Breaking News

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಗೋವಿಂದ ಎನ್.ಎಸ್.

Advt_Headding_Middle

 

ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನ ಪ್ರಾಂಶುಪಾಲರಾಗಿ ಇಂಗ್ಲೀಷ್ ಉಪನ್ಯಾಸಕ ಡಾ. ಗೋವಿಂದ ಎನ್ ಎಸ್ ಜೂ.೧ ರಿಂದ ಕಾರ್ಯನಿರ್ವಹಿಸಲಿದ್ದಾರೆ.
ಹರಿಹರಪಲ್ಲತ್ತಡ್ಕ ಗ್ರಾಮದ ಪಲ್ಲತಡ್ಕದವರಾಗಿರುವ ಇವರು ಪ್ರಾಥಮಿಕ ಶಿಕ್ಷಣವನ್ನು ಹರಿಹರ ಪಲ್ಲತ್ತಡ್ಕದಲ್ಲಿ, ಪ್ರೌಢಶಿಕ್ಷಣವನ್ನು ಗುತ್ತಿಗಾರಿನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಎಸ್ ಎಸ್ ಪಿ ಯು ಕಾಲೇಜು ಸುಬ್ರಹ್ಮಣ್ಯ ಇಲ್ಲಿ ಪಡೆದು ಪದವಿ ಶಿಕ್ಷಣವನ್ನು ಎನ್ ಎಂ ಸಿ ಸುಳ್ಯ ದಲ್ಲಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ ಎ ಪದವಿಯನ್ನು ಪಡೆದಿರುತ್ತಾರೆ. ೧೯೮೬ ರಲ್ಲಿ ಕೆ ಎಸ್ ಎಸ್ ಕಾಲೇಜಿಗೆ ಇಂಗ್ಲೀಷ್ ಉಪನ್ಯಾಸಕರಾಗಿ ಸೇರಿದರು. ಅಣ್ಣಾಮಲೈ ಯೂನಿವರ್ಸಿಟಿಯಿಂದ ಎಂ.ಫಿಲ್ ಪದವಿ ಪಡೆದಿರುತ್ತಾರೆ. ೨೦೧೭ ರಲ್ಲಿ ಪಿ ಎಚ್ ಡಿ ಪದವಿಯನ್ನು ಪಡೆದಿರುತ್ತಾರೆ. ಮಂಗಳೂರು ಯುನಿವರ್ಸಿಟಿಯ ಇಂಗ್ಲೀಷ್ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ, ಇಂಗ್ಲೀಷ್ ಪಠ್ಯ ಪುಸ್ತಕ ಮಂಡಳಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ಕಾಮನ್ ಸಿಲೆಬಸ್ ಸಮಿತಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ವಿಭಾಗದಿಂದ ಸದಸ್ಯರಾಗಿ ಕೆಲಸ ಮಾಡಿದರು. ಸ್ವಾಯತ್ತ ಸಂಸ್ಥೆಗಳ ಪರೀಕ್ಷಾ ಮಂಡಳಿಯ ಸದಸ್ಯರಾಗಿ ಕೆಲಸ ಮಾಡಿದ್ದರು. ಕಾಲೇಜಿನಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸೆಮಿನಾರ್ ಯೋಜಿಸಿದ್ದರು.
ಪ್ರಜಾವಾಣಿ ಪತ್ರಿಕೆ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಹವ್ಯಾಸಿ ಬರಹ ಗಾರರಾಗಿ ೧೧ ವರ್ಷಗಳ ಕಾಲ ಕೆಲಸ ಮಾಡಿದ್ದರು. ನಾಟಕಗಳಲ್ಲಿ ಅಭಿನಯಿಸಿರುವುದಲ್ಲದೆ ಕಾಲೇಜಿನ ಕುಸುಮ ಸಾರಂಗದಲ್ಲಿ ಆರಂಭದಿಂದ ಕೆಲಸ ಮಾಡಿದ್ದರು. ೨೦೧೫ರಿಂದ ಅದನ್ನು ಮುನ್ನಡೆಸಿ ೪ ಶಿಬಿರ ನಡೆಸಿದ್ದಾರೆ. ಕಾಲೇಜಿ ನಲ್ಲಿ ರೋವರ್ ರೇಂಜರ್ ಸಂಸ್ಥೆಯನ್ನು ೩ ವರ್ಷ ಮುನ್ನಡೆಸಿದ್ದಾರೆ. ಶೈಕ್ಷಣಿಕವಾಗಿ ಶಿಮ್ಲಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಅಡ್ವಾನ್ಸ್ಡ್ ಸ್ಟಡೀಸ್ ನಿಂದ ಫೆಲೋಶಿಪ್ ಪಡೆದಿದ್ದಾರೆ . ನೇಪಾಳಕ್ಕೆ ಅಧ್ಯಯನಶೀಲ ಪ್ರವಾಸ ಮಾಡಿದ್ದಾರೆ. ಹಲವಾರು ಆಧ್ಯಾತ್ಮಿಕ ಶಿಬಿರಗಳನ್ನು ಆಯೋಜಿಸಿರುವ ಇವರ ಪತ್ನಿ ವಿದ್ಯಾ ರವರು ಸುಬ್ರಹ್ಮಣ್ಯದಲ್ಲಿ ಸರಸ್ವತಿ ಸಂಗೀತ ಶಾಲೆಯನ್ನು ನಡೆಸುತ್ತಿದ್ದಾರೆ. ಮಗಳು ಸುಶ್ಮಿತಾ ಎಂ ಟೆಕ್ ವ್ಯಾಸಂಗ ಮಾಡುತಿದ್ದು, ಮಗ ಸುಶಾಂತ್ ಪಿ ಯು ಶಿಕ್ಷಣವನ್ನು ಪಡೆಯುತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.