ಇರುವಂಬಳ್ಳದಲ್ಲಿ ಹೆಲ್ಪ್ ಲೈನ್ ಯುವಕರಿಂದ ಶ್ರಮದಾನ

Advt_Headding_Middle

 

ಅಜ್ಜಾವರ ಗ್ರಾಮ ಪಂಚಾಯತ್ ವತಿಯಿಂದ ಇರುವಂಬಳ್ಳದ ಹೆಲ್ಫ್ ಲೈನ್ ಯುವಕರು ಸೇರಿಕೊಂಡು ಮೂರು ದಿನಗಳ ಶ್ರಮದಾನದ ಮೂಲಕ ಅಜ್ಜಾವರ ಗ್ರಾಮ ಪಂಚಾಯತ್ ಗೋಳಪಟ್ಟ ಮೂರನೇ ವಾರ್ಡ್ ನ ಜೇಡಿಗುಂಡಿಯಿಂದ ಇರುವಂಬಳ್ಳ ಮಸೀದಿಯ ತನಕದ ರಸ್ತೆಯನ್ನು ಇತ್ತೀಚೆಗೆ ದುರಸ್ತಿ ಮಾಡಿದರು.

ಚರಂಡಿ ಹಾಗು ಮೋರಿಯನ್ನು ಸಹ ಈ ಸಂದರ್ಭದಲ್ಲಿ ದುರಸ್ತಿ ಮಾಡಲಾಯಿತು.

ಶ್ರಮದಾನ ನಡೆಯುವ ಸ್ಥಳಕ್ಕೆ ಅಜ್ಜಾವರ ಗ್ರಾಮ ಪಂಚಾಯತ್ ಅದ್ಯಕ್ಷೆಯಾದ ಸತ್ಯವತಿ , ಉಪಾದ್ಯಕ್ಷೆಯಾದ ಲೀಲಾ ಮನಮೋಹನ್ , ಸದಸ್ಯರಾದ ರಾಹುಲ್ ಅಡ್ಪಂಗಾಯ ಹಾಗು ಬಿಡಿಒ ಜಯಮಾಲ ಸ್ಥಳಕ್ಕೆ ಭೇಟಿ ನೀಡಿದರು.

ಶ್ರಮದಾನದಲ್ಲಿ, ಎ.ಬಿ.ಅಬ್ಬಾಸ್ ಅಡ್ಕ, ಬಿ.ಎಂ.ಅಬ್ದುಲ್ ಸತ್ತಾರ್ ಬೋವಿಕ್ಕಾನ, ಅಬ್ದುಲ್ ಖಾದರ್ ತುಪ್ಪಕ್ಕಲ್ಲು, ಮುಹಮ್ಮದ್ ಕುಂಞಿ ಮಾವಿನಪಳ್ಳ, ರಫೀಕ್ ಚಾಪಳ್ಳ , ನಾಸಿರ್ ಅಜ್ಜಾವರ, ಸಮೀರ್ ತುಪ್ಪಕ್ಕಲ್ಲು, ಯಾಹ್ಯಾ ಇರುವಂಬಳ್ಳ, ಮುತ್ತಲಿ ಮಾವಿನಪಳ್ಳ, ಅಬ್ದುಲ್ ಖಾದರ್ ಜೇಡಿಗುಂಡಿ ಮೊದಲಾದವರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.