ಐವರ್ನಾಡು ಗ್ರಾಮ ಸ್ಪಂದನಾ ಸಂವಹನ ಕಾರ್ಯಕ್ರಮದ ಫಲಶ್ರುತಿ*

Advt_Headding_Middle

*

*ಹಲವಾರು ವರ್ಷಗಳ ರಸ್ತೆ ಅಭಿವೃದ್ಧಿ ಸಮಸ್ಯೆ ಇತ್ಯರ್ಥಕ್ಕೆ ಒಮ್ಮತ*

ಐವರ್ನಾಡು ಗ್ರಾಮ ಸ್ಪಂದನಾ ಸಂವಹನ ನೇರ ಪೋನ್ ಇನ್ ಕಾರ್ಯಕ್ರಮವು
ಸುದ್ದಿ ಚಾನೆಲ್ ಸಹಯೋಗದಲ್ಲಿ ಮೇ.27 ರಂದು ಗ್ರಾಮ ಪಂಚಾಯತ್ ಹಾಗೂ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಐವರ್ನಾಡಿನಲ್ಲಿ ಆಯೋಜಿಸಲಾಗಿತ್ತು.

 


ಈ ಕಾರ್ಯಕ್ರಮದಲ್ಲಿ ಐವರ್ನಾಡು ಗ್ರಾಮದ ಕೊಯಿಲ-ಕೃಷಿ ಕಾಲೋನಿ ರಸ್ತೆಯ ಮಧ್ಯಭಾಗದಲ್ಲಿ ಮಹಮಾಯಿ ದೇವಿಯ ಕಟ್ಟೆಯಿರುವುದರಿಂದ ರಸ್ತೆ ಅಭಿವೃದ್ದಿ ಪಡಿಸಲು ಅಸಾಧ್ಯವಾಗಿದ್ದು, ಮಳೆಗಾಲದಲ್ಲಿ ಕೆಸರಾಗಿ ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ತೊಂದರೆ ಯಾಗುತ್ತಿರುವುದರಿಂದ ಈ ಸಮಸ್ಯೆ ನಿವಾರಿಸಲು ವಿಜಯ್ ಮಡ್ತಿಲ, ಆಶಾ ಮಡ್ತಿಲ ಮತ್ತಿತರ ಕೆಲವರು ಒತ್ತಾಯಿಸಿದ್ದರು. ಈ ರಸ್ತೆಯನ್ನು ಅಭಿವೃದ್ದಿ ಪಡಿಸಲು ರಸ್ತೆಯ ಮಧ್ಯಭಾಗದಲ್ಲಿರುವ ಮಹಮಾಯಿ ದೇವಿ ಕಟ್ಟೆಯ ಸಮಿತಿಯವರು ವಿರೋಧ ವ್ಯಕ್ತಪಡಿಸುತ್ತಿದ್ದರು.

ಇದರಿಂದಾಗಿ ಈ ರಸ್ತೆಯು ದೇವಿಕಟ್ಟೆಯ ಸಮೀಪ ಹಲವು ವರ್ಷಗಳಿಂದ ಅಭಿವೃದ್ದಿಯಾಗದೇ ನೆನೆಗುದಿಗೆ ಬಿದ್ದಿತ್ತು.
ಅಹವಾಲಿಗೆ ಸ್ಪಂದಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ, ಉಪಾಧ್ಯಕ್ಷರಾದ ಶ್ರೀಮತಿ ಸುಜಾತ ಪವಿತ್ರಮಜಲು, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಎನ್.ಮನ್ಮಥ , ನಿರ್ದೇಶಕರಾದ ಚಂದ್ರಶೇಖರ ಕೊಯಿಲ, ಪಂಚಾಯತ್ ಮಾಜಿ ಉಪಾಧ್ಯಕ್ಷ ಶಾಂತಾರಾಮ ಕಣಿಲೆಗುಂಡಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಯು.ಡಿ. ಶೇಖರ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಕಾರ್ತಿಕ್ ಕೆ.ಎಸ್ ರವರು ಮೇ.31 ರಂದು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಹಾಮಾಯಿ ದೇವಿ ಕಟ್ಟೆಯ ಅಧ್ಯಕ್ಷರಾದ ಕುಂಞ ಕೊಯಿಲ ಹಾಗೂ ಪದಾಧಿಕಾರಿಗಳಾದ ಕೊರಗಪ್ಪ ಕೊಯಿಲ,ಸುಪ್ರಿತ್ ಕೊಯಿಲ,ಜನಾರ್ಧನ ನನ್ಯಡ್ಕ ಮತ್ತಿತರರು ಉಪಸ್ಥಿತರಿದ್ದರು, ಹಾಗೂ ವಿಜಯ ಮಡ್ತಿಲ, ರವಿನಾಥ ಮಡ್ತಿಲ ಉಪಸ್ಥಿತರಿದ್ದರು.
ನಂತರ ರಸ್ತೆ ಮಧ್ಯದಲ್ಲಿರುವ ದೇವಿ ಕಟ್ಟೆಯ ಭಾಗದಲ್ಲಿ ತೀರಾ ಹದಗೆಟ್ಟಿರುವ ನಾ-ದುರಸ್ಥಿ ರಸ್ತೆಯನ್ನು ಅಭಿವೃದ್ದಿ ಪಡಿಸುವ ಬಗ್ಗೆ ಚರ್ಚಿಸಿ, ಈಗ ಕಟ್ಟೆ ಇರುವ ಹಿಂಬದಿ ಭಾಗದಲ್ಲಿ ರಸ್ತೆಯನ್ನು ಗ್ರಾಮ ಪಂಚಾಯತ್ ವತಿಯಿಂದ ಕಾಂಕ್ರೀಟಿಕರಣಗೊಳಿಸುವುದು ಹಾಗೂ ರಸ್ತೆಯನ್ನು ಅಭಿವೃದ್ದಿ ಪಡಿಸಲು ಈಗಿನ ಕಟ್ಟೆಯನ್ನು ಸ್ಥಳಾಂತರಿಸುವುದಾಗಿ ಸಮಿತಿಯವರು ಒಪ್ಪಿ ಒಮ್ಮತಕ್ಕೆ ಬರಲಾಯಿತು. ಈ ಮೂಲಕ ಹಲವು ವರ್ಷಗಳ ರಸ್ತೆ ಸಮಸ್ಯೆಗೆ ತೆರೆ ಎಳೆಯಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.