ಸೊಳ್ಳೆ ನಿವಾರಕ ಔಷಧೀಯ ಸಸ್ಯಗಳು

Advt_Headding_Middle

 

ಮಳೆಗಾಲ ಪ್ರಾರಂಭವಾಯಿತೆಂದರೆ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ಏನೋ ಸಂಭ್ರಮ.ಈ ಖುಷಿಯ ಜೊತೆಗೆ ಆರೋಗ್ಯವು ಕೂಡ ಕೆಡುವುದನ್ನು ಗಮನಿಸಬಹುದು.ಡೆಂಗೀ,ಚಿಕೂನ್ ಗುನ್ಯ ,ಮಲೇರಿಯಾ,ಇಲಿ ಜ್ವರ,ಆನೆಕಾಲು ರೋಗದಂತಹ ಅದೆಷ್ಟೋ ರೋಗಗಳು ಸೊಳ್ಳೆಗಳಿಂದ ಹರಡುವ ಸಾಧ್ಯತೆ ಇರುತ್ತದೆ.
ಮಳೆಗಾಲದ ಸಮಯದಲ್ಲಿ,ಮಳೆನೀರು ಸಂಗ್ರಹವಾಗುವಂತಹ ವಸ್ತುಗಳಲ್ಲಿ ನೀರು ತುಂಬಿ ಅದರಲ್ಲಿ ಸೊಳ್ಳೆಗಳು ಮೊಟ್ಟೆ ಇಟ್ಟು ತಮ್ಮ ಸಂತಾನೋತ್ಪತ್ತಿ ಪ್ರಾರಂಭ ಮಾಡುತ್ತವೆ.ಮೊಟ್ಟೆ ಒಡೆದು 8-10 ದಿನಗಳ ಕಾಲದಲ್ಲಿ ಸೊಳ್ಳೆಗಳಾಗಿ ವಾತಾವರಣದಲ್ಲಿ ಹರಡುತ್ತದೆ.ಈ ಸೊಳ್ಳೆಗಳು ಕೆಲವೊಂದು ರೋಗಗಳನ್ನು ಹರಡುವ ವಾಹಕಗಳಾಗಿವೆ.ಅನಾಫೆಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಮಲೇರಿಯಾ ರೋಗ ಹರಡುತ್ತದೆ.ಈಡಿಸ್ ಈಜಿಪ್ಟ್ಯೈ ಸೊಳ್ಳೆಗಳು ಡೆಂಗೀ ಮತ್ತು ಚಿಕೂನ್ ಗುನ್ಯ ರೋಗ ಹರಡಲು ಕಾರಣವಾಗುತ್ತದೆ.ಕ್ಯೂಲೆಕ್ಸ್ ಎಂಬ ಸೊಳ್ಳೆ ಕಡಿತದಿಂದ ಜಪಾನೀಸ್ ಎನ್ ಸಫಲೈಟಿಸ್ ಎಂಬ ರೋಗ ಒಬ್ಬರಿಂದ ಒಬ್ಬರಿಗೆ ಬರುತ್ತದೆ.ಜಿಕಾ ವೈರಸ್,ಏಡಿಸ್ ಅಲ್ಬೋಪಿಕ್ಟಸ್ ಎಂಬ ಒಂದು ಜಾತಿಯ ಸೊಳ್ಳೆಯಿಂದ ಹರಡುತ್ತದೆ.
ಹಾಗಾಗಿ,ಸೊಳ್ಳೆಗಳನ್ನು ದೂರವಿರಿಸಲು ಕೆಲವೊಂದು ನೈಸರ್ಗಿಕ ವಿಧಾನವನ್ನು ಪಾಲಿಸೋಣ.ಅವುಗಳಲ್ಲಿ ಸೊಳ್ಳೆ ನಿರೋಧಕ ಸಸ್ಯಗಳನ್ನು ಬೆಳೆಸುವುದು ಕೂಡ ಒಂದು.
1.ನಿರ್ಗುಂಡಿ /ನೆಕ್ಕಿ ಸೊಪ್ಪು:
ಆಡುಭಾಷೆಯಲ್ಲೆ ನೆಕ್ಕಿ ಸೊಪ್ಪು ಎಂದು ಕರೆಯಲ್ಪಡುವ,ರಸ್ತೆ ಬದಿಯಲ್ಲಿ ಕಾಣಸಿಗುವ ಚಿರಪರಿಚಿತ ಸಸ್ಯ.6-15 ಅಡಿ ಎತ್ತರ,8 ಅಡಿ ವಿಸ್ತಾರದಲ್ಲಿ ಪೊದೆಯಾಗಿ ಬೆಳೆಯುತ್ತದೆ.ಗಾಢ ವಾಸನೆಯನ್ನು ಹೊಂದಿರುವ ಇದರ ಎಲೆಗಳನ್ನು ಕೀಟ ನಿರೋಧಕವಾಗಿ ಸೊಳ್ಳೆಗಳನ್ನು ಓಡಿಸಲು ಕೆಂಡದಲ್ಲಿ ಸುಟ್ಟು ಹೊಗೆ ತಯಾರಿಸುವ ರೂಢಿ ಇದೆ.ಹಸಿ ಸೊಪ್ಪುಗಳ ಕಟ್ಟುಗಳಾಗಿ ಮಾಡಿ ಮನೆಯಲ್ಲಿ,ಹಟ್ಟಿಯಲ್ಲಿ ತೂಗಾಡಿಸಬಹುದು.ಕ್ರೀಸೋಫೆನೋಲ್,ಬಿ-ಸಿಟೋಸಿರೋಟ್ ಇತ್ಯಾದಿ ರಾಸಾಯನಿಕಗಳಿರುವ ಈ ಸಸ್ಯವನ್ನು ಆಯುರ್ವೇದ,ಯನಾನಿ,ಸಿದ್ಧ,ಹೋಮಿಯೋಪತಿ ಔಷಧಿಗಳಲ್ಲಿ ಬಳಸುತ್ತಾರೆ.ನಿರ್ಗುಂಡಿ ತೈಲವನ್ನು ಮೈಗೆ ಹಚ್ಚಿಕೊಂಡರೆ ಸೊಳ್ಳೆಗಳಿಂದ ದೂರವಿರಬಹುದು.
2.ತುಳಸಿ:
ಪೂಜನೀಯ ಸಸ್ಯವಾಗಿರುವ ತುಳಸಿ ಎಲ್ಲರ ಮನೆಯಂಗಳದಲ್ಲಿರುತ್ತದೆ.ಇದು ಕ್ಯೂಲೆಕ್ಸ್ ಸೊಳ್ಳೆಯ ಲಾರ್ವಾಗಳನ್ನು ನಾಶಮಾಡಬಲ್ಲುದು.ತನ್ನಲ್ಲಿರುವ ರಾಸಾಯನಿಕಗಳು ಸೊಳ್ಳೆ ನಿರೋಧಕವಾಗಿಯು ಕೆಲಸ ಮಾಡುತ್ತದೆ.ತುಳಸಿ ಎಲೆಗಳನ್ನು ಚೆನ್ನಾಗಿ ಜಜ್ಜಿ ರಸ ತೆಗೆದು ಅದನ್ನು ಮೈಗೆ ಹಚ್ಚಿಕೊಳ್ಳಬಹುದು.ಇದು ಆಂಟಿ ಬ್ಯಾಕ್ಟೀರಿಯಾ,ಆಂಟಿ ಫಂಗಸ್,ಆಂಟಿ ವೈರಸ್ ಗಳಾಗಿ ಕಾರ್ಯ ನಿರ್ವಹಿಸುತ್ತದೆ.
3.ಕರಿಬೇವು:
40-50 ಅಡಿ ಉದ್ದ ಬೆಳೆಯುವ ಕಹಿಬೇವುಮರವು ನಿತ್ಯಹರಿದ್ವರ್ಣವಾಗಿದೆ.ಕಹಿಬೇವಿನ ಗಾಢಗಂಧವು ಸೊಳ್ಳೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.ಇದರ ಸೊಪ್ಪನ್ನೂ ಕೆಂಡಕ್ಕೆ ಹಾಕಿ ಸುಟ್ಟು ಹೊಗೆ ಆಡಿಸಿದರೆ ಸೊಳ್ಳೆಗಳು ಇರುವುದಿಲ್ಲ.ತೆಂಗಿನಕಾಯಿ ಎಣ್ಣೆ ಹಾಗೂ ಬೇವಿನಎಣ್ಣೆಯನ್ನು ಸಮಪ್ರಮಾಣದಲ್ಲಿ ಮಿಶ್ರಣಮಾಡಿ ಕೈ-ಕಾಲಿಗೆ ಹಚ್ಚಿಕೊಂಡರೆ ಸೊಳ್ಳೆ ಹತ್ತಿರವೂ ಸುಳಿಯುವುದಿಲ್ಲ.
4.ಮಜ್ಜಿಗೆ ಹುಲ್ಲು:
ಇದು ಒಂದು ಪೊದರಾಗಿ ಬೆಳೆಯುವ ಹುಲ್ಲು.ತನ್ನ ಸುಗಂಧದಿಂದ ವಾತಾವರಣವನ್ನು ತಾಜಾತನದಲ್ಲಿರಿಸುತ್ತದೆ.ಸಾಮಾನ್ಯವಾಗಿ ಮಜ್ಜಿಗೆ ಹುಲ್ಲು ಸೊಳ್ಳೆ,ತಿಗಣೆ,ಹೇನು ಮುಂತಾದ ಕೀಟಗಳನ್ನು ವಿಕರ್ಷಿಸುತ್ತದೆ.ಮಜ್ಜಿಗೆ ಹುಲ್ಲಿನ ತೈಲವೂ ಸಾಮಾನ್ಯವಾಗಿ ಎಲ್ಲಾ ರೀತಿಯ ಚರ್ಮರೋಗಗಳಿಗೆ ಉಪಯುಕ್ತ.
5.ಚೆಂಡು ಹೂ:
ಒರಟು ವಾಸನೆ ಹಾಗೂ ಗಾಢ ಬಣ್ಣದ ಹೂವುಗಳನ್ನು ಹೊಂದಿರುವ ಸಸ್ಯ.ಇದರಲ್ಲಿ ಪೈರೆಥ್ರಮ್ ರಾಸಾಯನಿಕ ಇದ್ದು,ಇದು ಸೊಳ್ಳೆ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಈ ರೀತಿಯ ಹೂವಿನ ಗಿಡಗಳನ್ನು ನಮ್ಮ ಕೈ ತೋಟದಲ್ಲಿ ಬೆಳೆಸುವುದು ಉತ್ತಮ.
6.ಅಗ್ನಿ ಮಂಥ/ನೊಣ ಸೊಪ್ಪು:
ತುಳುವಿನಲ್ಲಿ ಕೆಲೆಂಜಿ ಸೊಪ್ಪು ಎಂದು ಕರೆಯುವ ಇದರ ಎಲೆ ಗಾಢ ಗಂಧವನ್ನು ಹೊಂದಿದೆ.ಇದರ ವಾಸನೆಯು ಸೊಳ್ಳೆ,ನೊಣಗಳನ್ನು ದೂರವಿರಿಸುತ್ತದೆ.
ನಾಗರಿಕರು ಸೊಳ್ಳೆಕಾಟದಿಂದ ತಪ್ಪಿಸಿಕೊಳ್ಳಲು ಏನೇನೋ ಸರ್ಕಸ್ ಮಾಡುತ್ತಾರೆ.ಅದರ ಬದಲು ಸೊಳ್ಳೆ ನಿವಾರಕ ಸಸ್ಯಗಳನ್ನು ಮನೆ ಮಾತ್ರವಲ್ಲದೆ ಸುತ್ತಲಿನ ಪರಿಸರದಲ್ಲೂ ನೆಟ್ಟು ನೈಸರ್ಗಿಕವಾಗಿ ಸೊಳ್ಳೆಗಳ ತೊಂದರೆಯಿಂದ ದೂರವಿರಬಹುದು.ಹಾಗಾಗಿ,ಈ ವರ್ಷದ ವನಮಹೋತ್ಸವನ್ನು ಸೊಳ್ಳೆ ನಿವಾರಕ ಔಷಧಿ ಸಸ್ಯಗಳನ್ನು ನೆಡುವುದರ ಮೂಲಕ ಆಚರಿಸೋಣ.

ಡಾ॥ ಗ್ರೀಷ್ಮಾ ಗೌಡ ಆರ್ನೋಜಿ
ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಆಂಡ್ ಯೋಗಿಕ್ ಸೈನ್ಸ್ ಮೂಡಬಿದರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.