ಆಲೆಟ್ಟಿ ಪಂಚಾಯತ್ ನಲ್ಲಿ ಕೋವಿಡ್ ಕಾರ್ಯಪಡೆ ಸಭೆ

Advt_Headding_Middle

 

 

ಆಲೆಟ್ಟಿ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್-19 ರ ಕಾರ್ಯಪಡೆ ಸಭೆಯು ಮೇ.31 ರಂದು ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಪಿ.ಡಿ.ಒ.ಕೀರ್ತಿಪ್ರಸಾದ್, ಕಾರ್ಯದರ್ಶಿ ಸೃಜನ್ ಎ.ಜಿ, ಗ್ರಾಮ ಕರಣಿಕರಾದ ಶರತ್ ಕುಮಾರ್ ಉಪಸ್ಥಿತರಿದ್ದರು. ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣದಿಂದ ಎಲ್ಲಾ ವಾರ್ಡಿನ ಸದಸ್ಯರು ಹಾಗೂ ಕಾರ್ಯಪಡೆ ಸದಸ್ಯರು ಸಹಕರಿಸಬೇಕು. ಪ್ರಕರಣ ಕಂಡು ಬಂದ ಮನೆಯವರನ್ನು ಕ್ವಾರೈಂಟೈನ್ ಮಾಡ ಬೇಕು. ಕ್ವಾರಂಟೈನ್ ಗೊಳಗಾದ ಅತ್ಯಂತ ಕಡು ಬಡವರಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ಒದಗಿಸಿಕೊಡುವ ಕಾರ್ಯ ಮಾಡಲಾಗುವುದು. ಈಗಾಗಲೇ ಪಂಚಾಯತ್ ವತಿಯಿಂದ ಗ್ರಾಮದಲ್ಲಿ 35 ಕ್ಕೂ ಹೆಚ್ಚು ಆಹಾರ ಕಿಟ್ ನೀಡಲಾಗಿದೆ ಎಂದು ಪಿ.ಡಿ.ಒ. ತಿಳಿಸಿದರು.
ಮಾಸ್ಕ್ ಇಲ್ಲದೆ ವಿನಾ ಕಾರಣತಿರುಗಾಡುವವರಿಗೆ ಮತ್ತು ಆಟದ ಮೈದಾನದಲ್ಲಿ ಆಟವಾಡುವುದು ಕಂಡು ಬಂದರೆ ಅಂತಹವರಿಗೆ ದಂಡ ವಿಧಿಸುವುದಾಗಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಪಂಚಾಯತ್ ಸದಸ್ಯರು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.