ಪೆರಾಜೆ ಜ್ಯೋತಿ ಪ್ರೌಢಶಾಲೆಯ ಶಿಕ್ಷಕಿ ಬೇಬಿವೇಣುಗೋಪಾಲ ಕೊಯಿಂಗಾಜೆ ನಿವೃತ್ತಿ

Advt_Headding_Middle

 

ಪೆರಾಜೆ ಜ್ಯೋತಿ ಪ್ರೌಢಶಾಲೆಯ ಸಹ ಶಿಕ್ಷಕಿ ಶ್ರೀಮತಿ ಬೇಬಿ ವೇಣುಗೋಪಾಲ ರವರು ಮೇ. 31 ರಂದು ಸೇವಾ ವೃತ್ತಿಯಿಂದ ನಿವೃತ್ತಿ ಹೊದಿದ್ದಾರೆ.
1988 ರಲ್ಲಿ ಪೆರಾಜೆ ಜ್ಯೋತಿ ಪ್ರೌಢಶಾಲೆಯಲ್ಲಿ ಸತತ 33 ವರ್ಷಗಳಿಂದ ಸೇವೆಯನ್ನು ಸಲ್ಲಿಸಿರುತ್ತಾರೆ.

ಮೂರುವರೆ ವರ್ಷ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರು ಕೇರ್ಪಳ ಶೇಷಪ್ಪ ಗೌಡ ಮತ್ತು ಶ್ರೀಮತಿ ಗೌರಮ್ಮ ದಂಪತಿಯ ಪುತ್ರಿ. ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸುಳ್ಯ ಸ.ಮಾ.ಹಿ.ಪ್ರಾ. ಶಾಲೆ , ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಫ್ರೌಢಶಿಕ್ಷಣ, ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಪಿ ಯು.ಸಿ ಮತ್ತು ಪದವಿ ವ್ಯಾಸಂಗ ಪಡೆದಿರುತ್ತಾರೆ. ಮಂಗಳೂರಿನ ಕೋಣಾಜೆ ಯುನಿವರ್ಸಿಟಿಯಲ್ಲಿ ಎಂ.ಎ, ಸರಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್. ವ್ಯಾಸಂಗ ಪೂರೈಸಿರುತ್ತಾರೆ. ಇವರ ಪತಿ ವೇಣುಗೋಪಾಲ ಕೊಯಿಂಗಾಜೆಯವರು ಪೆರಾಜೆ ಜ್ಯೋತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿದ್ದಾರೆ. ಒರ್ವ ಪುತ್ರಿ ಪ್ರತಿಕ್ಷಾ ಸಿವಿಲ್ ಇಂಜಿನಿಯರ್ ಪದವೀಧರೆ ,ಚೆಮ್ನೂರು ಸುಭಾಷ್ ರವರನ್ನು ವಿವಾಹವಾಗಿ ಪ್ರಸ್ತುತ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಒರ್ವ ಪುತ್ರ ನಿಶಾಂಕ್ ಕೊಯಿಂಗಾಜೆ ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರಾಗಿ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.