ಹಾಸನ ಜಿಲ್ಲಾ ಅಬಕಾರಿ ಡಿ.ಸಿ. ಕೇನ್ಯ ಕಣ್ಕಲ್ ಕುಟುಂಬದ ಗೋಪಾಲಕೃಷ್ಣ ಗೌಡ ಪೂಯಿಲ ನಿವೃತ್ತಿ

Advt_Headding_Middle

ಹಾಸನ ಜಿಲ್ಲೆಯಲ್ಲಿ ಅಬಕಾರಿ ಡಿ.ಸಿ.ಯಾಗಿ ಸೇವೆ ಸಲ್ಲಿಸುತ್ತಿದ್ದ ಕೇನ್ಯ ಕಣ್ಕಲ್ ಕುಟುಂಬದವರಾದ ಗೋಪಾಲಕೃಷ್ಣ ಗೌಡ ಪೂಯಿಲರವರು ಮೇ. 31ರಂದು ನಿವೃತ್ತಿ ಹೊಂದಿದ್ದಾರೆ.
ಇವರು ಕಡಬ ತಾಲೂಕಿನ 102ನೆಕ್ಕಿಲಾಡಿ ಗ್ರಾಮದ ಪುಯಿಲ ಮನೆಯ ಶಾಂತಪ್ಪ ಗೌಡ ಮತ್ತು ರುಕ್ಮಿಣಿ ಅವರ ಪುತ್ರ. ಆರಂಭದಲ್ಲಿ 6 ತಿಂಗಳು ನ್ಯಾಯಬೆಲೆ ಅಂಗಡಿಯಲ್ಲಿ ಗುಮಾಸ್ತನಾಗಿ ಕರ್ತವ್ಯ ನಿರ್ವಹಿಸಿ, ತದನಂತರ ಮಂಗಳೂರಿನ ಪ್ರತಿಷ್ಠಿತ ಸಂಜೀವ ಶೆಟ್ಟರ ಬಟ್ಟೆ ಕಾರ್ಖಾನೆಯಲ್ಲಿ ಬಟ್ಟೆಗೆ ಬಣ್ಣ ಹಾಕುವ ಕೆಲಸಕ್ಕೆ ಸೇರಿಕೊಂಡು ಇಲ್ಲಿ 24 ದಿನಗಳು ಕೆಲಸ ಮಾಡಿದ ಮೇಲೆ ಸ್ನೇಹಿತನೊಟ್ಟಿಗೆ ಮಾಲಿಕರ ಅನುಮತಿ ಪಡೆದು ಬಂಟ್ವಾಳದಲ್ಲಿ ನಡೆಯುತ್ತಿದ್ದ ಸೇನಾ ಅರ್ಹತಾ ಪರೀಕ್ಷೆಗೆ ತೆರಳಿ ಆಯ್ಕೆಗೊಂಡು ತಕ್ಷಣದಿಂದಲೇ ಪುಣೆಯಲ್ಲಿ ತರಬೇತಿಗೆ ತೆರಳಿ ಬಳಿಕ ಸೇನೆಗೆ ಸೇರಿದ್ದರು. ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಪಂಜಾಬ್ ವಿಶ್ವ ವಿದ್ಯಾಲಯದಲ್ಲಿ ಬಿ.ಎ. ಪದವಿಯನ್ನು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಇವರು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಮೈಸೂರು ವಿಶ್ವವಿದ್ಯಾಲಯ ಮುಖಂತರ ಎಂ.ಎ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಕೆ.ಎ.ಎಸ್.ಪರೀಕ್ಷೆ ಉತ್ತೀರ್ಣರಾದರು. ಭಾರತೀಯ ಸೇನೆಯಲ್ಲಿ ಸುಮಾರು ಹದಿನಾರುವರೆ ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ಸರಕಾರದ ಹಲವು ಪುರಸ್ಕಾರಗಳನ್ನು ಪಡೆದರು, ಬಳಿಕ 1997ರಲ್ಲಿ ಸ್ವಯಂ ನಿವೃತ್ತಿ ಪಡೆದು 1998,1999,2004ರಲ್ಲಿ ನಡೆದ ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳನ್ನು ಬರೆದರು.
1998ರಲ್ಲಿ ತಹಶೀಲ್ದಾರ್ ಆಗಿ ನೇಮಕಗೊಂಡು, 98-99ರಲ್ಲಿ ಅಬಕಾರಿ ಡಿವೈಎಸ್ಪಿ ನೇಮಕಗೊಂಡರು. ಬಳಿಕ 2006ರಲ್ಲಿ ಕೆ.ಎ.ಎಸ್. ಪರೀಕ್ಷೆಯಲ್ಲಿ ಆಯ್ಕೆಯಾಗಿ ಅಬಕಾರಿ ಉಪ ಅಧೀಕ್ಷರಾಗಿ ನೇಮಕಗೊಂಡರು. 2009ರಲ್ಲಿ ಅಬಕಾರಿ ಅಧೀಕ್ಷಕರಾಗಿ ಪದೋನ್ನತಿ ಹೊಂದಿ ಬೆಂಗಳೂರು, ಶಿವಮೊಗ್ಗಗಳಲ್ಲಿ ಕರ್ತವ್ಯ ನಿರ್ವಹಿಸಿ ಹಾಸನ ಜಿಲ್ಲಾ ಅಬಕಾರಿ ಡಿ.ಸಿ.ಯಾಗಿ ನೇಮಕಗೊಂಡು ಬಳಿಕ ಹಾವೇರಿ, ಬೆಳಗಾವಿ ವಿಭಾಗದಲ್ಲಿಯೂ ಕರ್ತವ್ಯ ನಿರ್ವಹಿಸಿ ಬಳಿಕ ಪುನಃ ಹಾಸನ ಜಿಲ್ಲಾ ಅಬಕಾರಿ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿ ಮೇ. 31ರಂದು ವಯೋ ನಿವೃತ್ತಿ ಹೊಂದಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.