ಕೊರೋನಾ ಗೆದ್ದ ಕತೆ

Advt_Headding_Middle

ಕೊರೋನಾವನ್ನು ಧೈರ್ಯದಿಂದ ಎದುರಿಸಿ
– ಶೋಭಾ ಪಿ. ಚಾಳೆಪ್ಪಾಡಿ, ಕೊಲ್ಲಮೊಗ್ರ


ನಾನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಲ್ಲಮೊಗ್ರ ಸೇವಾಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚಿಗೆ ಲಾಕ್ ಡೌನ್ ಸಮಯದಲ್ಲಿ ಅತ್ತೆ ಹಾಗೂ ಮಕ್ಕಳೊಂದಿಗೆ ಮನೆಯಲ್ಲೇ ಇರುತಿದ್ದೆ. ಮನೆಯವರು ವಿದೇಶದಲ್ಲಿ ಇರುವ ಕಾರಣ ಮನೆಯ ಎಲ್ಲ ವ್ಯವಹಾರಗಳನ್ನು ನಾನೆ ನೋಡಿಕೊಳ್ಳುತಿದ್ದೆ. ಅದೇನಾಯ್ತೋ ಗೊತ್ತಿಲ್ಲ, ಒಂದು ದಿನ ಬೆಳ್ಳಗೆ ಎದ್ದಾಗ ಸ್ವಲ್ಪ ತಲೆ ನೋವು ಮತ್ತು ಜ್ವರ ಬಂತು. ನಾನು ಮಾಮೂಲಿ ಜ್ವರ, ತಲೆ ನೋವು ಅಂತ ಸುಮ್ಮನೆ ಇದ್ದೆ. ಸಂಜೆ ಹೊತ್ತಿಗೆ ಮನೆಯವರಿಗೆ ಫೋನಿನ ಮೂಲಕ ವಿಷಯ ತಿಳಿಸಿದೆ. ಅವರು, ನೀನು ಭಯ ಪಡಬೇಡ. ನಾಳೆ ಬೆಳಗ್ಗೆ ಹಾಸ್ಪಿಟಲಿಗೆ ಹೋಗಿ ಪರೀಕ್ಷೆ ಮಾಡಿಸು ಅಂತ ಹೇಳಿದರು. ಹಾಗೆ ಬೆಳಗ್ಗೆ ಹೋಗಿ ಪರೀಕ್ಷೆ ಮಾಡಿಸಿದಾಗ ಗೊತ್ತಾಯಿತು, ನನ್ನನ್ನೂ ಕೊರೊನ ಬಿಡಲಿಲ್ಲ ಅಂತ.
ಒಮ್ಮೆ ನನಗೆ ತುಂಬಾ ಬೇಸರವಾಯಿತು. ಆದರೂ ಭಯ ಪಡಲಿಲ್ಲ, ಮನಸ್ಸನ್ನು ಗಟ್ಟಿ ಮಾಡಿಕೊಂಡು ಮನೆಯವರಿಗೆ ಫೋನ್ ಮಾಡಿದೆ. ಅವರು ನೀನು ಏನೂ ಭಯ ಪಡಬೇಡ, ಮಕ್ಕಳನ್ನು ಹತ್ತಿರ ಬರಲು ಬಿಡಬೇಡ. ೧೭ ದಿನ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೋ ಅಂತ ನನಗೆ ಧೈರ್ಯ ಹೇಳಿದರು. ನನ್ನ ಆತ್ಮೀಯರಿಗೂ ಫೋನ್ ಮಾಡಿ ಹೇಳಿದೆ. ಅವರೂ ನನಗೆ, ಹೆದರಬೇಡ ನಾವು ಇದ್ದೇವೆ, ನಾವು ಸಹಾಯ ಮಾಡುತ್ತೇವೆ ಅಂತ ನನಗೆ ಧೈರ್ಯ ತುಂಬಿದರು. ನನಗೆ ೧೭ ದಿವಸಕ್ಕೆ ಬೇಕಾಗುವ ವಸ್ತುಗಳನ್ನು ತಂದು ಕೊಟ್ಟರು. ಹಾಗೆ ನಾನು ಭಯ ಪಡಲಿಲ್ಲ. ಔಷಧಿ ಸೇವನೆ ಮಾಡಿಕೊಂಡು ಜೊತೆಗೆ ಕಷಾಯ ಮಾಡಿ ಕುಡಿದುಕೊಂಡು ಮನೆಯಲ್ಲೇ ಕೆಲಸ ಮಾಡಿಕೊಂಡು ಇದ್ದೆ. ನಾನು ಆತ್ಮಸ್ಥೈರ್ಯ ಕಳೆದು ಕೊಳ್ಳಲಿಲ್ಲ. ಆ ಧೈರ್ಯದಿಂದ ಮಂಜುನಾಥ ಮತ್ತು ಅಣ್ಣಪ್ಪ ಸ್ವಾಮಿಯ ಕೃಪೆಯಿಂದ ಈಗ ಆರೋಗ್ಯವಾಗಿ ಇದ್ದೇನೆ. ಕೊರೊನಾಕ್ಕೆ ಭಯ ಪಡಬೇಕಾಗಿಲ್ಲ.
ಕೊರೊನ ಬಂದ ವ್ಯಕ್ತಿಗಳಿಗೆ ಬೇಕಾಗಿರುವುದು, ಧೈರ್ಯ, ಆತ್ಮ ವಿಶ್ವಾಸ ಮತ್ತು ನಾವು ಅವರನ್ನು ಪ್ರೀತಿಯಿಂದ ಮಾತನಾಡಿಸಿ ನಮ್ಮ ಕೈಲಾದ ಸಹಾಯ ಮಾಡಿದರೆ ಅವರು ಬೇಗ ಗುಣಮುಖರಾಗುತ್ತಾರೆ.

– ಶೋಭಾ ಪಿ. ಚಾಳೆಪ್ಪಾಡಿ, ಕೊಲ್ಲಮೊಗ್ರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.