Breaking News

ಅಳ್ಪೆ – ಚಿಂಗಾಣಿಗುಡ್ಡೆ ರಸ್ತೆಯಲ್ಲಿ ಮೋರಿ ಅಳವಡಿಸಲು ಜಿ.ಪಂ. ಎ.ಇ.ಇ. ಒಪ್ಪಿಗೆ

Advt_Headding_Middle

 

ಅಳ್ಪೆ – ಚಿಂಗಾಣಿಗುಡ್ಡೆ ರಸ್ತೆಯಲ್ಲಿ ಚಿಂಗಾಣಿಗುಡ್ಡೆ ನೀರಿನ ಟ್ಯಾಂಕ್ ಗೆ ತಿರುಗುವಲ್ಲಿ ಮೋರಿ ಅಳವಡಿಸುವುದಾಗಿ ಸುಳ್ಯದ ಜಿ.ಪಂ. ಎ.ಇ.ಇ. ಹನುಮಂತರಾಯಪ್ಪ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.
ಅಳ್ಪೆ ಚಿಂಗಾಣಿಗುಡ್ಡೆ ರಸ್ತೆಗೆ ಕಾಂಕ್ರೀಟ್ ಹಾಕಲಾಗುತ್ತಿದ್ದು ಆ ರಸ್ತೆಯಲ್ಲಿ ಹಾಕಲಾಗಿರುವ ಕುಡಿಯುವ ನೀರಿನ ಪೈಪ್ ನಿಗದಿತ ಆಳದಲ್ಲಿ ಹಾಕದಿರುವ ಬಗ್ಗೆ ಹಾಗೂ ಚಿಂಗಾಣಿಗುಡ್ಡೆಯ ನೀರಿನ ಟ್ಯಾಂಕಿಗೆ ನೀರು ಹೋಗಲು ಮತ್ತು ಜನರಿಗೆ ಸರಬರಾಜಾಗಲು ಹಾಕಿರುವ ನಾಲ್ಕು ಇಂಚಿನ ಪೈಪು ಮುಂದಕ್ಕೆ ವಾಹನ ಸಂಚಾರದ ವೇಳೆ ಹಾನಿಯಾಗದಂತೆ ಮುಂಜಾಗ್ರತೆಗಾಗಿ ಮೋರಿ ಅಳವಡಿಸದಿರುವ ಬಗ್ಗೆ ಗ್ರಾಮ ಸ್ವರಾಜ್ ತಂಡದ ಸದಸ್ಯರಾದ ಅಳ್ಪೆ ಜಿನ್ನಪ್ಪ ಗೌಡ ಮತ್ತಿತರರು ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ ದೂರು ನೀಡಿದ್ದರು. ಜಿ.ಪಂ. ಸಿ.ಇ.ಒ.ರವರ ಸೂಚನೆ ಮೇರೆಗೆ ಸುಳ್ಯದ ಜಿ.ಪಂ. ಇಂಜಿನಿಯರಿಂಗ್ ಉಪ ವಿಭಾಗದ ಎ.ಇ.ಇ. ಹನುಮಂತರಾಯಪ್ಪರು ಮೇ.29 ರಂದು ಸ್ಥಳ ಪರಿಶೀಲನೆಗೆ ಬಂದಿದ್ದರು. ಆ ಸಂದರ್ಭ ಗ್ರಾಮಸ್ವರಾಜ್ ತಂಡದ ಕೇಳಿಕೆಯ ಮೇರೆಗೆ ಸ್ಥಳಕ್ಕೆ ಬಂದಿದ್ದ ಪಂಜ ಗ್ರಾ.ಪಂ. ಮಾಜಿ ಅಧ್ಯಕ್ಷ ಸಿ.ಎಂ.ರಫೀಕ್ ಐವತ್ತೊಕ್ಲು ರವರು ಹನುಮಂತರಾಯಪ್ಪರೊಡನೆ ವಿಚಾರ ವಿನಿಮಯ ನಡೆಸಿದರು.
ಈ ವೇಳೆ ಗ್ರಾಮ ಸ್ವರಾಜ್ ತಂಡದ ಜಿನ್ನಪ್ಪ ಗೌಡ ಹಾಗೂ ಸೀತಾರಾಮರವರು ಕೂಡ ಜತೆಗಿದ್ದರು. ಸ್ಥಳ ಪರಿಶೀಲನೆ ನಡೆಸಿದ ಇಂಜಿನಿಯರ್ ರವರು ಚಿಂಗಾಣಿಗುಡ್ಡೆ ರಸ್ತೆಯಲ್ಲಿ ಅಡ್ಡಲಾಗಿ ಕುಡಿಯುವ ನೀರಿನ ನಾಲ್ಕು ಇಂಚಿನ ಪೈಪ್ ಅಳವಡಿಸುವುದಕ್ಕಾಗಿ ಮೋರಿ ನಿರ್ಮಿಸುವುದಾಗಿ ಭರವಸೆ ನೀಡಿದರೆಂದು ತಿಳಿದುಬಂದಿದೆ.
ಚಿಂಗಾಣಿಗುಡ್ಡೆ ನೀರಿನ ಟ್ಯಾಂಕ್ ನಿರ್ಮಾಣವಾಗಿ 7 ವರ್ಷಗಳಾಗಿ 25 ಲಕ್ಷ ರೂ. ಜಿ.ಪಂ. ನಿಂದ ವಿನಿಯೋಗವಾಗಿದ್ದರೂ ಗ್ರಾಮ ಪಂಚಾಯತ್ ಗೆ ಹಸ್ತಾಂತರಗೊಂಡ ಬಗ್ಗೆ ಯಾವುದೇ ದಾಖಲೆ ಕಂಡುಬರುತ್ತಿಲ್ಲವೆಂದೂ ಹನುಮಂತರಾಯಪ್ಪರು ಈ ಸಂದರ್ಭದಲ್ಲಿ ಹೇಳಿದ್ದಾರೆಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.