ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಕು|ಎನ್. ಕುಸುಮಾವತಿ ತೊಡಿಕಾನ ಅಧಿಕಾರ ಸ್ವೀಕಾರ

Advt_Headding_Middle

 

 

ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜು ಕಟೀಲು ಇದರ ನೂತನ ಪ್ರಾಂಶುಪಾಲರಾಗಿ ತೊಡಿಕಾನದ ನಾಗನಮೂಲೆ ಕು| ಎನ್. ಕುಸುಮಾವತಿಯವರು ಅಧಿಕಾರ ವಹಿಸಿಕೊಂಡಿದ್ದಾರೆ.
ಕು| ಎನ್. ಕುಸುಮಾವತಿಯವರು ಪ್ರಸ್ತುತ ಕಾಲೇಜಿನಲ್ಲಿ ಕಳೆದ 7 ವರ್ಷಗಳಿಂದ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ನೂತನ ಪ್ರಾಂಶುಪಾಲರಾಗಿ ಭಡ್ತಿಗೊಂಡು ಜೂ.1ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಇವರು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿ.ಪ್ರಾ.ಶಾಲೆ ತೊಡಿಕಾನದಲ್ಲಿ, ಪ್ರೌಢಶಿಕ್ಷಣ ಮತ್ತು ಪಿಯು ಶಿಕ್ಷಣ ವನ್ನು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡಿನಲ್ಲಿ, ಪದವಿ ಶಿಕ್ಷಣವನ್ನು ನೆಹರೂ ಮೆಮೊರಿಯಲ್ ಕಾಲೇಜು ಸುಳ್ಯದಲ್ಲಿ, ಅರ್ಥಶಾಸ್ತ್ರದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, ಬಿ.ಎಡ್. ಪದವಿಯನ್ನು ಬೆಂಗಳೂರಿನ ರಾಘವೇಂದ್ರ ಕಾಲೇಜಿನಲ್ಲಿ, ಪಿಜಿಡಿಇಎಲ್ ಟಿ ಪದವಿಯನ್ನು ಬೆಂಗಳೂರಿನ ರಿಜನಲ್ ಇನ್ ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಇಲ್ಲಿ, ಡಿಸಿಎ, ಇಂಗ್ಲಿಷ್ ನಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪೂರೈಸಿದ್ದಾರೆ.
ಕು| ಎನ್. ಕುಸುಮಾವತಿಯವರು ನಾರಾಯಣಗುರು ಪದವಿಪೂರ್ವ ಕಾಲೇಜು ಕಾಟಿಪಳ್ಳ ಕೈಕಂಬ, ಬಸವೇಶ್ವರ ಪದವಿಪೂರ್ವ ಕಾಲೇಜು ಆಲೂರು, ಹಾಸನ, ಐವರ್ನಾಡು ಪದವಿಪೂರ್ವ ಕಾಲೇಜು, ಶಾರದಾ ಹೆಣ್ಮಕ್ಕಳ ಪ್ರೌಢಶಾಲೆ ಸುಳ್ಯ ದಲ್ಲಿ ಸೇವೆ ಸಲ್ಲಿಸಿದ್ದಾರೆ.
ಇವರು ತೊಡಿಕಾನ ಗ್ರಾಮದ ನಾಗನಮೂಲೆ ಎನ್.ರಾಮಚಂದ್ರ ಮತ್ತು ಶ್ರೀಮತಿ ನೇತ್ರಾವತಿ ದಂಪತಿಗಳ ಪುತ್ರಿ. ಕ.ರಾ.ರ.ಸಾ.ನಿ.ಸುಳ್ಯದ ಉದ್ಯೋಗಿ ಅಶೋಕ್ ಕುಮಾರ್ ಕಿರಿಯ ಸಹೋದರ ಆಗಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.