ಎಸ್.ಡಿ.ಪಿ.ಐ. ಸುಳ್ಯ ವಿಧಾನಸಭಾ ಕ್ಷೇತ್ರ ವತಿಯಿಂದ ಸಿ.ಎ.ಎ. ಕಾನೂನು ವಿರೋಧಿಸಿ ಹಲವು ಕಡೆಯಲ್ಲಿ ಸಾಂಕೇತಿಕ ಪ್ರತಿಭಟನೆ

Advt_Headding_Middle

 

ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಜೂ. 1 ರಂದು ದೇಶಾದ್ಯಂತ ಆಯೋಜಿಸಿದ ಸಾಂಕೇತಿಕ ಪ್ರತಿಭಟನೆಯ ಅಂಗವಾಗಿ ” ಕೇಂದ್ರ ಸರ್ಕಾರ ಪುನಃ ಜಾರಿಗೆ ತಂದಿರುವ ಸಿ.ಎ.ಎ. ಕರಾಳ ಕಾನೂನನ್ನು ಹಿಂಪಡೆಯಿರಿ ” ಎಂಬ ಭಿತ್ತಿಪತ್ರಗಳನ್ನು ಹಿಡಿದು ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವತಿಯಿಂದ 23 ಕಡೆಗಳಲ್ಲಿ ಹಾಗೂ 25 ಕ್ಕೂ ಮನೆಗಳಲ್ಲಿ ಪ್ರದರ್ಶನ ನಡೆಸಲಾಯಿತು. ಈ ಸಂದರ್ಭ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು.
ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರರಿಂದ ಪೌರತ್ವಕ್ಕಾಗಿ ಗುಜರಾತ್, ರಾಜಸ್ಥಾನ, ಛತ್ತೀಸ್ ಗಡ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ 13 ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಿದ ಗೃಹ ಸಚಿವಾಲಯದ ಕ್ರಮವನ್ನು ಆದಷ್ಟು ಬೇಗನೆ ಹಿಂಪಡೆಯಬೇಕು ಹಾಗೂ ಇದು ಜನಸಾಮಾನ್ಯರ ಬದುಕಿನಲ್ಲಿ ವ್ಯತಿರಿಕ್ತವಾಗಿ ಪರಿಣಾಮ ಬೀರಲಿದ್ದು ದೇಶವು ಮತ್ತೇ ಅಶಾಂತಿಯ ದಿಕ್ಕಿಗೆ ಮುಖಮಾಡಬಹುದು ಎಂಬ ಎಚ್ಚರಿಕೆಯನ್ನೂ ನೀಡಲಾಯಿತು.

 

ದೇಶವು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಈ ಹಾಸ್ಯಾಸ್ಪದ ಕೃತ್ಯದಿಂದ ಕೇಂದ್ರ ಸರ್ಕಾರವು ರಾಷ್ಟ್ರದ ಜನರ ನೋವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಬಿಜೆಪಿ ಸರ್ಕಾರವು ದೇಶವನ್ನು ಆಳಲು ಅಸಮರ್ಥ, ಅನರ್ಹ ಮತ್ತು ಅಶಕ್ತ ಎಂದು ಸಾಬೀತುಪಡಿಸಿದೆ. ದಿನದಿಂದ ದಿನಕ್ಕೆ ಇಂಧನ ಬೆಲೆಗಳು ಏರುತ್ತಿವೆ, ಸರಕುಗಳ ಬೆಲೆ ಕೂಡ ಗಗನಕ್ಕೇರುತ್ತಿದೆ. ಕೋವಿಡ್ ಸಾಂಕ್ರಾಮಿಕವು ದೇಶಾದ್ಯಂತ ಸಾಕಷ್ಟು ಸಾವು-ನೋವಿಗೆ ಕಾರಣವಾಗಿ ಜನರು ತತ್ತರಿಸುವಂತೆ ಮಾಡಿದೆ. ಕೋವಿಡ್ ಸೋಂಕಿತರಿಗೆ ಸರಿಯಾದ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಕಾಳಜಿ ವಹಿಸುತ್ತಿಲ್ಲ. ಉಸಿರಾಟದ ಸಮಸ್ಯೆ ಇರುವ ಕೋವಿಡ್ ರೋಗಿಗಳಿಗೆ ಸಮರ್ಪಕವಾಗಿ ಆಮ್ಲಜನಕ ಪೂರೈಸಲು ಯಾವುದೇ ವ್ಯವಸ್ಥೆ ಇಲ್ಲ. ಎಲ್ಲೆಡೆ ಲಸಿಕೆ ಕೊರತೆ ಎದ್ದುಕಾಣುತ್ತಿದೆ. ದೇಶದ ನಾಗರಿಕರು ತಮ್ಮ ಜೀವನ ನಿರ್ವಹಣೆಗೆ ಕಠಿಣ ಸವಾಲುಗಳನ್ನು ಎದುರಿಸುತ್ತಿರುವಾಗ ಜನರ ಮನಸ್ಸಿನಲ್ಲಿ ಕೋಮುದ್ವೇಷದ ಜ್ವಾಲೆಯನ್ನು ಹೊತ್ತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಟೀಕಿಸಿರುವ ಎಸ್.ಡಿ.ಪಿ.ಐ. ಇಂತಹ ಸೋಗಲಾಡಿತನದ ಹಾಗೂ ಫ್ಯಾಸಿಸಮ್ ಅಜೆಂಡದ ಸರ್ಕಾರದ ಬಗ್ಗೆ ಸದಾ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಕರೆ ನೀಡಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.