ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಂಪಾಜೆ ಕೊಡಗು

Advt_Headding_Middle

 

ಲಾಕ್ ಡೌನ್ ಸಂದರ್ಭದಲ್ಲಿ ಸದಸ್ಯರ ನೆರವಿಗೆ ನಿಂತ ಸಹಕಾರಿ ಸಂಘ

ಸಂಪಾಜೆ ಕೊಡಗು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು ತಾವು ಪಡೆದಿರುವ ಅಲ್ಪಾವಧಿ ಬೆಳೆಸಾಲ (ಕೆ ಸಿ ಸಿ ಸಾಲ)ವನ್ನು ನವೀಕರಿಸುವ ಸಂದರ್ಭ ,ದೇಶಾದ್ಯಂತ ಲಾಕ್ ಡೌನ್ ನಿಂದಾಗಿ ಆರ್ಥಿಕ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ,ಸಾಲದ ಸಂಪೂರ್ಣ ಮೊಬಲಗನ್ನು ಮರುಪಾವತಿ ಮಾಡಲು ತೊಂದರೆ ಅನುಭವಿಸುತ್ತಿರುವುದರಿಂದ ,ಅಂತಹ ಸದಸ್ಯರ ನೆರವಿಗೆ ಬರಲು ಸಂಸ್ಥೆಯ ಆಡಳಿತ ಮಂಡಳಿ ನಿರ್ಧರಿಸಿದೆ.

1. ಕೆ ಸಿ ಸಿ ಸಾಲ ನವೀಕರಣ ಮಾಡಲು ಹಣ ಹೊಂದಿಸಲು ಸಾಧ್ಯವಾಗದ ಸದಸ್ಯರ ಸಾಲದ ಮೊಬಲಗನ್ನು ಸಂಪೂರ್ಣವಾಗಿ ಸಂಸ್ಥೆಯೇ ಸಾಲದ ರೂಪದಲ್ಲಿ ಪಾವತಿಸಿ ,ನವೀಕರಿಸುವ ಮೂಲಕ ಸದಸ್ಯರಿಗೆ ನೆರವಾಗಲಿದೆ.
2. ತಾ.30.9.2021 ಅಂದರೆ ಸೆಪ್ಟೆಂಬರ್ ತಿಂಗಳ ಕೊನೆಯವರೆಗೆ ನವೀಕರಿಸಲು ಇರುವ ಎಲ್ಲಾ ಕೆಸಿಸಿ ಸಾಲಗಳಿಗೆ ಈ ಸೌಲಭ್ಯ ನೀಡಲಾಗುವುದು.

3. ಇದಲ್ಲದೆ ಸದಸ್ಯ ರೈತರ ಅವಶ್ಯಕತೆಗನುಗುಣವಾಗಿ ಕೃಷಿ ಸಲಕರಣೆಗಳು, ರಸಗೊಬ್ಬರ, ಔಷಧ ಮತ್ತಿತರ ಕೃಷಿ ಸಂಭಂದಿತ ವಸ್ತುಗಳನ್ನು ನಮ್ಮ ಸಂಸ್ಥೆಯಿಂದ ಖರೀದಿಸುವ ಸದಸ್ಯರಿಗೆ ರೂ.20000/ ದವರೆಗೆ ವಿಶೇಷ ಸಾಲನೀಡಲಾಗುವುದು.ಈ ಸಾಲದ ಅವಧಿ 5 ತಿಂಗಳು ಅಂದರೆ ತಾ.30.9.2021 ಆಗಿರುತ್ತದೆ.

ಈ ಎಲ್ಲಾ ಸೌಲಭ್ಯಗಳ ಅಗತ್ಯವಿರುವ ಎಲ್ಲ ಸದಸ್ಯರು ಈ ಯೋಜನೆಯ ಪ್ರಯೋಜನ ಪಡೆಯಬಹುದೆಂದು ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ.ಅನಂತ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆನಂದ ಬಿ.ಕೆ.ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.