ಲಯನ್ಸ್ ಕ್ಲಬ್ ವತಿಯಿಂದ ಕಮಲ ಬೂಡುರವರಿಗೆ ಮನೆ ಹಸ್ತಾಂತರ

Advt_Headding_Middle

ಬೂಡು ಪರಿಸರದ ನಿವಾಸಿ ಕಮಲ ಎಂಬವರು ವಾಸಿಸುತ್ತಿದ್ದ ಮನೆ ಬಹಳ ಶಿಥಿಲಗೊಂಡಿದ್ದು, ವಾಸಿಸಲು ಯೋಗ್ಯವಾದ ಪರಿಸ್ಥಿತಿಯಲ್ಲಿ ಇರಲಿಲ್ಲ. ಗಾಳಿ-ಮಳೆಗೆ ಯಾವುದೇ ಸಂದರ್ಭದಲ್ಲಿ ಬೀಳುವಂತ ಸ್ಥಿತಿಯಲ್ಲಿ ಮನೆಯ ಪರಿಸ್ಥಿತಿ ಇತ್ತು. ಲಯನ್ಸ್ ಮಾಜಿ ಕಾರ್ಯದರ್ಶಿ ರಾಮಕೃಷ್ಣ ರೈ, ಸ್ಥಳೀಯ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್ ರವರು ಮನೆಯ ಮಾಹಿತಿ ಪಡೆದು ಸುಳ್ಯ ಲಯನ್ಸ್ ಕ್ಲಬ್ಬಿನ ಹಾಗೂ ಸುಳ್ಯ ನಗರ ಪಂಚಾಯತ್ ಗಮನಕ್ಕೆ ನೀಡಿ, ಮನೆಯ ದುರಸ್ತಿ ಕಾರ್ಯಕ್ಕೆ ಸಹಕರಿಸುವಂತೆ ವಿನಂತಿಸಿದರು. ಇದಕ್ಕೆ ಸ್ಪಂದಿಸಿದ ಸುಳ್ಯ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಪದಾಧಿಕಾರಿಗಳು ಸುಳ್ಯ ನಗರ ಪಂಚಾಯತ್ ನ ಸಹಕಾರ ಪಡೆದು ಕೇವಲ ೪೫ ದಿನಗಳಲ್ಲಿ ವಾಸಿಸಲು ಯೋಗ್ಯವಾಗಿರುವ ಎರಡು ಕೋಣೆಯ ಒಂದು ಉತ್ತಮ ಮನೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು. ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಮರು ನಿರ್ಮಿಸಿದ ಮನೆಯನ್ನು ಇಂದು ಫಲಾನುಭವಿ ಕಮಲರವರಿಗೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸುಳ್ಯ ಲಯನ್ಸ್ ಅಧ್ಯಕ್ಷ ರಾಮಚಂದ್ರ ಪೆಲ್ತಡ್ಕ ನೇತೃತ್ವ ವಹಿಸಿದ್ದರು. ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ನೂತನ ಮನೆಯನ್ನು ಉದ್ಘಾಟಿಸಿ ಮಾತನಾಡಿ ಈ ಮನೆಯ ನಿರ್ಮಾಣಕ್ಕೆ ಸಹಕರಿಸುವಂತೆ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್ ರವರು ಮನವಿ ಮಾಡಿಕೊಂಡಿದ್ದರು. ಅದರಂತೆ ಪಂಚಾಯತ್ ಕ್ರಿಯಾ ಯೋಜನೆ ಅಡಿಯಲ್ಲಿ ೫೦ ಸಾವಿರ ರೂಪಾಯಿಗಳ ಅನುದಾನವನ್ನು ಮಂಜೂರು ಪಡಿಸಿ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಪಂಚಾಯತ್ ವತಿಯಿಂದ ಸಹಕರಿಸಲಾಗಿದೆ. ಈ ಮನೆ ನಿರ್ಮಾಣಕ್ಕೆ ಸಂಪೂರ್ಣವಾಗಿ ಸಹಕರಿಸಿದ ಸುಳ್ಯ ಲಯನ್ಸ್ ಕ್ಲಬ್ಬಿನವರ ಕಾರ್ಯಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಸುಳ್ಯದ ಪ್ರತಿಯೊಂದು ಸಂಘ-ಸಂಸ್ಥೆಗಳು ಬಡವರಿಗೆ ಮತ್ತು ನಿರಾಶ್ರಿತರಿಗೆ ಆಶ್ರಯ ನೀಡುವ ಕೆಲಸ ಕಾರ್ಯಗಳನ್ನು ಮುಂದುವರಿಸಬೇಕು. ಎಲ್ಲವೂ ಸರ್ಕಾರದ ಮೇಲೆ ಜವಾಬ್ದಾರಿ ನೀಡುವ ಕೆಲಸವಾಗಬಾರದು. ನಾವು ಕೂಡ ಈ ರೀತಿಯ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಬಡವರ ಕಷ್ಟಕ್ಕೆ ಸಹಕರಿಸಬೇಕೆಂದು ಹೇಳಿದರು. ಹಾಗೂ ಫಲಾನುಭವಿ ಕಮಲ ರಿಗೆ ಶುಭಕೋರಿದರು.
ರೂವಾರಿ ಸುಳ್ಯ ಲಯನ್ಸ್ ಅಧ್ಯಕ್ಷ ರಾಮಚಂದ್ರ ಪೆಲ್ತಡ್ಕ ರವರು ನೂತನ ಮನೆಯ ಬೀಗದ ಕೈಯನ್ನು ಕಮಲ ರಿಗೆ ಹಸ್ತಾಂತರಿಸಿ ಮನೆ ನಿರ್ಮಾಣಕ್ಕೆ ಸಹಕರಿಸಿದ ಲಯನ್ಸ್ ವಿನೋದ್ ಲಸ್ರಾದೋ, ರಿಯಾಜ್ ಕಟ್ಟೆ ಕಾರ್ಸ್, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಹಾಗೂ ಜಿಲ್ಲಾ ಮತ್ತು ಸುಳ್ಯದ ಎಲ್ಲಾ ಲಯನ್ಸ್ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುಳ್ಯ ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿ ಲಯನ್ ವೀರಪ್ಪಗೌಡ ಕನಕ್ಕಲ್, ಕೋಶಾಧಿಕಾರಿ ಲಯನ್ ಸಂಜೀವ ಗೌಡ ಕತ್ತಲಡ್ಕ, ನ ಪಂ ಸದಸ್ಯ ರಿಯಾಜ್ ಕಟ್ಟೆಕಾರ್ಸ್, ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್, ಬೂಡು ಅಂಗನವಾಡಿ ಕಾರ್ಯಕರ್ತೆ ಕವಿತಾ, ಸ್ಥಳೀಯರಾದ ಕುಂಞಾ, ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.