ಲತೀಶ್ ಗುಂಡ್ಯ ವಿರುದ್ಧ ದೂರು : ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲು

Advt_Headding_Middle

 

ಸುಳ್ಯ ಶಾಂತಿನಗರ ನಿವಾಸಿ ಅಭಿಲಾಶ್ ಎಂಬವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಸಂದೇಶ ರವಾನೆ ಮಾಡಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕಿರುವುದಾಗಿ ಬಜರಂಗದಳದ ಮುಖಂಡ ಲತೀಶ್ ಗುಂಡ್ಯ ರವರ ಮೇಲೆ ದಕ್ಷಿಣ ಕನ್ನಡ ಜಿಲ್ಲಾ ಅಂಬೇಡ್ಕರ್ ರಕ್ಷಣಾ ವೇದಿಕೆಯ ಅಧ್ಯಕ್ಷ ಸುಂದರ ಪಾಟಾಜೆ ರವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪುತ್ತೂರು ವಿಭಾಗದ ಡಿವೈಎಸ್ಪಿ ಮತ್ತು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

” ಪ್ರಗತಿ ಆಂಬುಲೆನ್ಸ್ ಚಾಲಕ ಶಾಂತಿನಗರ ನಿವಾಸಿ ಅಭಿಲಾಶ್ ಎಂಬುವವರು ಕೋವಿಡ್ ರೋಗಿಯೊಬ್ಬರ ಕುಟುಂಬಸ್ಥರಿಂದ 7 ಸಾವಿರ ರೂಪಾಯಿ ಪಡೆದಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಸಾಮಾಜಿಕ ಜಾಲತಾಣ ವಾದ ಫೇಸ್ಬುಕ್ ವಾಟ್ಸ್ಅಪ್ ಗಳಲ್ಲಿ ಹರಿಬಿಟ್ಟಿರುತ್ತಾರೆ. ಇದಕ್ಕೆ ಕಾರಣ ಅಭಿಲಾಶ್ ರವರು ಚಲಾಯಿಸುವ ಆಂಬುಲೆನ್ಸ್ ವಾಹನ ಮುಸ್ಲಿಂ ಸಮುದಾಯದ ಪ್ರಗತಿ ಅಶ್ರಫ್ ಎಂಬವರದಾಗಿದ್ದು, ನೀನು ಮುಸ್ಲಿಂ ಸಮುದಾಯದವರ ಆಂಬುಲೆನ್ಸ್ ವಾಹನವನ್ನು ಚಲಾಯಿಸಬಾರದು ಮತ್ತು ಅದರಲ್ಲಿ ಹಿಂದೂ ಸಮುದಾಯದವರ ಮೃತಶರೀರವನ್ನು ಕೊಂಡೊಯ್ಯ ಬಾರದೆಂದೂ, ಆ ರೀತಿಯಾಗಿ ಮಾಡಿದರೆ ನಿಮ್ಮನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ನೀಡಿರುವುದಾಗಿ” ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರನ್ನು ಸ್ವೀಕರಿಸಿರುವ ಸುಳ್ಯ ಪೊಲೀಸರು ಲತೀಶ್ ಗುಂಡ್ಯ ರವರ ಮೇಲೆ ಎಫ್ಐಆರ್ ದಾಖಲಿಸಿರುವುದಾಗಿ ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.