ಮರದಡಿಯಲ್ಲಿದ್ದ ಮಗು ಮತ್ತು ಬಾಣಂತಿಯನ್ನು ಮನೆ ಸೇರಿಸಿದ ನ.ಪಂ. ಸದಸ್ಯ

Advt_Headding_Middle

 

ಸುಳ್ಯದ ಗಾಂಧಿನಗರ ಸಮೀಪ ಆಲೆಟ್ಟಿ ರಸ್ತೆಯ ಬದಿಯ ಮರದಡಿಯಲ್ಲಿ ಆಶ್ರಯ ಪಡೆದಿದ್ದ ಅಲೆಮಾರಿ ಜನಾಂಗದ ಮಗು ಮತ್ತು ಬಾಣಂತಿಯನ್ನು ನ.ಪಂ. ಸದಸ್ಯ ಶರೀಫ್ ಕಂಠಿಯವರು ಮನೆ ಸೇರಿಸಿ ಮಾನವೀಯತೆ ಮೆರೆದ ಘಟನೆ ವರದಿಯಾಗಿದೆ.


ಗಾಂಧಿನಗರ ಆಲೆಟ್ಟಿ ರಸ್ತೆಯ ಬದಿಯಲ್ಲಿರುವ ಮರದಡಿಯಲ್ಲಿ ಮಗು ಮತ್ತು ಬಾಣಂತಿ ಆಕೆಯ ತಂದೆ, ತಾಯಿಯ ಜೊತೆ ಆಶ್ರಯ ಪಡೆದಿರುವ ವಿಚಾರವನ್ನು ಸಾರ್ವಜನಿಕರಿಂದ ತಿಳಿದ ಶರೀಫ್ ಕಂಠಿಯವರು ಅಲ್ಲಿಗೆ ಹೋಗಿ ವಿಚಾರಿಸಿದಾಗ ನದಿಯಲ್ಲಿ ಮೀನು ಹಿಡಿಯುವ ಬೆಸ್ತ ಜನಾಂಗದ ಅಲೆಮಾರಿ ಕುಟುಂಬದ ಗರ್ಭಿಣಿ ಯುವತಿ ಮಂಗಳೂರಿನ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿ ಕೆಲ ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಸುಳ್ಯಕ್ಕೆ ಬಂದರೆಂದೂ, ಸುಳ್ಯ ಪರಿಸರದಲ್ಲಿ ಈ ಹಿಂದೆ ಟೆಂಟ್ ಹಾಕಿ ಅವರು ಇದ್ದುದರಿಂದ ಅದೇ ಕಾರಣಕ್ಕಾಗಿ ಅವರು ಸುಳ್ಯಕ್ಕೆ ಬಂದಿದ್ದು ಮರದಡಿಯಲ್ಲಿ ಟೆಂಟ್ ಹಾಕದೆಯೇ ಆಶ್ರಯ ಪಡೆದಿದ್ದರೆಂದು ಗೊತ್ತಾಯಿತು. ಟೆಂಟ್ ಅಥವಾ ರೂಂ ಮಾಡಲು ಅವರಿಗೆ ಆರ್ಥಿಕ ಶಕ್ತಿ ಇದ್ದಿರಲಿಲ್ಲವೆನ್ನಲಾಗಿದೆ. ಅದಕ್ಕಾಗಿ ಶರೀಫ್ ಕಂಠಿಯವರು ಗಾಂಧಿನಗರ ಸಮೀಪವಿರುವ ತಮ್ಮ ಬಾಡಿಗೆ ಕೊಠಡಿಗೆ ಅವರನ್ನು ಕರೆದೊಯ್ದು ಆಶ್ರಯ ನೀಡಿದರೆಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.