತ್ತಿದ್ದ ಸಮಸ್ಯೆ ಹಲವು ವರ್ಷಗಳಿಂದ ಇದ್ದು, ಸ್ಥಳೀಯರ ಪಾಲ್ಗೊಳ್ಳುವಿಕೆ ಮೂಲಕ ಶ್ರಮದಾನ ಮಾಡಿ ಗೆಲ್ಲುಗಳನ್ನು ತೆರವುಗೊಳಿಸಲಾಯಿತು. ಹಾಗೇ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಮೆಸ್ಕಾಂ ಸಿಬ್ಬಂದಿ ವರ್ಗವನ್ನು ಸಂಪರ್ಕಿಸಿ ಕಾನತ್ತಿಲ ತಿರುವಿನ ಬಳಿ ಇರುವ ಟ್ರಾನ್ಸ್ಫಾರ್ಮರ್ ಅನ್ನು ಬದಲಾಯಿಸಿ ಯೋಗ್ಯವಾದುದು ಅಳವಡಿಸಲಾಯಿತು. ವಿಶ್ವ ಎಲೆಕ್ಟ್ರಿಕಲ್ಸ್ ನ ಮಾಲಕ ಸತ್ಯನಾರಾಯಣ ಭಟ್ ಹಾಗೂ ಮೆಸ್ಕಾಂ ಸಿಬ್ಬಂದಿಗಳಾದ ತಿಮ್ಮಪ್ಪ ಮತ್ತು ಸದಾಶಿವ ಸಹಕರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಮೋಹನ ದೇವರಗುಂಡ, ಮೋನಪ್ಪ ನಾರಾಲು, ಶಿವರಾಮ ಮಡಪ್ಪಾಡಿ, ಪುರುಷೋತ್ತಮ ಕನ್ನಡ್ಕ, ಹೇಮನಾಥ ಕಾನತ್ತಿಲ, ತೇಜಕುಮಾರ್ ಕಾನತ್ತಿಲ, ಸಂತೋಷ್ ಭಂಡಾರಿ, ಸುಂದರ ಪೂಜಾರಿ, ರಮೇಶ್ ನಾಯ್ಕ್, ಅಯ್ತಪ್ಪ ನಾಯ್ಕ್, ರವೀಶ್ ಕಾನತ್ತಿಲ, ಕುಲದೀಪ್ ಪೆಲ್ತಡ್ಕ, ಶಂಕರ್ ಪಾಂಡಿ, ದೇವಿಪ್ರಸಾದ್, ತೀರ್ಥ ಪ್ರಸಾದ್, ಗುಡ್ಡಪ್ಪ ರೈ, ದಾಕೋಜಿ ರಾವ್, ಸವಿತಾ ಸತೀಶ್, ಚಿತ್ತಾರ ಭಂಟ್ವಾಳ್, ನವೀನ, ನಿತಿನ್, ಕಿಶನ್, ರಿತೇಶ್, ಶಶಾಂಕ್, ಚಿರಂತನ್ ಮೊದಲಾದವರು ಭಾಗವಹಿಸಿ ಶ್ರಮದಾನ ಯಶಸ್ವಿಗೊಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.