ಸುಳ್ಯ : ಸಚಿವರ ನೇತೃತ್ವದಲ್ಲಿ ಸೇವಾ ಭಾರತಿ ಕಾರ್ಯಕರ್ತರ ಸಭೆ

Advt_Headding_Middle

 

ಬೆಂಗಳೂರಿನ ವಾಸವಿ ಆಸ್ಪತ್ರೆಯ ವೈದ್ಯರಿಂದ ಸುಳ್ಯದಲ್ಲಿ ಹೋಮಿಯೋಪತಿ ಔಷಧಿಯ ಬಗ್ಗೆ ಮಾಹಿತಿ

ಸುಳ್ಯ ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ತಡೆಗಟ್ಟುವ ಸಲುವಾಗಿ ಸಚಿವ ಎಸ್. ಅಂಗಾರರ ನೇತೃತ್ವದಲ್ಲಿ ಸಚಿವರ ವಾರ್ ರೂಂ , ಸೇವಾ ಭಾರತಿ ಕಾರ್ಯಕರ್ತರ ಸಭೆ ಹಾಗೂ ಕೊರೊನಾ ತಡೆಗಟ್ಟುವ ಹೋಮಿಯೋಪತಿ ಔಷಧಿಯ ಬಗ್ಗೆ ಮಾಹಿತಿ ಕಾರ್ಯಕ್ರಮವು ಸುಳ್ಯದ ಕೇರ್ಪಳದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಜೂ.೬ರಂದು ಜರುಗಿತು.
ಕಾರ್ಯಕ್ರಮದಲ್ಲಿ ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಚಿವರ ವಾರ್ ರೂಮ್ ಹಾಗೂ ಸೇವಾಭಾರತಿ ಕಾರ್ಯಕರ್ತರ ಸಭೆ ಸೇರಿ, ತಾಲೂಕಿನಲ್ಲಿ ಕೋವಿಡ್ ೧೯ ತುರ್ತು ನಿರ್ವಹಣೆ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಚರ್ಚಿಸಲಾಯಿತು.
ಬೆಂಗಳೂರಿನ ವಾಸವಿ ಹಾಸ್ಪಿಟಲ್ ನ ಹೋಮಿಯೋಪತಿ ಔಷಧಿಯನ್ನು ತಾಲೂಕಿನ ಎಲ್ಲಾ ಮನೆಗಳಿಗೂ ತಲುಪಿಸಿ ಸುಳ್ಯವನ್ನು ಕೊರೊನಾ ಮುಕ್ತವಾಗಿಸಬೇಕೆಂದು ಈ ಸಂದರ್ಭದಲ್ಲಿ ಸಚಿವ ಅಂಗಾರರು ಕಾರ್ಯಕರ್ತರಿಗೆ ಕರೆ ನೀಡಿದರು.
ಬೆಂಗಳೂರಿನ ವಾಸವಿ ಹಾಸ್ಪಿಟಲ್ ನ ಐ.ಸಿ.ಯು. ವಿಶೇಷ ತಜ್ಞರಾದ ಡಾಕ್ಟರ್ ರವೀಂದ್ರ ರೆಡ್ಡಿ ಮತ್ತು ಡಾಕ್ಟರ್ ವೇಣುಗೋಪಾಲ್ ರವರು ಕೋವಿಡ್ ಪಾಸಿಟಿವ್ ಬರದಂತೆ ತಡೆಯುವ ಹೋಮಿಯೋಪತಿ ಔಷಧಿಯ ಬಗ್ಗೆ ಮಾಹಿತಿ ನೀಡಿದರು. ಸುಳ್ಯ ತಾಲೂಕಿಗೆ ಔಷಧಿಯನ್ನು ಒದಗಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ನ.ಸೀತಾರಾಮ ರವರು ಮಾತನಾಡಿ ಸುಳ್ಯ ತಾಲೂಕಿನ ಹೆಚ್ಚಿನ ಮನೆಗಳಲ್ಲಿ ಜೂ.೮ರಂದು ಗೃಹಮಿಲನ ಎನ್ನುವ ವಿಶೇಷ ಕಾರ್ಯಕ್ರಮವನ್ನು ನಡೆಸಲು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ ಸೇರಿದಂತೆ ತಾಲೂಕಿನ ಸೇವಾಭಾರತಿ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.