ಕರ್ಮ ತಿರುಗಿದಾಗ…

Advt_Headding_Middle

 

 

ಕೊರೋನ ಎಂದಾಕ್ಷಣ ನೆನಪಾಗುವುದೇ ಅದೆಷ್ಟೋ ದಿನಗಳನ್ನು ಕತ್ತಲೆಯ ಕೋಣೆಯೊಳಗೆ ಕಳೆದಂತೆ, ಬಂಧಿಸಲ್ಪಟ್ಟ ಚಿಟ್ಟೆಯಂತೆ ಕೆಲಸಕಾರ್ಯವಿಲ್ಲದೆ ನಾಳೆಯ ಬಗ್ಗೆ ಯೋಚಿಸುತ್ತ ಕಳೆದ ದಿನಗಳು. ನಮ್ಮ ಜೀವನವನ್ನೊಮ್ಮೆ ಹಿಂತಿರುಗಿ ನೋಡಿದಾಗ ಉರುಳುತ್ತಿದ್ದ ದಿನಗಳು ಹೊರೆತು ಬೇರೇನೂ ಇಲ್ಲ. ಸಾವಿನ ಎದುರಲ್ಲೊಮ್ಮೆ ನಿಂತು ಅದರೆಡೆಗೆ ಕಣ್ಣು ಹಾಯಿಸಿದಂತೆ ಕಳೆದ ದಿನಗಳು ಹಾಗೂ ಕಳೆಯುತ್ತಿರುವ ದಿನಗಳು. ಅದೆಷ್ಟೋ ಕುಟುಂಬಗಳಲ್ಲಿ ಹೊಟ್ಟೆಯ ಹಿಟ್ಟಿಗಾಗಿ ಹಾತೊರೆಯುತ್ತಿರುವ ಕಂಗಳು, ಆ ಕಂಗಳಿಗೆ ಭರವಸೆಯ ಬೆಳಕ ಹರಿಸಿ ನೆರವಿನ ಹಸ್ತವ ನೀಡುವ ಕೈಗಳು, ಇದೆಲ್ಲ ಒಂದೆಡೆಯಾದರೆ ಪುಟ್ಟ ಸಸಿಯೊಂದು ಬೆಳೆದು ನಿಂತಿರಲು ಚಿಗುರ ಚಿವುಟುವಂತೆ ಬಂದ ಅಟ್ಟಹಾಸ ಯುವಜನತೆಯ ಮೇಲೆ ಪ್ರಬಲವಾದ ಪ್ರಭಾವವನ್ನು ಬಿರುತ್ತಾ ಕಷ್ಟಗಳ ಸಂಕೋಲೆಯನ್ನು ಕಡಿದು ವಿದ್ಯಾಭ್ಯಾಸ ಮುಗಿಸಿ ಜೀವನಕ್ಕಾಗಿ ಉದ್ಯೋಗವನ್ನರಸಿ ಬಂದಾಗ ಕೊರೋನ ತನ್ನ ಆಜಾನುಬಾಹುವನ್ನು ವಿಶಾಲವಾಗಿ ಚಾಚಿಕೊಂಡು ಜೀವನದ ಗುರಿ ಮತ್ತು ಆಸೆಗಳೆರಡನ್ನು ದೂರೆಡೆಗೆ ಎಸೆದಿದೆ. ಇಲ್ಲಿಗೆ ಮುಗಿಯಿತೇನು, ಇಲ್ಲ ಇನ್ನು ತನ್ನ ಆದೇಶವನ್ನು ೧ ನೇ ಅಲೆ ೨ ನೇ ಅಲೆಯಂತೆ ವಿಶೇಷ ರೂಪ ಧರಿಸಿ ಜೀವ ಜೀವನಗಳೆರಡನ್ನು ಧೂಳಿಪಟವನ್ನಾಗಿ ಮಾಡಲು ಇನ್ನೊಂದು ಮೆಟ್ಟಿಲೇರಿದೆ. ಅದೆಷ್ಟೋ ದೇಹಗಳು ಅನಾಥವಾಗಿ ಪರಲೋಕ ಸೇರಿವೆ. ಅವುಗಳಿಗೆ ತನ್ನವರು ಯಾರು ಇಲ್ಲದಂತ ಪರಿಸ್ಥಿತಿಯಲ್ಲಿ ಇಹಲೋಕವನ್ನು ತ್ಯಜಿಸಿವೆ. ಮಾನವನ ಕರ್ಮ ಇನ್ನೊಂದು ರೂಪ ತಾಳಿ ಹಿಂದಿರುಗಿವೆ ಅವನ ಕರ್ಮಗಳಿಗೆ ಪ್ರಕೃತಿಯ ಉತ್ತರ ದಿಗ್ಬ್ರಮೆಗೊಳಿಸುವಂತೆ ಬಡಿದು ಹೇಳುತ್ತಿವೆ.
ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ ಕಾಲ ಕೆಡುವುದಿಲ್ಲ. ಜನರ ನಡತೆ,ಆಚಾರ-ವಿಚಾರ ಇಂದು ತನ್ನನ್ನು ತಾನೇ ಸಾವಿನ ಬಾಯಿಗೆ ದೂಡುತ್ತಿವೆ. ನಮ್ಮ ದುಃಖಗಳಿಗೆ ನಾವೇ ಜವಾಬ್ದಾರರು ಮತ್ತಾರೂ ಅಲ್ಲ, ನಮ್ಮ ಅದೃಷ್ಟಗಳನ್ನು ರೂಪಿಸಿಕೊಳ್ಳುವ ಭರದಲ್ಲಿ ನಾವು ಪ್ರಕೃತಿಯ ಅವನತಿಗೆ ಕಾರಣಕರ್ತರಾಗಿದ್ದೇವೆ. ತುಂಬಿದ ಜೇಬು ಅಂದು ಆಟವಾಡುತ್ತಿತ್ತು
ಖಾಲಿಯಾದ ಪ್ರಕೃತಿ ಇಂದು ಆಟವಾಡುತ್ತಿದೆ. ಇನ್ನಾದರೂ ಅರಿತು ತಿಳಿದು ಜಗತ್ತಿನ ಕಟ್ಟ ಕಡೆಯ ಮರವನ್ನು ಧರೆಗುರುಳಿಸುವ ಮುನ್ನ ನಮ್ಮೊಂದಿಗೆ ಪ್ರಕೃತಿ ಇರಲಿ ಎಂಬಂತೆ ಬದುಕಿನ ದಾರಿಯಲ್ಲಿ ಮುನ್ನಡೆಯೋಣ. ಚಾಣಕ್ಯನ ಮಾತಿನಂತೆ ನಮ್ಮ ಅವಶ್ಯಕತೆಗಿಂತ ಏನು ಹೆಚ್ಚಾದರೂ ಅದು ವಿಷವಾಗಿ ಮಾರ್ಪಡುವುದು ಅದು ಅಧಿಕಾರವಿರಬಹುದು, ಐಶ್ವರ್ಯ, ಹಸಿವು, ಹಾಗೂ ದುರಾಸೆ ಯಾವುದಾದರು ಇರಬಹುದು. ಅವಶ್ಯಕತೆಗಿಂತ ಮೀರಿ ಹೋದರೆ ಅನಾಹುತ ಖಂಡಿತ.

 

ಬರಹ: ತೇಜಸ್ವಿನಿ ಬೊಮ್ಮೆಟ್ಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.