ಆಮ್ ಆದ್ಮಿ ಪಾರ್ಟಿ : ಕೋವಿಡು ಸೋಂಕಿತರಿಗೆ ವಿವಿಧ ಸೇವೆ ಉದ್ಘಾಟನೆ

Advt_Headding_Middle

 

ಸುಳ್ಯ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ನೇತೃತ್ವದಲ್ಲಿ AAP- (Action Against Pendamic) ಕೋವಿಡು ಹೋಮ್ ಐಸೋಲೇಶನ್ ಸಹಾಯವಾಣಿ ಸಂಖ್ಯೆ 7292022063 ಬಿಡುಗಡೆ ಹಾಗೂ ಆಕ್ಸಿಮಿತ್ರ ಸೇವೆ ಹಾಗೂ ಕೋವಿದ್ ಪೀಡಿತರಿಗೆ ಗುಣಮುಖರಾಗುವ ತನಕ ಆಕ್ಸಿಮಿಟರ್ ಉಚಿತ ಹಂಚಿಕೆ ಸೇವೆ ಸುಳ್ಯದಲ್ಲಿ ಜೂ. 6 ರಂದು ಬಿಡುಗಡೆಗೊಳಿಸಲಾಯಿತು.


ಸುಳ್ಯ ವಿಧಾನಸಭಾ ಸಂಚಾಲಕ ಅಶೋಕ ಎಡಮಲೆ ಬಿಡುಗಡೆ ಗೊಳಿಸಿ ಮಾತನಾಡಿದರು. ಸಹ ಸಂಚಾಲಕ ರಶೀದ್ ಜಟ್ಟಿಪಳ್ಳ, ಜತೆ ಕಾರ್ಯದರ್ಶಿಗಳಾದ ದೀಕ್ಷಿತ್ ಕುಮಾರ್, ಸಂಶುದ್ದೀನ್ ಕೆಎಂ, ಕಡಬ ತಾಲೂಕು ಮುಖಂಡರಾದ ಆನಂದ ಗೌಡ ರಾಮಕುಂಜ, ರಶೀದ್ ಪೀಳ್ಯಾ, ಸದಸ್ಯರಾದ ಕಲಂದರ್ ಶಾಫಿ ಅಡ್ಕ, ಶಾರಿಖ್ ಡಿಎಂ, ಸುನಿಲ್ ಎಡಮಲೆ, ತಾಜುದ್ದೀನ್, ಪ್ರಸನ್ನಕುಮಾರ್ ಉಪಸ್ಥಿತರಿದ್ದರು.


ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದಾಗ, ನುರಿತ ವೈದ್ಯರ ತಂಡದಿಂದ ಪೋನ್ ಮೂಲಕ ಹೋಮ್ ಐಸೊಲೇಷನ್ ವೈದ್ಯಕೀಯ ಕ್ರಮಗಳ ಬಗ್ಗೆ ಸೂಕ್ತ ಸಲಹೆ ಸೂಚನೆ ನೀಡಲಾಗುತ್ತದೆ ಹಾಗೂ ಕೋವಿದ್ ಪೀಡಿತರಿಗೆ ಅಗತ್ಯಕ್ಕನುಗುಣವಾಗಿ ಆಕ್ಸಿಮೀಟರ್ ಸೌಲಭ್ಯ ದೊರೆಯಲಿದೆ ಎಂದು ಅಶೋಕ್ ಎಡಮಲೆ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.