ಕೊರೊನಾ ನಿಯಂತ್ರಣಕ್ಕೆ ಮಂಡೆಕೋಲು ಗ್ರಾ.ಪಂ. ಸ್ವಯಂ ಲಾಕ್ ಗೆ ನಿರ್ಧಾರ

Advt_Headding_Middle

 

*ನಾಳೆಯಿಂದ ಗ್ರಾಮದಲ್ಲಿ ಅಂಗಡಿ ತೆರೆಯದಂತೆ ಮಾಲಕರಿಗೆ ಸೂಚನೆ*

*ಸಮಸ್ಯೆಯಾದರೆ ಗ್ರಾ.ಪಂ. ಸದಸ್ಯರು, ಪಂಚಾಯತ್ ಗೆ ಕರೆ ಮಾಡಲು ಮನವಿ*

ಮಂಡೆಕೋಲು ಗ್ರಾಮ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಗ್ರಾ.ಪಂ. ಮಹತ್ವದ ಹೆಜ್ಜೆ ಇಟ್ಟಿದ್ದು ಸ್ವಯಂ ಆಗಿ ಗ್ರಾ.ಪಂ. ಪೂರ್ಣ ಲಾಕ್ ಡೌನ್ ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಗ್ರಾ.ಪಂ. ಅಧ್ಯಕ್ಷೆ ವಿನುತಾ ಪಾತಿಕಲ್ಲುರ ಅಧ್ಯಕ್ಷತೆಯಲ್ಲಿ ಇಂದು ನಡೆದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ
ಟಾಸ್ಕ್ ಫೋರ್ಸ್ ಸಮಿತಿ ಸಭೆ ಯ ನಿರ್ಣಯಗಳು :ಗ್ರಾಮ ಪಂಚಾಯತ್ ಮುಂದಿನ ಆದೇಶದವರೆಗೆ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ಸಹಕರಿಸುವುದು.ಈವಾಗ ನೀಡಿರುವ ಆದೇಶವನ್ನು ಪಾಲಿಸದೇ ಅಂಗಡಿ ಮುಂಗಟ್ಟುಗಳನ್ನು ತೆರೆದಲ್ಲಿ ಆ ಅಂಗಡಿಯ ವ್ಯಾಪಾರ ಪರವಾನಿಗೆ ರದ್ದುಪಡಿಸಲಾಗುವುದು ಮತ್ತು ಅಂತಹ ಅಂಗಡಿಗಳಿಗೆ ಗ್ರಾಮ ಪಂಚಾಯತಿಂದ ಬೀಗ ಜಡಿಯಲಾಗುವುದು. ಕೋವಿಡ್ 19 ಪಾಸಿಟಿವ್ ಬಂದ ವ್ಯಕ್ತಿಗಳನ್ನು ಕೋವಿಡ್ ಸೆಂಟರ್ ಗೆ ದಾಖಲಿಸುವುದು, ಈ ವ್ಯಕ್ತಿಗಳಿಗೆ ಮೂಲಭೂತ ಸೌಕರ್ಯ ಗಳನ್ನು ಗ್ರಾಮ ಪಂಚಾಂಯತ್ ವತಿಯಿಂದ ನೀಡುವುದು ಹಾಗೂ ಆಹಾರವನ್ನು ಈ ವ್ಯಕ್ತಿಗಳ ಮನೆಯವರೇ ಕೋವಿಡ್ ಸೆಂಟರ್ ಗೆ ತಲುಪಿಸಲು ಕ್ರಮ ಕೈಗೊಳ್ಳು ವುದು .ಅಥವಾ ಪ್ರತ್ಯೇಕ ಉಳಿದುಕೊಳ್ಳಲು ವ್ಯವಸ್ಥೆ ಗಳಿದ್ದಲ್ಲಿ ಹೋಮ್ ಕ್ವಾರೆಂಟೈನ್ ನಲ್ಲಿ ಇರುವುದು. ಹೆಚ್ಚು ಪ್ರಕರಣಗಳು ದಾಖಲಾದ ವಾರ್ಡ್ ಗಳಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಯೊಂದಿಗೆ ಸಹಕರಿಸಲು ವಾರ್ಡ್ ವಾರು ಉಸ್ತುವಾರಿ ಸಮಿತಿ ಗಳನ್ನು ರಚಿಸಿ ಉಸ್ತುವಾರಿ ಸಮಿತಿಗಳ ಸದಸ್ಯರಿಗೆ ಗ್ರಾಮ ಪಂಚಾಯತ್ ನಿಂದ ಗುರುತಿನ ಚೀಟಿ ನೀಡುವುದು ಎಂದು ನಿರ್ಣಯಿಸಲಾಯಿತು.

“ಕೊರೊನಾ ನಿಯಂತ್ರಣ ಕ್ಕೆ ಸ್ವಯಂ ಲಾಕ್ ಡೌನ್ ಮಾಡಲಾಗುವುದು. ಇಂದು ಮಂಡೆಕೋಲು ಗ್ರಾಮದಲ್ಲಿ ಎಲ್ಲರೂ ಅಗತ್ಯ ವಸ್ತು ಖರೀದಿಸಿದ್ದಾರೆ. ನಾಳೆ ಪೇರಾಲಿನಲ್ಲಿ ಅವಕಾಶ ಇದೆ. ಬಳಿಕದ ಒಂದು ವಾರ ಅಂಗಡಿ‌ಮುಂಗಟ್ಟು ತೆರೆಯುವುದಿಲ್ಲ. ಅಗತ್ಯ ಬಿದ್ದರೆ ಪಂಚಾಯತ್ ಸದಸ್ಯರನ್ನು ಸಂಪರ್ಕಿಸಬಹುದಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ವಿನುತಾ ಪಾತಿಕಲ್ಲು ಸುದ್ದಿಗೆ ತಿಳಿಸಿದ್ದಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.