ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಗೆ ಸರಕಾರ ಕ್ರಮ ಕೈಗೊಳ್ಳಲಿ : ಕಾಂಗ್ರೆಸ್ ಆಗ್ರಹ

Advt_Headding_Middle

 

ಅಂಧ ಭಕ್ತರನ್ನು ಹೊರತುಪಡಿಸಿ, ಇಂಧನ ಬೆಲೆ ಇಳಿಕೆಗೆ ಎಲ್ಲರೂ ಹೋರಾಡಬೇಕು : ರಮಾನಾಥ ರೈ ಮನವಿ

ದೇಶದಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಸರಕಾರ ವಿಫಲವಾಗಿದೆ. ಲಸಿಕೆಯನ್ನೂ ಸರಿಯಾಗಿ ವಿತರಿಸಲು ಕ್ರಮ ಕೈಗೊಂಡಿಲ್ಲ. ಎಲ್ಲರಿಗೂ ಲಸಿಕೆ ನೀಡುವ ಕೆಲಸ ಸರಕಾರ ಮಾಡಬೇಕು. ಈಗ ಕೊರೊನಾ ಪ್ಯಾಕೇಜ್ ಘೋಷಣೆ ಸರಕಾರ ಮಾಡಿದೆ. ಕಳೆದ ಲಾಕ್‌ಡೌನ್ ಅವಧಿಯಲ್ಲಿ ಘೋಷಣೆ ಮಾಡಿದ ಪ್ಯಾಕೇಜ್‌ನ ಸವಲತ್ತು ಎಷ್ಟು ಜನರಿಗೆ ಕೊಟ್ಟಿದ್ದಾರೆ? ಎಂದು ಮಾಜಿ ಸಚಿವ ಬಿ.ರಮಾನಾಥ ರೈಯವರು ಸರಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಜೂ.5ರಂದು ಸುಳ್ಯಕ್ಕೆ ಆಗಮಿಸಿದ ಮಾಜಿ ಸಚಿವ ರಮಾನಾಥ ರೈಯವರು ಸುಳ್ಯದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಎದುರು ಆಹಾರದ ಕಿಟ್ ವಿತರಿಸಿದ ಬಳಿಕ, ಸುಳ್ಯದ ಸದರ್ನ್ ರೆಸಿಡೆನ್ಸಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
“ಕೊರೊನಾದಿಂದಾಗಿ ಸಾಕಷ್ಟು ಸಾವು ನೋವುಗಳಾದವು. ಅದನ್ನು ತಡೆಯಲು ಸರಕಾರದಿಂದ ಸಾಧ್ಯವಾಗಿಲ್ಲ. ಕೊರೊನಾ ವನ್ನು ನಿಯಂತ್ರಣ ಮಾಡಿಸಲೂ ಇವರಿಂದ ಸಾಧ್ಯವಾಗಿಲ್ಲ. ಒಂದು ಹಂತದಲ್ಲಿ ಲಸಿಕೆ ಸಮರ್ಪಕವಾಗಿ ನಡೆಯಬೇಕೆಂಬ ಉದ್ದೇಶದಿಂದ ಸರಕಾರದ ಜತೆ ಕೈ ಜೋಡಿಸಲು ಕಾಂಗ್ರೆಸ್ ಪಕ್ಷ ಲಸಿಕೆಗಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಇನ್ನಿತರ ಮೂಲಗಳಿಂದ 100 ಕೋಟಿ ರೂ.ವನ್ನು ನೀಡಲು ಸರಕಾರದ ಒಪ್ಪಿಗೆ ಕೇಳಿದೆವು. ಆದರೆ ಇನ್ನೂ ಸರಕಾರ ಒಪ್ಪಿಗೆ ನೀಡಿಲ್ಲ. ವ್ಯಾಕ್ಸಿನ್ ಪಡೆಯುವುದರಿಂದ ರೋಗ ನಿಯಂತ್ರಿಸಬಹುದಾಗಿದೆ. ಆದರೆ ಕೇಂದ್ರ ಸರಕಾರ ರಾಜ್ಯಕ್ಕೆ ಲಸಿಕೆ ಕೊಡುತ್ತಿಲ್ಲ. ಅದನ್ನು ಕೇಳಿ ಪಡೆಯಲು ಬಿಜೆಪಿ ಸರಕಾರದಿಂದ ಆಗುತ್ತಿಲ್ಲ. ಎಲ್ಲಾ ದೇಶಗಳಲ್ಲಿ ತಮ್ಮ ದೇಶದ ಜನಸಂಖ್ಯೆಯ ಆಧಾರದಲ್ಲಿ ಲಸಿಕೆ ಪಡೆಯಲು ಕಂಪೆನಿಗಳಿಗೆ ಆರ್ಡರ್ ಮಾಡಿರುವುದು ನೋಡಬಹುದು. ಆದರೆ ನಮ್ಮ ದೇಶದಲ್ಲಿ 135 ಕೋಟಿ ಜನ ಸಂಖ್ಯೆ ಇದೆ. ಇವರು ಎಷ್ಟು ಲಸಿಕೆ ಆರ್ಡರ್ ಮಾಡಿದ್ದಾರೆ. ಇದನ್ನೆಲ್ಲ ಈ ಭಾಗದ ಸಂಸದರು ಯಾಕೆ ಪ್ರಶ್ನಿಸುತ್ತಿಲ್ಲ ಎಂದು ರೈ ಪ್ರಶ್ನಿಸಿದರು.

 

ಬ್ಲಾಕ್ ಫಂಗಸ್ : ಬ್ಲಾಕ್ ಪಂಗಸ್ ಕೂಡಾ ಈಗ ಇದೆ. ಅದಕ್ಕೆ ಜಂಕ್ಷನ್‌ನ ಕೊರತೆ ಇದೆ. ಆದರೆ ಬ್ಲಾಕ್ ಮಾರ್ಕೆಟ್‌ನಲ್ಲಿ ಸಿಗುತ್ತಿರುವುದು ನೋವಿನ ವಿಚಾರ ಎಂದು ಅವರು ಹೇಳಿದರು.
ಪ್ಯಾಕೇಜ್ ಹಣ ಸಿಕ್ಕಿದರೆ ಸಂತೋಷ: ಲಾಕ್ ಡೌನ್‌ನಿಂದ ಸಂಕಷ್ಟದಲ್ಲಿರುವವರಿಗೆ ಸರಕಾರ ಪ್ಯಾಕೇಜ್ ಘೋಷಣೆ ಮಾಡಿದೆ. ಅದು ಸಂತೋಷದ ವಿಚಾರವೇ. ಆದರೆ ಕಳೆದ ಲಾಕ್ ಡೌನ್‌ನ ಸಂದರ್ಭದಲ್ಲಿ ಸರಕಾರ ಘೋಷಿಸಿದ ಪ್ಯಾಕೇಜ್ ಎಷ್ಟು ಜನರಿಗೆ ಸಿಕ್ಕಿದೆ? ಘೋಷಣೆ ಮಾಡುವುದು ಮಾತ್ರವಲ್ಲ. ಅದು ಅನುಷ್ಠಾನಕ್ಕೆ ಬರುವಂತೆ ಸರಕಾರ ಮಾಡಬೇಕು ಎಂದು ರಮಾನಾಥ ರೈಯವರು ಹೇಳಿದರು.

ಇಂಧನ ಬೆಲೆ ಕಡಿಮೆಯಾಗಲಿ : ಕೊರೊನಾದ ಆರಂಭವಾದಂದಿನಿಂದ ಇಂದಿನವರೆಗೆ 16 ಬಾರಿ ಇಂಧನದ ಬೆಲೆ ಹೆಚ್ಚಾಗಿದೆ. ಇದು ನಮ್ಮ ದೇಶದಲ್ಲಿ ಮಾತ್ರ. ಇಂಧನದ ಬೆಲೆ ಕಡಿಮೆಯಾಗಾಬೇಕಾದರೆ ಎಲ್ಲರೂ ಹೋರಾಟ ಮಾಡಬೇಕು. ಕೆಲವು ಮೋದಿಯ ಅಂಧ ಭಕ್ತರಿದ್ದಾರೆ. ಅವರು ಪೆಟ್ರೋಲ್‌ಗೆ 1 ಸಾವಿರ ರೂ ಆದರು ಪರವಾಗಿಲ್ಲ ಎಂದು ಹೇಳುತ್ತಿದ್ದಾರೆ. ಅಂತವರಿಗೆ ಪೆಟ್ರೋಲ್ ರೇಟ್ ಹೆಚ್ಚಿಗೆ ಇದ್ದರೂ ಆಗಬಹುದು. ಆದರೆ ಉಳಿದವರಿಗೆ ಕಡಿಮೆಗೆ ಸಿಗುವಂತಾಗಬೇಕು. ಇದಕ್ಕಾಗಿ ಸಮಘ ಸಂಸ್ಥೆಯವರು ಸೇರಿ ಎಲ್ಲರೂ ಹೋರಾಟಕ್ಕೆ ಇಳಿಯಬೇಕು ಎಂದು ರೈಯವರು ಒತ್ತಾಯಿಸಿದರು.

ಟೀಕೆ ಮಾಡಿದವರನ್ನು ಎಷ್ಟು ಮಂದಿಯನ್ನು ಬಂಧಿಸಿದ್ದಾರೆ? : ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದವರನ್ನು ಬಂಧಿಸುವ ಕಾರ್ಯ ಇದುವರೆಗೆ ಆಗಿಲ್ಲ. ಗಾಂಧೀಜಿಯನ್ನು ಕೊಂದ ಗೋಡ್ಸೆಯವರ ಜನ್ಮ ದಿನ ಆಚರಿಸಿ ಪೋಸ್ಟ್ ಹಾಕಿಕೊಂಡರೂ ಏನೂ ಆಗಿಲ್ಲ. ಆದರೆ ಸರಕಾರದ ವಿರುದ್ಧ ಮಾತನಾಡಿದರೆ ದೇಶದ್ರೋಹದ ಕೆಲಸ ಎಂದು ಕೇಸು ಹಾಕುತ್ತಾರೆ. ನಮ್ಮ ಸರಕಾರ ಇದ್ದಾಗ ಬಿಜೆಪಿಯವರು ಟೀಕೆ ಮಾಡಿಲ್ಲವೇ? ಎಷ್ಟು ಜನರನ್ನು ಬಂಧಿಸಿವೆ ಎಂದು ಹೇಳಲಿ ಎಂದು ರಮಾನಾಥ ರೈ ಹೇಳಿದರು.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.