ಕೊರೊನಾ ಲಾಕ್ ಡೌನ್ : ಮೇನಾಲ ಭಜನಾ ಮಂದಿರದಿಂದ ಹೊಸ ಪ್ರಯೋಗ

Advt_Headding_Middle

 

ಆನ್ ಲೈನ್ ಮೂಲಕ ಮನೆ ಮನೆ ಭಜನೆ ಕಾರ್ಯಕ್ರಮ

ಲಾಕ್ ಡೌನ್ ನಿಂದ ಜನ ಸೇರಬಾರದಬ ನಿಯಮವನ್ನು ಸರಕಾರ ಜಾರಿ ಗೊಳಿಸಿದೆ. ಆದರೆ ಮೇನಾಲದ ಶ್ರೀಕೃಷ್ಣ ಭಜನಾ ಮಂದಿರದವರು ಸರಕಾರದ ನಿಯಮ ಪಾಲನೆಯೊಂದಿಗೆ ಭಜನೆಗೆ ಹೊಸ ಪ್ಲ್ಯಾನ್ ಹಾಕಿಕೊಂಡಿದೆ.
ಆನ್ಲೈನ್ ಭಜನೆ ಎಂಬ ಹೊಸ ಪ್ರಯೋಗವನ್ನು ಭಜನಾಮಂದಿರದವರು ಹಮ್ಮಿಕೊಂಡಿದ್ದಾರೆ. ಮೇನಾಲ ಇಲ್ಲಿ ನಡೆಸಲಾಗುತ್ತಿದೆ. ಈ ಬಾರಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗೂಗಲ್ ಮೀಟ್ ನಲ್ಲಿ ಭಜನಾ ಕಾರ್ಯಕ್ರಮ ನಡೆಸಲಾಯಿತು. ಸುಮಾರು 25 ಮನೆಯ ಸದಸ್ಯರು ಈ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭಜನಾ ಮಂದಿರದಲ್ಲಿ ನಾಲ್ಕು ಜನ ಅಂತರವನ್ನು ಕಾಪಾಡಿಕೊಂಡು ಭಜನೆ ಹಾಡುತ್ತಾರೆ. ಮನೆಯಲ್ಲಿ ಕುಳಿತು ಗೂಗಲ್ ಮೀಟ್ ನ ಮೂಲಕ ಮನೆಯ ದೇವರ ಕೋಣೆಯಲ್ಲಿ ಭಜನಾ ಮಂದಿರದಲ್ಲಿ ಹಾಡುವ ಸಂದರ್ಭದಲ್ಲಿ ಅದೇ ಹಾಡನ್ನು ಪುನರುಚ್ಚರಿಸುವ ಮೂಲಕ ಕುಟುಂಬ ಸದಸ್ಯರೆಲ್ಲರೂ ಈ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮೊದಲೇ ಸೂಚನೆ ನೀಡಿದಂತೆ ಗೂಗಲ್ ಮೀಟ್ ನಲ್ಲಿ ಭಾಗವಹಿಸುವಾಗ ವಿಡಿಯೋ ಆನ್ ಮಾಡಿ ಆಡಿಯೋ ಆಫ್ ಮಾಡಲು ಸೂಚಿಸಿತ್ತು. ಭಜನಾ ಮಂದಿರದಲ್ಲಿ ಮಂಗಳ ಹಾಡುವಾಗ ಮಂಗಳಾರತಿ ಮಾಡುವ ಸಂದರ್ಭದಲ್ಲಿ ಅವರವರ ಮನೆಯಲ್ಲಿಯೂ ಮಂಗಳಾರತಿ ಮಾಡಲು ಸೂಚನೆ ನೀಡಲಾಗಿತ್ತು. ಅದರಂತೆ ಎಲ್ಲಾ ಮನೆಯ ಸದಸ್ಯರು ನಮ್ಮ ಸೂಚನೆಯಂತೆ ನಮ್ಮ ಜೊತೆ ಪಾಲ್ಗೊಂಡರು. ಹೀಗೊಂದು ಹೊಸ ರೀತಿಯ ಭಜನೆಯಲ್ಲಿ ಭಜನಾಮಂದಿರದ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.