ಬದುಕು ಕಸಿದುಕೊಂಡ ಮಹಾಮಾರಿ ಕೊರೋನ – ಪ್ರಿಯ ನಾಯ್ಕ್

Advt_Headding_Middle

ಕೊರೋನ ನಮ್ಮ ಜೀವನದ ಅದೆಷ್ಟೋ ದಿನಗಳನ್ನು ಕತ್ತಲೆಯ ಕೋಣೆಯೊಳಗೆ ಕಳೆಯುವಂತೆ ಮಾಡಿದೆ. ಉದ್ಯೋಗಿಗಳನ್ನು, ವಿದ್ಯಾರ್ಥಿಗಳನ್ನು ಬಂಧನದಲ್ಲಿ ಇರುವಂತೆ ಮಾಡಿದೆ. ಅದೆಷ್ಟೋ ಜನರಿಗೆ ಕೆಲಸ ಕಾರ್ಯವಿಲ್ಲದೆ ಮುಂದೆ ತಮ್ಮ ಜೀವನ ನಡೆಸುವ ಬಗ್ಗೆ ಯೋಚಿಸುವಂತೆ ಮಾಡಿರುವ ಕೊರೋನಾ ಮಹಾ‌ಮಾರಿಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಅದೆಷ್ಟೋ ಬಡ ಕುಟುಂಬಗಳು ಕೊರೋನಾದಿಂದ ಒಂದು ತುತ್ತು ಅನ್ನಕ್ಕೂ ಪರದಾಡುವಂತೆ ಮಾಡಿದೆ. ವಿದ್ಯಾರ್ಥಿಗಳ, ಉದ್ಯೋಗಕಾಂಕ್ಷಿಗಳ ಕನಸುಗಳನ್ನು ನುಚ್ಚುನೂರು ಮಾಡಿದೆ. ಇನ್ನೊಂದೆಡೆ ಅದೆಷ್ಟೋ ಜೀವಗಳು ಬಂಧು – ಬಳಗ ಇದ್ದರೂ ಅನಾಥರಾಗಿ ಪರಲೋಕವನ್ನು ಸೇರಿಕೊಂಡಿವೆ. ಕೊರೋನಾ ಮನುಷ್ಯ ತನ್ನ ಜೀವನದಲ್ಲಿ ಮಾಡಿದ ಪಾಪ ಕರ್ಮಗಳಿಗೆ ಪ್ರಕೃತಿಯ ಮೂಲಕ ಉತ್ತರ ನೀಡುತ್ತಿದೆ. ನಮ್ಮ ಜೀವನವನ್ನು ಏನನ್ನೋ ಗಳಿಸುವ ಭರಾಟೆಯಲ್ಲಿ ಪ್ರಕೃತಿಯ ನಾಶವನ್ನು ಮಾಡಿದುದರ ಪರಿಣಾಮವಾಗಿ ಇವತ್ತು ಇವತ್ತು ನಾವು ಪ್ರಕೃತಿಯ ಕ್ರೂರತೆಯನ್ನು ಅನುಭವಿಸುತ್ತಿದ್ದೇವೆ. ನಮ್ಮ ಪರಿಸರದಲ್ಲಿ ಯಾರಿಗಾದರೂ ಕೊರೋನಾ ಪಾಸಿಟಿವ್ ಬಂದರೆ ಅಂತವರನ್ನು ಅಸ್ಪೃಶ್ಯರಂತೆ ಕಾಣದೆ ಅವರಿಗೆ ಧೈರ್ಯ ತುಂಬಿ ನಮ್ಮಿಂದಾದ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯೋಣ. ಹಾಗೆಯೇ ಸರಕಾರದ ನಿಯಮಗಳನ್ನು ಪಾಲಿಸಲು ಬದ್ಧರಾಗಿರೋಣ, ನಮ್ಮ ಜೀವವನ್ನು ನಾವೇ ರಕ್ಷಣೆ ಮಾಡೋಣ. ಪ್ರಕೃತಿಯೊಂದಿಗೆ ನಮ್ಮ ಒಡನಾಟವನ್ನು ಬೆಳೆಸುತ್ತಾ, ಕೊರೋನಾ ಮಹಾಮಾರಿಯಿಂದ ಮುಕ್ತರಾಗಿ ನಮ್ಮ ದೇಶವನ್ನು ಮುಂದಿನ ಪೀಳಿಗೆಯತ್ತ ಕರೆದೊಯ್ಯೋಣ…

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.