Breaking News

ಕೇಂದ್ರ ಹಾಗೂ ರಾಜ್ಯ ಸರಕಾರದ ಆಡಳಿತ ವೈಫಲ್ಯ : ಸುಳ್ಯ ಮಹಿಳಾ ಬ್ಲಾಕ್ ಕಾಂಗ್ರೆಸ್ ಖಂಡನೆ

Advt_Headding_Middle

ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ನಂತರ ದಿನೇ ದಿನೇ ಗ್ಯಾಸ್ , ಪೆಟ್ರೊಲ್ , ಡೀಸೆಲ್ , ಹಾಗು ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ದೇಶದ ಜನತೆ ಸಂಕಷ್ಟ ಪಡುತ್ತಿದ್ದಾರೆ .ಅಲ್ಲದೆ ಗ್ಯಾಸ್ ಸಭ್ಸಿಡಿ ಮೊತ್ತವನ್ನು ಸರ್ಕಾರ ರದ್ದು ಮಾಡಿದ್ದು ಜನರ ಬದುಕು ಚಿಂತಾಜನಕ ಸ್ಥಿತಿಗೆ ತಲುಪಿದೆ. ದಿನದಿಂದ ದಿನಕ್ಕೆ ಜಿ ಡಿ ಪಿ ಕುಸಿತ ಆಗುತ್ತಿದ್ದು ಸುಮಾರು 50 ವರ್ಷಗಳ ಹಿಂದಕ್ಕೆ ದೇಶವನ್ನು ಈಗಿನ ಸರ್ಕಾರ ಕೊಂಡೊಯ್ದಿದೆ . ಕೊರೊನ ಮಹಾಮಾರಿಯನ್ನು ತಡೆಯುವಲ್ಲಿ ಸಂಪೂರ್ಣವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ವಿಫಲವಾಗಿ ನಡು ಬೀದಿಯಲ್ಲಿ ಜನರು ಸಾಯುವ ಪರಿಸ್ಥಿತಿ ಎದುರಾಗಿದೆ.ಕೊರೊನಾ ಹೋಗಲಾಡಿಸಲು ಚಪ್ಪಾಳೆ ತಟ್ಟುವಂತೆ , ದೀಪ ಬೆಳಗಿಸುವಂತೆ , ಜಾಗಟೆ ಬಾರಿಸುವಂತೆ ಹಾಗೂ ಗ್ಯಾಸ್ ಬೆಲೆ ಏರಿಕೆ ಆದಾಗ ಬಿಜೆಪಿಯ ಮಹಿಳಾ ನಾಯಕಿಯರು ನಡುರಸ್ತೆಯಲ್ಲಿ ಅಡುಗೆ ಮಾಡಿ ಪ್ರತಿಭಟಿಸಿದ್ದರು. ಈಗ ಅವರೆಲ್ಲರೂ ನಾಪತ್ತೆಯಾಗಿದ್ದಾರೆ. ದ.ಕ. ಜಿಲ್ಲೆಯ ಎಂ. ಆರ್ ಪಿ. ಎಲ್ ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದೆ ಉತ್ತರ ಭಾರತದವರಿಗೆ ಬಿಜೆಪಿ ನಾಯಕರು ಅವಕಾಶ ಮಾಡಿಕೊಟ್ಟು ಜಿಲ್ಲೆಯ ಹಾಗೂ ಕರಾವಳಿ ಭಾಗದ ಜನತೆಗೆ ದ್ರೋಹ ಬಗೆದಿದ್ದಾರೆ . ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯ ವೈಪಲ್ಯಗಳನ್ನು ಪ್ರಶ್ನಿಸಿದಾಗ ಕಾಂಗ್ರೆಸ್ ನಾಯಕರ , ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಬಂದಿಸುತ್ತಿರುವುದು ನಾಚಿಕೆಗೇಡಿತನ. ಕೇಂದ್ರ ಹಾಗೂ ರಾಜ್ಯ ಸರಕಾರದ ಈ ಎಲ್ಲಾ ದುರಾಡಳಿತದ ವೈಫಲ್ಯವನ್ನು ಖಂಡಿಸುವುದಾಗಿ ಸುಳ್ಯ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.