ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಕರುಣಾಕರ ಕರ್ಲಪ್ಪಾಡಿ, ಮುತ್ತಣ್ಣರಿಗೆ ಬೀಳ್ಕೊಡುಗೆ ಸಮಾರಂಭ

Advt_Headding_Middle

ಸುಳ್ಯದ ಕೆ.ಎಸ್. ಆರ್.ಟಿ.ಸಿ ಸಂಸ್ಥೆಯ ಸುಳ್ಯ ಘಟಕದಲ್ಲಿ ಸಹಾಯಕ ಸಂಚಾರ ನಿರೀಕ್ಷಕರಾಗಿದ್ದ ಕರುಣಾಕರ ಕರ್ಲಪ್ಪಾಡಿ ಹಾಗೂ ಚಾಲಕ ಬೋಧಕರಾಗಿದ್ದ ಮುತ್ತಣ್ಣ ಇವರಿಗೆ ಬೀಳ್ಕೊಡುಗೆ ಸಮಾರಂಭವು ಸುಳ್ಯ ಘಟಕದಲ್ಲಿ ಮೇ.31 ರಂದು ನಡೆಯಿತು.


ಬಂದರು ಹಾಗೂ ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವರಾದ ಎಸ್.ಅಂಗಾರರವರು ಸನ್ಮಾನಿಸಿ ಮಾತನಾಡಿದರು. ವೇದಿಕೆಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ಘಟಕ ವ್ಯವಸ್ಥಾಪಕ ಸುಂದರ್ ರಾಜ್, ಸಂಚಾರ ನಿರೀಕ್ಷಕ ಪದ್ಮನಾಥನ್ ಉಪಸ್ಥಿತರಿದ್ದರು. ನಂತರ ಸುಳ್ಯ ಘಟಕಕ್ಕೆ ಶುದ್ಧೀಕೃತ ಹಾಗೂ ಶೀತಲೀಕೃತ ಕುಡಿಯುವ ನೀರಿನ ಟ್ಯಾಂಕನ್ನು ಕರುಣಾಕರ ಕರ್ಲಪ್ಪಾಡಿ ಹಾಗೂ ನಿವೃತ್ತ ಸಂಚಾರ ನಿಯಂತ್ರಕರಾದ ಗಂಗಾಧರ ಮಾವಂಜಿ, ಹರಿಶ್ಚಂದ್ರ ಮೇಲಡ್ತಲೆ ಕೊಡುಗೆಯಾಗಿ ನೀಡಿದರು.


ಈ ಸಂದರ್ಭದಲ್ಲಿ ಸುಳ್ಯ ಸಂಚಾರ ನಿಯಂತ್ರಕರಾದ ಶಾಂತಪ್ಪ, ಶಿವಪ್ಪ, ಮೋನಪ್ಪ, ಕೃಷ್ಣಪ್ಪ, ಸುಬ್ರಹ್ಮಣ್ಯ ಸಂಚಾರ ನಿಯಂತ್ರಕ ಗೋಪಾಲಕೃಷ್ಣ ಎಡಮಂಗಲ, ವೇಣುಗೋಪಾಲ ಕೈಕಂಬ, ಮೋನಪ್ಪ ಗೆಜ್ಜೆ, ಗೋಪಾಲ ಈಶ್ವರಡ್ಕ ಹಾಗೂ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕು. ರೇಖಾ ಕರ್ಲಪ್ಪಾಡಿ ಪ್ರಾರ್ಥಿಸಿದರು.ಹರಿಶ್ಚಂದ್ರ ಮೇಲಡ್ತಲೆ ಹಾಗೂ ಲೋಕೇಶ್ ಸನ್ಮಾನ ಪತ್ರ ವಾಚಿಸಿದರು. ಗಂಗಾಧರ ಮಾವಂಜಿ ಕಾರ್ಯಕ್ರಮ ನಿರೂಪಿಸಿ, ಚಾರ್ಜ್ ಮೆನ್ ರಾಯಣ್ಣ ಗೌಡ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.