ಕೆ.ಎಸ್.ಎಸ್.ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಪೈ ನಿವೃತ್ತಿ

Advt_Headding_Middle

 

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ ಪ್ರಾಂಶುಪಾಲ ಬಾಲಕೃಷ್ಣ ಪೈ ಮೇ.31 ರಂದು ನಿವೃತ್ತಿ ಹೊಂದಲಿದ್ದಾರೆ.
ಈ ಕಾಲೇಜಿನಲ್ಲಿ ಸುದೀರ್ಘ 36 ವರ್ಷಗಳ ಸೇವೆಯ ಬಳಿಕ ನಿವೃತ್ತಿ ಹೊಂದುತ್ತಿರುವ ಇವರು ಕೊಡುಗೈ ದಾನಿಯೂ ಹೌದು.
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ೮ ವರ್ಷಗಳ ಕಾಲ ದುಡಿದಿರುವ ಇವರು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಲಹಾ ಸಮಿತಿ ಸದಸ್ಯ ರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ ೨ ವರ್ಷಗಳ ಕಾಲ ಸೇವೆ ಸಲ್ಲಿಸಿರು ತ್ತಾರೆ. ೨೦೧೮ ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಯುವ ರೆಡ್ ಕ್ರಾಸ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕಾಲೇಜಿನಲ್ಲಿ ರೋಟರ್‍ಯಾಕ್ಟ್ ಸಂಸ್ಥೆಯನ್ನು ಹುಟ್ಟುಹಾಕಿ ಅದನ್ನು ಮುನ್ನಡೆಸಿದ್ದಾರೆ. ಕಳೆದ ೧೦ ವರ್ಷಗಳಿಂದ ಕಾಲೇಜಿನ ಸಂಸ್ಕೃತಿ ಸೌರಭವೆಂಬ ಸಾಂಸ್ಕೃತಿಕ ತಂಡವನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳನ್ನು ಮಾಡಿದ್ದು ಮೈಸೂರು ದಸರಾ ಮತ್ತು ದೆಹಲಿಯಲ್ಲಿ ಕಾರ್ಯಕ್ರಮ ನೀಡಿದ್ದಾರೆ.
೨೦೧೬-೧೭ ರಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್‌ನ ಅಧ್ಯಕ್ಷರಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡಿದ್ದು ದಾಖಲೆಯ ೨೩ ಪ್ರಶಸ್ತಿಗಳನ್ನು ಪಡೆದು ಸುಬ್ರಹ್ಮಣ್ಯ ರೋಟರಿ ಕ್ಲಬ್ ಜಿಲ್ಲೆಗೆ ಅತ್ಯುತ್ತಮ ಕ್ಲಬ್ ಪ್ರಶಸ್ತಿಯನ್ನು ಗಳಿಸಿದ್ದರು.
ಪರೋಪಕಾರಿಯಾಗಿರುವ ಇವರು ಕಳೆದ ದೀಪಾವಳಿ ಯಿಂದ ಕಾರ್ಕಳದ ಬಡ ಕುಟುಂಬವೊಂದರ ಹೆಣ್ಣು ಮಗಳ ಶೈಕ್ಷಣಿಕ ವೆಚ್ಚವನ್ನು ದತ್ತು ತೆಗೆದುಕೊಂಡಿದ್ದಾರೆ. ಆ ಮಗುವಿನ ತಂದೆ ಪೊಲೀಯೋ ಪೀಡಿತರಾಗಿದ್ದು ತಾಯಿ ದೃಷ್ಟಿ ಹೀನರಾಗಿದ್ದಾರೆ. ಅವರಿಗೆ ಗುಡಿಸಲು ಕೂಡ ಇಲ್ಲದಾಗಿದ್ದು ಅವರಿಗೆ ಬೇರೆ ಕಡೆ ರೂಮ್ ಕೊಡಿಸಿದ್ದು ಅದಕ್ಕಾಗಿ ಪ್ರತಿ ತಿಂಗಳು ೩೫೦೦ ವೆಚ್ಚ ಮಾಡುತ್ತಿರುವುದಲ್ಲದೆ ಇತರೇ ಖರ್ಚುಗಳನ್ನು ಭರಿಸುತಿದ್ದಾರೆ. ವರ್ಷಕ್ಕೆ ಒಂದು ಸರಕಾರಿ ಶಾಲೆಗಳ ಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾದ ಲೇಖನಿ ಸಾಮಾಗ್ರಿಗಳನ್ನು ವಿತರಿಸುತ್ತಿದ್ದಾರೆ. ಕೈಕಂಬ, ಬಾನಡ್ಕ, ಸುಬ್ರಹ್ಮಣ್ಯ ಅಂಗನವಾಡಿ ಶಾಲೆಗಳಿಗೆ ಕೊಡುಗೆಗಳನ್ನು ನೀಡಿದ್ದಾರೆ. ಹರಿಹರ ಪಲ್ಲತಡ್ಕ ಗ್ರಾಮದವರಾಗಿದ್ದು ಮಲಗಿದಲ್ಲೇ ಕಳೆದ ೨೧ ವರ್ಷಗಳಿಂದ ಇದ್ದ ಇತ್ತೀಚೆಗೆ ನಿಧನರಾದ ದಿ.ಕೃಷ್ಣ ರೈ ಎಂಬವರಿಗೆ ಪ್ರತಿ ವರ್ಷ ೫ ಸಾವಿರದಂತೆ ಹಣವನ್ನು ೧೪ ವರ್ಷಗಳ ಕಾಲ ಚಿಕಿತ್ಸಾ ವೆಚ್ಚ ನೀಡಿದ್ದಾರೆ.
ಬಾಲಕೃಷ್ಣ ಪೈಯವರದ್ದು ಪಡುಬಿದ್ರೆಯ ಫಲಿಮಾರ್ ಪೈ ಮನೆತನದವರು. ಪತ್ನಿ ಶ್ರೀಮತಿ ಸೌಮ್ಯ. ಪುತ್ರಿ ಶ್ರೀಮತಿ ಅಕ್ಷತಾ ಕಾಮತ್ ಬ್ಯಾಂಕ್ ಉದ್ಯೋಗಿಯಾಗಿದ್ದು ಮಂಗಳೂರಿನಲ್ಲಿ ನೆಲೆಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.