ಅರಂತೋಡು : ಸಹಕಾರಿ ಸಂಘದಲ್ಲಿ ಕೊಕ್ಕೋ ಖರೀದಿಯ ಭರಾಟೆ- ಸಿಬ್ಬಂದಿಯೊಂದಿಗೆ ಖರೀದಿಗೂ ಕೈ ಜೋಡಿಸಿದ ಆಡಳಿತ ಮಂಡಳಿ

Advt_Headding_Middle

 

 

ಅರಂತೋಡು ಸಹಕಾರಿ ಕ್ಷೇತ್ರದಲ್ಲಿ ರೈತರಿಗೆ ವರದಾನವಾದ ಕೊಕ್ಕೋ ಖರೀದಿಯ ಭರಾಟೆ ಜೋರಾಗಿ ನಡೆಯುತ್ತಿದ್ದು, ಈ ಸಂದರ್ಭ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರೂ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು ಖರೀದಿಗೆ ಕೈ ಜೋಡಿಸುವ ಮೂಲಕ ಸಹಕರಿಸಿದರು.

ಸೊಸೈಟಿಗೆ ನಿರೀಕ್ಷೆಗೂ ಮೀರಿ ಸುಮಾರು 14,642 ಕೆ.ಜಿ. ಕೊಕ್ಕೋ ರೈತರಿಂದ ಬರುತ್ತಿದ್ದು, ಸರ್ಕಾರದ ನಿಯಮದ ಪ್ರಕಾರ ನಿಗದಿ ಪಡಿಸಿದ ಸಮಯದಲ್ಲಿ ಖರೀದಿಸಿ ಕ್ಯಾಂಪ್ಕೋಗೆ ತಲುಪಿಸುವ ಉದ್ಧೇಶದಿಂದ ಸಿಬ್ಬಂದಿಯ ಜೊತೆ ಆಡಳಿತ ಮಂಡಳಿಯವರೂ ಕೈ ಜೋಡಿಸಬೇಕಾದ ಅನಿವಾರ್ಯತೆ ಬಂದಿದೆ.

ಹಳದಿ ರೋಗದ ಸಂಕಷ್ಟದಿಂದ ರೈತರು ಬಳಲುತ್ತಿದ್ದ ಈ ಸಂದರ್ಭದಲ್ಲಿ ಕೊಕ್ಕೋ ಬೆಳೆಯು ರೈತರಿಗೆ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತಿದ್ದು, ಈ ಸಮಸ್ಯೆಯನ್ನು ಅರಿತ ಅರಂತೋಡು ತೊಡಿಕಾನ ಪ್ರಾ.ಕೃ,.ಪ. ಸಹಕಾರಿ ಸಂಘವು ಕ್ಯಾಂಪ್ಕೋದೊಂದಿಗೆ ಮಾತುಕತೆ ನಡೆಸಿ, ಸಹಕಾರಿ ಸಂಘದಲ್ಲಿ ಕೊಕ್ಕೋ ಖರೀದಿಯನ್ನು ಪ್ರಾರಂಭಿಸಿತು. ಸಂಘಕ್ಕೆ ಹೆಚ್ಚಿನ ಲಾಭವಿಲ್ಲದಿದ್ದರೂ ರೈತರ ಸಂಕಷ್ಟ ನಿವಾರಣೆಗೆ ಸಹಕಾರಿಯಾಗಬಹುದೆಂಬ ಉದ್ದೇಶದಿಂದ ಖರೀದಿ ಪ್ರಾರಂಭಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.