ಕೃತಿ ಪರಿಚಯ

Advt_Headding_Middle

ಅರೆಬಾಸೆಗೆ ಸಂದ ಎರ್‍ಡ್ ಲಾಯ್ಕ್‌ನ ಕೃತಿಗ

ಪುಂಸ್ತ್ರೀ ಮತ್ತು ಕಲ್ಯಾಣಸ್ವಾಮಿ

  • ಲೀಲಾ ದಾಮೋದರ

ಇತ್ತೀಚೆಗೆ ಕರ್ನಾಟಕ ಅರೆಬಾಷೆ ಸಂಸ್ಕೃತಿ ಮತ್ತು ಸಾಹಿತ್ಯಅಕಾಡೆಮಿ ಪ್ರಕಟ ಮಾಡ್ದ ಎರ್‍ಡ್ ಕಾದಂಬರಿಗ ಎಲ್ಲವರ ಗಮನ ಸೆಳಿವಂತದ್. ಒಂದು ಶ್ರೀಮತಿ ಎಂ. ಜಿ. ಕಾವೇರಮ್ಮನೊವು ಬರ್‍ದ ಪುಂಸ್ತ್ರೀ, ಇನ್ನೊಂದು ಶ್ರೀಮತಿ ಸಂಗೀತಾ ರವಿರಾಜ್‌ನವರ ಕಲ್ಯಾಣ ಸ್ವಾಮಿ.
ಅರೆಬಾಸೆನ ಪ್ರಮುಖ ಸಾಹಿತಿ, ಹಿರಿಯ ಬರಹಗಾರ್ತಿ ಕಾವೇರಮ್ಮನೊವು ಅನುವಾದ ಮಾಡ್ದ ಕಾದಂಬರಿ ಪುಂಸ್ತ್ರೀ. ಇದ್‌ಕನ್ನಡದ ಹೆಸ್ರ್ ಹೋದ ಲೇಖಕ ಡಾ. ಪ್ರಭಾಕರ ಶಿಶಿಲನವರ ಅದೇ ಹೆಸ್‌ರ್‌ನ ಕನ್ನಡ ಕಾದಂಬರಿನ ಅರೆಬಾಸೆ ಅನುವಾದ. ಅಂಬೆ ಮತ್ತೆ ಭೀಷ್ಮನ ಮುಖ್ಯ ಪಾತ್ರಗ ಆಗಿ ತಕಂಡ್ ಬರ್‍ದ ಈ ಪೊರ್ಸಂಗ ಅಪರೂಪದ ಒಳನೋಟಗಳ್ಂದ ಕೂಡಿಟು.
ಪುಂಸ್ತ್ರೀ ಅಂಬೆನ ಹಾಂಗೂ ಭೀಷ್ಮನ ಮುಖ್ಯ ಪಾತ್ರಲಿ ಇಸಿ ಬರ್‍ದರೂ ಇದರ ವಿಸ್ತಾರ ಇಡೀ ಮಹಾಬಾರತದ್ದ್. ಮಹಾಭಾರತದ ಕತೆ ಗೊತ್ತಿಲ್ಲದವುಯಾರ್? ಇಡೀ ಮೊನ್ಸಕುಲದ ಒಳ್ಳದ್ ಕೆಟ್ಟದರ ತೂಗಿ ನೋಡಿ ಒಳ್ಳದರ ಹೆಚ್ಚ್‌ಗಾರಿಕೆನ ಕಲಾತ್ಮಕ ಆಗಿ ಸಾರಿ ಹೇಳ್ದ , ಭಾರತದ ಸಂಸ್ಕೃತಿನ ಕಣ್ಣ್‌ಗ ಆದ ರಾಮಾಯಣ, ಮಹಾಭಾರತ ದೇಶದ ಹೆಗ್ಗುರ್‍ತುಗ. ಜಗತ್ತ್‌ನ
ಬಾರೀ ದೊಡ್ಡಕಾವ್ಯ ಮಹಾಭಾರತ. ಈ ಕಾವ್ಯದ ಸಾರ ಸರ್ವಸ್ವನ ಸುಮಾರ್ ಇನ್ನೂರು ಪುಟಗಳ್ಲಿ ಹೇಳ್ದ ಪುಂಸ್ತ್ರೀ ಮಹಾಭಾರತದ ಮೌಲ್ಯಗಳ ಹಾಂಗೇ ಒಳ್ಸಿಕಂಡ ರಸಪಾಕ. ಒಟ್ಟಿಗೇ ಅಂಬೆಗಾದ ಅನ್ಯಾಯನ ಎತ್ತಿತೋರ್ಸುವ, ಭೀಷ್ಮ ಪ್ರತಿಜ್ಞೆನ ಪ್ರಶ್ನೆ ಮಾಡ್ವ ವಿಚಾರವಂತಿಕೆನೂ ಕಂಡ್ ಬಂದದೆ. ಎದೆಗೆ ಬಾಣತಾಂಗಿಯುದ್ಧತೊರ್ದ ಭೀಷ್ಮನ ಹಿನ್ನೋಟಗಂಳ್ದ ಸುರು ಆವ ಕಾದಂಬರಿ ವಿಶೇಷ ಒಳನೋಟಗಂಳ್ದಕೂಡಿ ಕೃಷ್ಣನ ಕೊಳೊಲುನ ಗಾನ ಕೇಳಿಕಂಡ್ ಹೆಟ್ಟಿದ ಬಾಣನತೆಗ್ದ್ ಭೀಷ್ಮನ ಅಂತ್ಯಆಗುವಲ್ಲಿಗೆ ನಿತ್ತದೆ. ವ್ಯಾಸ ಮುನಿ ಬರ್ದ ಮಹಾಭಾರತ ಮಹಾಕಾವ್ಯ ಬೇರೆ ಬೇರೆ ಕವಿಗಳ ವಿದ್ವಾಂಸರ ಬರೋಣ್ಕೆಲಿ ಬೇರೆ ಬೇರೆ ರೀತಿಲಿ ಮೂಡಿ ಬಂದುಟು. ಆದಿಕವಿ ಪಂಪ ವಿಕ್ರಮಾರ್ಜುನ ವಿಜಯಲಿ ಅರ್ಜುನನ ಕತೆನ ನಾಯಕ ಮಾಡ್ರೆರನ್ನ ಗಧಾಯುದ್ಧಲಿ ಭೀಮನ ಹೆಚ್ಚ್‌ಗಾರಿಕೆನ ಹೇಳಿಟು. ಕುಮಾರವ್ಯಾಸ ಗದುಗಿನ ಭಾರತಲಿ ಕೃಷ್ಣಂಗೆ ಮಹತ್ವಕೊಟ್ಟುಟು. ಎಸ್. ಎಲ್. ಭೈರಪ್ಪನೊವು ವಾಸ್ತವದ ನೆಲೆಗಟ್ಟ್‌ಲಿ ಬರ್ದ ಪರ್ವನ್ನೂ ಇಲ್ಲಿ ನೆನ್ಸಿಕಣೊಕಾದ್ದೆ. ಡಾ. ಶಿಶಿಲನೊವು ಅಂಬೆ ಮತ್ತೆ ಭೀಷ್ಮನ ಪ್ರಧಾನ ಭೂಮಿಕೆಲಿ ಇಸಿಯೊಳೊ.
ಪುಂಸ್ತ್ರೀನ ಮೊಟ್ಟುಗೆ ಹೇಳ್ದಾದರೆ ಅಂಬೆ-ಭೀಷ್ಮ ಮುಖ್ಯ ಪಾತ್ರಗ ಆದೊರೂ ಇಡೀ ಭಾರತದಕತೆ ಇಲ್ಲಿನ ವಸ್ತು. ಡಾ. ಶಿಶಿಲರ ಆಳ ಆದ ಪಾಂಡಿತ್ಯ, ಯಕ್ಷಗಾನದ ಹಿನ್ನೆಲೆ ಹಾಂಗೂ ವೈಚಾರಿಕ ನಿಲುವುಗಂಳ್ದ ಹರ್‍ಲ್‌ಗಟ್ಟಿದ ಈ ಕಾದಂಬರಿನ ಅರೆಬಾಸೆಗೆ ತಾದು ಅಷ್ಟ್ ಸುಲ್ಬದ ಕೆಲ್ಸ ಅಲ್ಲ. ಆದರೆ ಕಾವೇರಮ್ಮನವರ ಪಳ್ಂಗಿದ ಬರೋಣ್ಕೆ, ಅರೆಬಾಸೆ ತಿಳುವೊಳ್ಕೆ ಈ ಕಾದಂಬರಿನ ಅರೆಬಾಸೆzತೇಳುವ ಹಾಂಗೆ ಮಾಡಿಟು. ಈ ಪುಸ್ತಕದ ಇನ್ನೊಂದು ಹೆಚ್ಚ್‌ಗಾರಿಕೆ ಏನ್ ತೇಳ್ರೆ ಇದರ್‍ಲಿಕೊಟ್ಟ ಪುರಾತನ ಭಾರತದ ಭೂಪಟ , ಪುರಾತನ ಆರ್ಯಸಾಮ್ರಾಜ್ಯದ ಭೂಪಟ , ಕುರುವಂಶದ ವಂಶಾವಳಿ, ನೂರುಜನಕೌರವರ ಹೆಸ್‌ರ್‌ಗ- ಇದೆಲ್ಲ ಸಾಮಾನ್ಯ ಆಗಿ ಯಾರಿಗೂ ಗೊತ್ತಿರ್ದುಲೆ. ಅಲ್ಲದೆ ಸಮುದ್ರಗಳ ಹೆಸ್‌ರ್‌ಗಆದ ಪೂರ್ವ ಸಮುದ್ರ, ಅಪರ ಸಮುದ್ರ, ಹಿಂದೂ ಮಹೋದಧಿ ತೇಳುವ ಹೆಸ್‌ರ್‌ಗನಮ್ಮ ಪ್ರಾಚೀನತೆನ ನೆನ್ಪುಸಿ ಹೆಮ್ಮೆ ಮೂಡ್ಸಿವೆ.
ಅರೆಬಾಸೆಲಿ ಸಾಕಷ್ಟ್‌ಕೆಲ್ಸ ಮಾಡ್ದ ಕಾವೇರಮ್ಮನೊವು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಂದ ಗೌರವ ಪ್ರಶಸ್ತಿ ಪಡ್‌ದೊಳೊ.ಅವರ ಮುಖ್ಯಕೃತಿಗ ಬೊದ್ಕ್ ಮತ್ತೆ ನೆಂಪುಗಳ ರಂಗೋಲಿ. ಅರೆಬಾಸೆ ಕತೆಗಳ ಸಂಕಲನ, ಪದ್ಯಗಳ ಸಂಕಲನಗಳ್ನೂ ಹೊರೆಗೆ ತಂದೊಳೊ. ಒಳ ಹರಿವುತೇಳುವ ಕನ್ನಡ ಪದ್ಯಗಳ ಸಂಕಲನ ಕೂಡಾ ಪ್ರಕಟ ಮಾಡಿಯೊಳೊ. ದೇಶದ ಹದ್ನಾಲ್ಕ್ ಬಾಸೆಗಳಿಗೆ ತರ್ಜಮೆ ಆದ ಈ ಕೃತಿನ ಅರೆಬಾಸೆಗೆತಂದ ಕಾವೇರಮ್ಮನೊವ್ಕೆ ಅಭಿನಂದನೆಗ.
ಯುವ ಲೇಖಕಿ ಸಂಗೀತಾ ರವಿರಾಜ್ ಅವರ ಲೇಖನಿಂದ ಅರೆಬಾಸೆಗೆ ಅನುವಾದ ಆದ ಕಾದಂಬರಿ ಕಲ್ಯಾಣ ಸ್ವಾಮಿ. ಇದ್‌ಕನ್ನಡದ ಹೆಸ್ರ್ ಹೋದ ವಿದ್ವಾಂಸ ನಿರಂಜನ ಅವರ ಕನ್ನಡಕಾದಂಬರಿನ ಅರೆಬಾಸೆ ಅನುವಾದ.
ಸುಳ್ಯಲಿ ಸುರುಆದ ರೈತ ಬಂಡಾಯ ಈ ಕಾದಂಬರಿನ ವಸ್ತು. ಬ್ರಿಟಿಷ್ ನೊವು ಬೇರೆ ಬೇರೆ ನೆವನ ಹೇಳಿ ಕುತಂತ್ರಂದ ಒಬ್ಬೊಬ್ಬ ರಾಜನ್ನೇ ಸಿಂಹಾಸನಂದ ಕೆಳೆಗೆ ಇಳ್ಸಿ ರಾಜ್ಯಗಳ ಅವರ ಸೋದೀನಕ್ಕೆ ತಕಂಡದ್ ಎಲ್ಲೊವ್ಕೂ ಗೊತ್ತಿದ್ದದೇ. ಹೇಳಿ ಕೇಳಿ ಬ್ರಿಟಿಷ್‌ನೊವುಯಾಪಾರಿಗ. ದುಡ್ಡು ಮಾಡಿಕಾಗಿಯೇ ಅವು ಅಲ್ಲಿಂದಿಲ್ಲಿಗೆ ಬಂದದ್. ಬತ್ತ ಬೆಳ್ಸುವ ರೈತಂಗ ತೆರಿಗೆನ ಹಣದ ರೂಪಲಿ ಕೊಡೊಕುತ ಮಾಡ್ದ್, ಉಪ್ಪು ,ಹೊಸೆಪು ಇಂತ ವಸ್ತುಗಳ ಮೇಲೆ ಸುಂಕ ಹಾಕಿದ್-ಇದರೆಲ್ಲ ವಿರೋದ ಮಾಡಿ ನಡ್ಸಿದ ಹೋರಾಟದಕತೆ ಇದ್. ಕೊಡ್ಗುನ ಅಕೇರಿನ ರಾಜಚಿಕ್ಕವೀರನ ಕೆಳೆಗೆ ಇಳ್ಸಿ ಈಸ್ಟ್‌ಇಂಡಿಯಾ ಕಂಪೆನಿ ಪರ್ಂಗಿಗಳ ಆಡಳ್ತನ ಕೊಡ್ಗುನ ಮೇಲೆ ಹೇರ್‍ದ ಕಾಲ. ಇಷ್ಟಲ್ಲದೆ ಕೊಡ್ಗುನ ಆಡಳ್ತೆಲಿ ಇದ್ದ ಸುಳ್ಯ ಪುತ್ತೂರುನ ನೂರ ಹತ್ತ್ ಗ್ರಾಮಗಳ ಬೇರೆ ಮಾಡಿ ಕೆನ ರಾ ಜಿಲ್ಲೆಗೆ ಸೇರ್‍ಸಿ ಅಲಿ ಇದ್ದ ಅವೈಜ್ಞಾನಿಕ ಕಂದಾಯ ಪದ್ದತಿನ ಇವರ ಮೇಲೆ ಹೊರ್ಸಿದೊ. ಸ್ವಾಭಿಮಾನಿಗ ಆದ ಇಲ್ಲಿನ ಜನಗ ಇದರ ವಿರೊಧಿಸಿದೊ. ಕೊಡ್ಗುನ ಅಪರಂಪಾರ ಜಂಗಮ ಏಸಲಿ ಜನರ ನೊಡುಗೆ ಹೋಗಿ ಹುಲಿಕೊಂದ ನಂಜಯ್ಯನ ಸಾಯಂದಕಲ್ಯಾಣ ಸ್ವಾಮಿ ಮತ್ತೆ ಪುಟ್ಟ ಬಸವತೇಳುವ ಇಬ್ಬೊರು ಬಂಡಾಯಕ್ಕೆ ತಯಾರ್ ಮಾಡಿವೆ. ಆದರೆ ಅಪರಂಪಾರ ಮತ್ತೆಕಲ್ಯಾಣ ಸ್ವಾಮಿನ ಬಂಧನ ಆದ್ದೆ. ಆಗ ಪುಟ್ಟಬಸವನ್ನೇಕಲ್ಯಾಣಸ್ವಾಮಿತ ಬಿಂಬುಸಿ ಹೋರಾಟಕ್ಕೆ ತಯಾರಾದೊ. ಇತ್ತ ಸುಳ್ಯಂದ ಕೆದಂಬಾಡಿರಾಮಗೌಡನೂ ಸಾವ್ರದ ಇನ್ನೂರು ರೈತರ ದಂಡ್‌ನೊಟ್ಟಿಗೆ ಸೇರಿಕಂಡ್ ಬೆಳ್ಳಾರೆ ಕಜಾನೆನ ವಶಕ್ಕೆ ತಕಂಡ್ ಮಂಗ್ಳೂರ್‍ಲಿ ಇದ್ದ ಪರ್ಂಗಿಗಳ ಎದ್‌ರ್ಸಿ ಬಾವುಟಗುಡ್ಡೆಲಿ ಬಂಡಾಯದ ಪತಾಕೆನ ಹಾರ್ಸಿವೆ. ಹನ್ನೆರ್‍ಡ್ ದಿನ ಕೆನರಾಜಿಲ್ಲೆ ಬಂಡಾಯಗಾರ್ರ ಹಿಡ್ತಲಿ ಇದ್ದದ್ ದಕ್ಷಿಣಕನ್ನಡ ಕೊಡ್ಗುನ ಇತಿಹಾಸಲಿ ಒಂದು ಮಹತ್ದದ ಸಂಗ್‌ತಿ. ಮತ್ತೆದೊಡ್ಡ ಸೈನ್ಯದೊಟ್ಟಿಗೆ ಬಂದ ಬ್ರಿಟಿಷ್‌ನೊವು ಹೋರಾಟನ ಹತ್ತಿಕ್ಕಿದೊ. ಪುಟ್ಟಬಸವ , ಬಂಗರಾಜಂಗೆ ಗಲ್ಲಾದರೆ ರಾಮಗೌಡಂಗೆ, ಹುಲಿಕೊಂದ ನಂಜಯ್ಯಂಗೆ ಜೀವನ ಪೂರಾಜೈಲ್‌ಆದ್ದೆ. ಕೊಡ್ಗುಲಿ ಬಂಡೆದ್ದಗುಡ್ಡೆಮನೆ ಅಪ್ಪಯ್ಯಗೌಡ ಮತ್ತೆ ಅವರ ತಮ್ಮನ್ನೂ ಗಲ್ಲ್‌ಗೆ ಹಾಕಿವೆ.
ಶ್ರೀಮತಿ ಸಂಗೀತಾ ಈ ಕಾದಂಬರಿನ ಬಾರೀ ಲಾಯ್ಕ್‌ಲಿ ಅರೆಬಾಸೆಗೆ ತರ್ಜುಮೆ ಮಾಡಿಯೊಳೊ. ಕಾದಂಬರಿನ ಓದಿಕಂಡ್ ಹೋಕನ ನಮ್ಮದೇ ಜನ ನಮ್ಮದೇ ಮೊಣ್ಣುಲಿ ನಡ್ಸಿದ ಹೋರಾಟದಕತೆ ಹೆಮ್ಮೆ ಮೂಡ್ಸಿದೆ. ಈ ಕಾದಂಬರಿಲಿಬಾವ ಗಂಗವ್ವ, ಗಿರಿಜವ್ವ, ಚೆಟ್ಟಿಕುಡಿಯ, ಕರ್ತಕುಡಿಯ, ಸುಬ್ರಾಯ ಹೆಗಡೆ, ಸೋಮಯ್ಯ -ಇಂತ ಪಾತ್ರಗ ಕೂಡಾ ಜೀವಂತಿಕೆಂದ, ಸ್ವಾಭಿಮಾನಂದ ,ದೇಶಪ್ರೇಮಂದ ಕೂಡಿಯೊಳೊ.ಲೀ ಹಾರ್ಡಿ, ಬೋಪು ದಿವಾನನಂತ ಸಮಯ ಸಾದಕದುಷ್ಟರ್ ಪ್ರತಿ ಒಂದುರಾಜ್ಯಲಿ ಇರುದಂರ್‍ದಳೇ ಪರದೇಶದೊವ್ಕೆ ನಮ್ಮದೇಶನ ಡ್ತಲಿ ಇಸಿಕಂಬಕೆ ಸಾದ್ಯಆದ್ದ್.
ಕಪ್ಪು ಹುಡುಗಿ ತೇಳುವ ಪ್ರಬಂಧ ಸಂಕಲನಕ್ಕೆ ಕೊಡಗಿನಗೌರಮ್ಮ ಪ್ರಶಸ್ತಿ ಪಡ್ದ ಸಂಗೀತ ಕವನ ಸಂಕಲನ ಕೂಡಾ ಪ್ರಕಟ ಮಾಡಿಯೊಳೊ. ಅರೆಬಾಸೆಲಿ ಕೂಡಾ ಪದ್ಯಗಳ ಲೇಖನಗಳ ಬರಕಂಡ್‌ಇರುವ ಇವು ಈ ಕಾದಂಬರಿನ ಅರೆಬಾಸೆಗೆ ತಂದ್‌ಅಭಿನಂದನೆಗೆ ಪಾತ್ರ ಆಗೊಳೊ.
ಪೌರಾಣಿಕ ಕತೆನ, ಪಾತ್ರಗಳ ಮಾತ್‌ಕತೆನ ಅರೆಬಾಸೆಲಿ ಓದುದೇ ಒಂದು ಸೊಗ್ಸಾದಅನ್ಬವ. ಪ್ರೊ. ಕುಶಾಲಪ್ಪಗೌಡ್ರ ಮಾನಸ ಭಾರತ ಈ ಹಿಂದೆ ನಾವ್ಗೆ ಅಂತ ಅನ್ಬವ ಕೊಟ್ಟುಟು. ಈಗ ಕಾವೇರಮ್ಮನವರ ಪುಂಸ್ತ್ರೀ(ಪೌರಾಣಿಕ) ಹಾಂಗೂ ಸಂಗೀತಾ ಅವರ ಕಲ್ಯಾಣ ಸ್ವಾಮಿ (ಐತಿಹಾಸಿಕ)ಕಾದಂಬರಿಗ ಅಂತ ಅನ್ಬವನ ಕೊಟ್ಟವೆ. ಇವು ಅರೆಬಾಸೆನ ಬೆಳವಣ್ಕೆಗೆ ಕೊಡುಗೆ ಕೊಡ್ದರ್‍ಲಿ ಸಂಶಯಇಲ್ಲೆ. ಅರೆಬಾಸೆ ಗೊತ್ತಿರುವ ಎಲ್ಲೊವೂ ಈ ಕಾದಂಬರಿಗಳ ಓದಿರೆ ಅವರ ಪ್ರಯತ್ನ ಸಾರ್ಥಕ ಆದ್ದೆ.

ಲೀಲಾ ದಾಮೋದರ
`ಧಾತ್ರಿ’

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.