Breaking News

ಕೊರೋನಾ ಗೆದ್ದವರ ಮಾತು

Advt_Headding_Middle

ಸಾಮಾನ್ಯ ಜ್ವರದಂತೆ ಬಂದು ಹೋಯಿತು

ಪವಿತ್ರ ಅಂಬೆಕಲ್ಲು

ಅಂದು 2021 ರ ಜನವರಿ ತಿಂಗಳ ಕೊನೆಯ ವಾರ. ಉದ್ಯೋಗದ ಹುಡುಕಾಟಕ್ಕೆಂದು ನಾನು ಹಾಗೂ ನನ್ನ ಗೆಳತಿ ಮಾಯನಗರಿ ಬೆಂಗಳೂರ ಕಡೆಗೆ ಹೊರಟೆವು. ಹಲವಾರು ಸಂದರ್ಶನಗಳನ್ನು ಎದುರಿಸಿದ ನಾವು ಕೊನೆಗೆ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದೆವು. ಪರಿಚಯದ ಗೆಳತಿಯರು ಜೊತೆಗಿದ್ದ ಕಾರಣ ದಿನ ಕಳೆದಂತೆ ಎಲ್ಲವೂ ಕೂಡ ಹೊಸತನದ ಅನುಭವದ ಜೊತೆಗೆ ಸಂತೋಷವನ್ನು ನೀಡಿತ್ತು.
ಅನೇಕ ದಿನಗಳ ನಂತರ ಆಕಸ್ಮಿಕವಾಗಿ ನಮ್ಮವರೊಬ್ಬರಲ್ಲಿ ಜ್ವರ ಕಾಣಿಸಿಕೊಂಡಿತು. ಆದರೆ ಆ ಸಮಯದಲ್ಲಿ ಕೋರೋನಾದ ಪರಿಜ್ಞಾನ ನಮ್ಮಲ್ಲಿ ಅಷ್ಟಕ್ಕಷ್ಟೆ ಇತ್ತು. ಅದಾದ ಬಳಿಕ ನಮ್ಮೊಂದಿಗಿದ್ದ ಇನ್ನೊಬ್ಬರಿಗೆ ಕಾಣಿಸಿಕೊಂಡು ಕೊನೆಗೆ ನನಗೂ ಬಾಧಿಸಿತು. ನಾವೇನೋ ಸಾಮಾನ್ಯ ಜ್ವರ ಇದು, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡರೆ ಸರಿಹೋಗುತ್ತದೆ ಎಂಬ ಭಾವನೆಯಲ್ಲಿ ಅಲ್ಲೇ ಇದ್ದೆವು. ಕೊನೆಗೆ ಸರಿಹೋಗದ ಕಾರಣ ಅದೇ ದಿನ ರಾತ್ರಿ ಹೊರಟು ಊರಿನತ್ತ ಮುಖಮಾಡಿದೆವು. ಆಗಷ್ಟೆ ಊರಿನಲ್ಲಿ ಭಯದ ವಾತಾವರಣ ಶುರುವಾಗಿತ್ತು. ಯಾರಾದರೂ ದೂರದ ಊರಿಂದ ಬಂದರೆ ಸರಕಾರಿ ವೈದ್ಯರ ಸಲಹೆಯ ಮೇರೆಗೆ ಅವರನ್ನು ಪರೀಕ್ಷಿಸಲು ಬರಹೇಳುತ್ತಿದ್ದರು. ತುಂಬಾ ಸುಸ್ತಾದ ನಾನು ಕೂಡ ಪರೀಕ್ಷೆಗೆ ತೆರಳಿದೆವು. ಅಲ್ಲಿ ಪರೀಕ್ಷಿಸಿದ ನರ್ಸ್ ಗಳು ತಕ್ಷಣ “ಇವಳಿಗೆ ಕೋರೋನ ಇದೆ” ಎಂಬ ಹಣೆಪಟ್ಟಿ ಕಟ್ಟಿದರು.
ಆಗ ಆದ ಭಯ ನಿಜವಾಗಿಯೂ ನನ್ನಲ್ಲಿದ್ದ ಮಾನಸಿಕ ಸ್ಥೈರ್ಯವನ್ನೊಮ್ಮೆ ಕುಗ್ಗಿಸಿತು. ಕೊನೆಗೆ ಮನೆಗೆ ಬಂದ ನಾನು ಸ್ವತಃ ಹೋಮ್ ಕ್ವಾರಂಟೇನ್ ಆದೆನು. ಆ ಸಮಯದಲ್ಲಿ ನನ್ನೊಂದಿಗಿದ್ದು ನನಗೆ ಧೈರ್ಯದ ಮಾತುಗಳನ್ನು ಹೇಳಿ ಸಮಾಧಾನಿಸಿದವರು ನನ್ನ ಮನೆಯವರು. ನಿಜವಾಗಿಯೂ ಒಮ್ಮೆ ಭಯಪಟ್ಟ ನಾನು, ಕೊನೆಗೆ ಸಕಾರಾತ್ಮಕವಾಗಿ ಯೋಚಿಸಿದಾಗ ನನಗೇನೂ ಆಗಿಲ್ಲ ಎಂಬ ಭಾವನೆ ನನ್ನೊಳಗೆ ಮನೆಮಾಡಿತ್ತು. ಈಗ ಯೋಚಿಸಿದರೆ ನನಗೆ ಕೋರೋನ ಬಂದಿದೆ ಎಂದು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಅದು ಸಾಮಾನ್ಯ ಜ್ವರದ ಹಾಗೆಯೇ ಇತ್ತು.
ಒಟ್ಟಿನಲ್ಲಿ ಹೇಳುವುದಾದರೆ ಕೋರೋನಾ ಎಂಬ ರೋಗಕ್ಕೆ ಹೆದರಬೇಕಾದ ಅವಶ್ಯಕತೆಯಿಲ್ಲ. ಎಲ್ಲರಲ್ಲೂ ಮುಖ್ಯವಾಗಿ ಬೇಕಾಗಿದ್ದು ಮಾನಸಿಕ ಸ್ಥೈರ್ಯ, ಧೈರ್ಯ, ಸಕಾರಾತ್ಮಕ ಯೋಚನೆ. ಇದೆಲ್ಲವು ಇದ್ದರೆ ನಾವು ಕೊರೋನಾದಿಂದ ಗೆದ್ದಂತೆಯೇ. ಚಿಕ್ಕ ರೋಗಕ್ಕೂ ನಾವು ಆಸ್ಪತ್ರೆಯನ್ನೇ ಅವಲಂಬಿಸಿದರೆ ಭಯದ ವಾತಾವರಣ ಇನ್ನೂ ನಮ್ಮಲ್ಲಿ ಗಟ್ಟಿಯಾಗುತ್ತದೆ.
ಆದ್ದರಿಂದ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ನಾವು ಆಸ್ಪತ್ರೆಗೆ ಹೋಗಬೇಕೇ ವಿನಃ ಎಲ್ಲಾ ಸಂದರ್ಭದಲ್ಲಿ ಇದು ಆಪತ್ತನ್ನೂ ತಂದೊಡ್ಡಬಹುದು. ಕೋರೋನಾದಿಂದ ಕಲಿತ ಅನುಭವದ ಮಾತೆಂದರೆ “ಧೈರ್ಯಂ ಸರ್ವತ್ರ ಸಾಧನಂ”.

– ಪವಿತ್ರ ಅಂಬೆಕಲ್ಲು

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.