Breaking News

ಸುಬ್ರಹ್ಮಣ್ಯ : ಗೃಹ ರಕ್ಷಕದಳದವರಿಗೆ ಬೋಟ್ ಹಸ್ತಾಂತರ

Advt_Headding_Middle

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರ ರಕ್ಷಣಾತಂಡದ ವತಿಯಿಂದ ಸುಬ್ರಹ್ಮಣ್ಯ ಗೃಹರಕ್ಷಕ ಘಟಕಕ್ಕೆ ರಬ್ಬರ್ ಬೊಟ್ ಹಸ್ತಾಂತರ ಮೇ.೬ ರಂದು ನಡೆಯಿತು.

ಪೌರ ರಕ್ಷಣಾ ಪಡೆ ಮುಖ್ಯಪಾಲಕ ಹಾಗು ಹೋಮ್ ಗಾರ್ಡ್ ಕಮಾಂಡೆಂಟ್ ಡಾ. ಮುರಳಿ ಮೋಹನ್ ಚೂಂತಾರುರವರು ಇಂದು ಕುಮಾರಧಾರ ಸ್ನಾನ ಘಟ್ಟದದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಹಸ್ತಾಂತರ ನಡೆಯಿತು. ೧೦ ಜನ ಪ್ರಯಾಣಿಸಬಹುದಾದ ರಬ್ಬರ್ ಬೊಟ್‌ನ್ನು ಘಟಕಕ್ಕೆ ಹಸ್ತಾಂತರ ಮಾಡಲಾಯಿತು.

ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ಮಳೆಗಾಲ ಬಂದಾಗ ಸುಬ್ರಹ್ಮಣ್ಯದಲ್ಲಿ ನೆರೆ ಬರುವುದು ಸಹಜ, ನೆರೆಬಂದಾಗ ಇಲ್ಲಿಯ ಜನರನ್ನು ತೊಂದರೆಗೆ ಸಿಲುಕಿಸುತ್ತಾರೆ ಈ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ಗೃಹರಕ್ಷಕ ದಳದ ವತಿಯಿಂದ, ಗಾಳಿ ತುಂಬಿಸಿ ಓಡಿಸ ಬಹುದಾದ ಬೋಟ್ ಅನ್ನು ಖಾಯಂ ಅಗಿ ಸುಬ್ರಹ್ಮಣ್ಯದಲ್ಲೇ ಲಭ್ಯ ಆಗುವ ರೀತಿ ವ್ಯವಸ್ಥೆ ಮಾಡಿದ್ದೇವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಬೋಟ್ಗಳಿದ್ದು ಎರಡು ಪ್ರಧಾನ ಕಚೇರಿಯಲ್ಲಿ ಹಾಗು ಉಳಿದ ಮೂರೂ ಬೋಟ್ ಗಳು ಉಪ್ಪಿನಂಗಡಿ, ಮೂಲ್ಕಿ, ಬಂಟ್ವಾಳ ಘಟಕದಲ್ಲಿ ಇರಿಸಲಾಗಿದೆ ಎಂದರು.
ಎಲ್ಲರಿಗೂ ತಿಳಿದಂತೆ ಕಳೆದವರ್ಷ ಸುಬ್ರಹ್ಮಣ್ಯ ಣ್ ನೆರೆ ಬಂದಿತ್ತು ತುಂಬಾ ಸಮಸ್ಯೆಗಳಿಗಾಗಿತ್ತು ಈಸಂದರ್ಭದಲ್ಲಿ ಮಂಗಳೂರಿನಿಂದ ಬೋಟ್‌ಅನ್ನು ತಂದು ರಕ್ಷಣೆ ಕಾರ್ಯ ಕಷ್ಟ ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಸ್ಥಳೀಯ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಸುಬ್ರಹ್ಮಣ್ಯ ಗೃಹರಕ್ಷಕದಳದ ಘಟಕಕ್ಕೆ ಬೋಟ್ ಹಾಗೂ ರಕ್ಷಣಾ ಸಂದರ್ಭದಲ್ಲಿ ರಕ್ಷಣೆಗೆ ಬೇಕಾದಂತಹ ಸಲಕರಣೆಗಳನ್ನು ಹಸ್ತಾಂತರ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ
ಸುಬ್ರಹ್ಮಣ್ಯ ಗ್ರಾ.ಪಂ ಪಿಡಿಒ ಮುತ್ತಪ್ಪ, ಗ್ರಾಮಕರಣಿಕ ರಂಜನ್, ಸುಬ್ರಹ್ಮಣ್ಯ ಗ್ರಾ. ಪಂ. ಉಪಾಧ್ಯಕ್ಷೆ ಸವಿತಾ ಭಟ್, ಗ್ರಾ. ಪಂ. ಸದಸ್ಯರಾದ ಭಾರತಿ ದಿನೇಶ್, ಗಿರೀಶ್,ನಾರಾಯಣ ಅಗ್ರಹಾರ, ಹೆಚ್.ಎಲ್ ವೆಂಕಟೇಶ್, ಗ್ರಾ. ಪಂ. ಕಾರ್ಯದರ್ಶಿ ಮೋನಪ್ಪ, ಮಾಜೀ ಗ್ರಾ. ಪಂ. ಸದಸ್ಯ ದಿನೇಶ್ ಏನ್. ಯಸ್, ಗೃಹರಕ್ಷಕ ದಳದ ಘಟಕಾಧಿಕಾರಿ ನಾರಾಯಣ ಹೆಚ್, ಸಾರ್ಜೆಂಟ್ ಹರಿಚಂದ್ರ, ಮಂಗಳೂರು ಘಟಕ ಗೃಹರಕ್ಷಕ ದಳದ ಸಿಬಂಧಿಗಳು ಹಾಗು ಸುಬ್ರಹ್ಮಣ್ಯ ಗೃಹರಕ್ಷಕದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪೋಟೋ: ಪ್ರತಿರೂಪ ಸ್ಟುಡಿಯೋ ಸುಬ್ರಹ್ಮಣ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.