ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಳ : ಸುಳ್ಯ ರೆಡ್ ಝೋನ್

Advt_Headding_Middle

 

ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯಿತು ತುರ್ತು ಸಭೆ ಸಿ.ಎಸ್.; ಎ.ಸಿ. ಭಾಗಿ

ಪಾಸಿಟಿವ್ ಬಂದವರ ಸುತ್ತಮುತ್ತಲ ಮನೆಯವರ ಟೆಸ್ಟ್ ಕಡ್ಡಾಯ : ಸೂಚನೆ

ಸುಳ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಹೆಚ್ಚಾಗಿರುವುದರಿಂದ ಈ ಕುರಿತು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ನೇತೃತ್ವದಲ್ಲಿ ತುರ್ತು ಸಭೆ ತಾ.ಪಂ. ಸಾಮರ್ಥ್ಯ ಸೌಧದಲ್ಲಿ ನಡೆಯಿತು.

ಜಿ.ಪಂ. ಸಿ.ಎಸ್. ಡಾ. ಕುಮಾರ್, ಎ.ಸಿ. ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ಅನಿತಾಲಕ್ಷ್ಮೀ, ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಸೇರಿದಂತೆ ವೈದ್ಯಾಧಿಕಾರಿ ಗಳು, ಇತರ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಸುಳ್ಯದಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾಗಿರುವುದರ ಸುಳ್ಯದ ಕೊರೊನಾ ನಿಯಂತ್ರಣ ಕ್ರಮದ ಕುರಿತು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ‌ಟೆಸ್ಟಿಂಗ್ ಯಾವ ರೀತಿ ನಡೆಸಲಾಗುತ್ತಿದೆ ಎಂಬ ಮಾಹಿತಿ ಪಡೆದರು. ವಿವರ ಪಡೆದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ರಾಜೇಂದ್ರ ರು ನಾಳೆಯಿಂದ ಟೆಸ್ಟ್ ಗಳನ್ನು ಹೆಚ್ಚು ಮಾಡಬೇಕು. ತಾಲೂಕು ಆಸ್ಪತ್ರೆಯಲ್ಲಿ 200 ಹಾಗೂ ಗ್ರಾಮಾಂತರ ಪ್ರಾಥಮಿಕ ಕೇಂದ್ರಗಳಲ್ಲಿ 100 ಟೆಸ್ಟ್ ಆಗಬೇಕು ಎಂದು ಗುರಿ ನೀಡಿದರು.

ಪ್ರಚಾರ ಯಾವ ರೀತಿ? : ಒಂದು ಮನೆಯಲ್ಲಿ ಒಬ್ಬ ಜ್ವರ ಲಕ್ಷಣ ಇದ್ದು ಆತನಿಗೆ ಆಸ್ಪತ್ರೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆತ ಯಾರನ್ನು ಸಂಪರ್ಕಿಸಬೇಕು ಎಂಬ ಬಗ್ಗೆ ಗ್ರಾಮ ಮಟ್ಟದಲ್ಲಿ ಪ್ರಚಾರ ಯಾವ ರೀತಿ ಕೈಗೊಂಡಿದ್ದೀರಿ ಎಂದು ಕೇಳಿದಾಗ, ಅಧಿಕಾರಿಗಳ ಉತ್ತರಕ್ಕೆ ಡಿ.ಸಿ. ಗರಂ ಆದರು. ಪ್ರತೀ ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ಇದೆ. ಹೆಲ್ಪ್ ಲೈನ್ ನಂಬರ್ ಇದೆ ಅದನ್ನು ಪ್ರಚಾರ ಮಾಡಿ. ಎಲ್ಲರಿಗೂ ತಲುಪವಂತೆ ಆಗಬೇಕು ಎಂದು ಸಲಹೆ ನೀಡಿದರು.

ತೊಡಿಕಾನ, ದೇವಚಳ್ಳದಲ್ಲಿ ಪ್ರಕರಣ ಹೆಚ್ಚು ಕಂಡು ಬಂದಿರುವುದನ್ನು ಪ್ರತ್ಯೇಕ ವಾಗಿ ಮಾಹಿತಿ ಪಡೆದ ಡಿ.ಸಿ.ಯವರು ಪಾಸಿಟಿವ್ ಬಂದವರ ಸುತ್ತಮುತ್ತಲಿನ ಮನೆಯವರನ್ನು ಕಡ್ಡಾಯವಾಗಿ ಪರೀಕ್ಷೆ ನಡೆಸಬೇಕು. ನಾವು ಈಗಲೇ ಜಾಗರೂಕರಾಗಿ ಕಾರ್ಯ ಪ್ರವೃತ್ತರಾಗೋಣ ಎಂದು ಸಲಹೆ ನೀಡಿದರು.

ಉಸ್ತುವಾರಿ ಹಂಚಿಕೆ : ತಾಲೂಕಿನಲ್ಲಿ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ. ಎಲ್ಲ ಆರೋಗ್ಯ ಕೇಂದ್ರ ದ ಉಸ್ತುವಾರಿ ತಾಲೂಕು ಆರೋಗ್ಯಾಧಿಕಾರಿಗಳಿಗೆ ನೋಡಿಕೊಳ್ಳಲು ಕಷ್ಟವಾಗಬಹುದು. ಆದ್ದರಿಂದ ತಹಶೀಲ್ದಾರ್, ತಾ.ಪಂ. ಇ.ಒ. ಹಾಗೂ ತಾಲೂಕು ಆರೋಗ್ಯಾಧಿಕಾರಿ ಗಳಿಗೆ ತಲಾ ಎರಡೆರಡು ಆರೋಗ್ಯ ಕೇಂದ್ರಗಳ ಉಸ್ತುವಾರಿ ವಹಿಸಲಾಯಿತು.

ಕೋವಿಡ್ ಕೇರ್ ಸೆಂಟರ್ ಗೆ : ತಾಲೂಕಿನಲ್ಲಿ ಪಾಸಿಟಿವ್ ಬಂದವರಿಗೆ ಮನೆಯಲ್ಲಿ ಐಸೋಲೇಶನ್ ಗೆ ವ್ಯವಸ್ಥೆ ಇಲ್ಲವಾದರೆ ಅವರು ಕೋವಿಡ್ ಕೇರ್ ಸೆಂಟರ್ ಗೆ ಬರಬೇಕು. ಅದರಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಯಾರಾದರೂ ಬರಲು ಒಪ್ಪದಿದ್ದರೆ ಪೋಲೀಸ್ ಪ್ರೊಟೆಕ್ಷನ್ ಪಡೆದಾದರೂ ಅವರನ್ನು ಕೋವಿಡ್ ಸೆಂಟರ್ ಗೆ ಕಳುಹಿಸಲು ಸೂಚನೆ ನೀಡಲಾಯಿತು.

ಲಾಕ್ ಡೌನ್ ಸೀರಿಯಸ್ ನೆಸ್ ಅರ್ಥ ಮಾಡಿಕೊಳ್ಳಿ : ಲಾಕ್ ಡೌನ್ ಇದ್ದರೂ ನಿಗದಿತ ಸಮಯದ ಬಳಿಕ ಸುಳ್ಯದಲ್ಲಿ ವಾಹನಗಳು ಓಡಾಡುವ ಬಗ್ಗೆ ದೂರುಗಳು ಬರುತ್ತಿದೆ ಎಂದು ಸರ್ಕಲ್ ಇನ್ ಸ್ಪೆಕ್ಟರ್ ರನ್ನು ಡಿ.ಸಿ.ಯವರು ಪ್ರಶ್ನಿಸಿದರು. ” ನಾವು ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿಗಳನ್ನು ನೇಮಿಸಿದ್ದೇವೆ. ಸಮಯ ಮಿರಿದ ತಕ್ಷಣ ಅಂಗಡಿಗಳು ಬಂದ್ ಮಾಡಿಸಲಾಗುತ್ತದೆ ಎಂದು ಇನ್ ಸ್ಪೆಕ್ಟರ್ ಹೇಳಿದಾಗ, “ಲಾಕ್ ಡೌನ್ ಸಿರಿಯಸ್ ನೆಸ್ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಜನರು ಮಾತು ಕೇಳದಿದ್ದರೆ ಅನಗತ್ಯ ತಿರುಗುವವರ ವಾಹನ ಮುಟ್ಟುಗೋಲು ಹಾಕಿ ಎಂದು ಸೂಚನೆ ನೀಡಿದರಲ್ಲದೆ, ಕೋವಿಡ್ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಸಭೆಯ ವಿಷಯ ತಿಳಿದು ವರದಿ ಮಾಡಲು ಹೋಗಿದ್ದ ಪತ್ರಕರ್ತರ ನ್ನು ಕಂಡ ಡಿ.ಸಿ. ಯವರು ಆರಂಭದಲ್ಲೆ ಪತ್ರಕರ್ತರ ಬಳಿ ಬಂದು “ನೀವು ಸಭೆಯಲ್ಲಿ ಇರುವುದು ಬೇಡ. ಸಭೆ ಮುಗಿದ ಬಳಿಕ ನಾನು ಮಾಹಿತಿ ನೀಡುತ್ತೇನೆ ಎಂದು ಕೇಳಿಕೊಂಡರು. ಸಭೆ ಮುಗಿದ ಬಳಿಕ ಪತ್ರಕರ್ತರ ನ್ನು ಕರೆದ ಡಿ.ಸಿ.ಯವರು ಸಭೆಯಲ್ಲಿ ಆದ ಚರ್ಚೆಯ ಬಗ್ಗೆ ಮಾಹಿತಿ ನೀಡಿದರು.

ಸುಳ್ಯ ರೆಡ್ ಝೋನ್: ಮಂಗಳೂರಿನಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ.‌ ಆದರೆ ಸುಳ್ಯ ಮತ್ತು ಬೆಳ್ತಂಗಡಿ ಹೆಚ್ಚಿದೆ.‌ಅದು ನಿಯಂತ್ರಣ ಆಗಬೇಕು. ಅದಕ್ಕಾಗಿ ಟೆಸ್ಟಿಂಗ್ ಹೆಚ್ಚು ಮಾಡಲು ಸೂಚಿಸಲಾಗಿದೆ. ಪಾಸಿಟಿವಿಟಿ ರೇಟ್ ನೋಡಿದರೆ ಸುಳ್ಯ ರೆಡ್ ಝೋನ್ ನಲ್ಲಿದೆ. ಅದನ್ನು ಕಡಿಮೆ ಮಾಡಲು ಚರ್ಚೆ ಮಾಡಲಾಗಿದೆ ಎಂದು ಹೇಳಿದರು. ಜ್ವರ, ಶೀತ ಲಕ್ಷಣ ಇದ್ದವರು ಟೆಸ್ಟ್ ಗೆ ಅವರಾಗಿಯೇ ಬರಬೇಕು. ಒತ್ತಾಯ‌ಮಾಡುವಂತೆ ಮಾಡಬಾರದು ಎಂದು ಡಿ.ಸಿ. ಹೇಳಿದರು.

ಖಾಸಗಿ ವೈದ್ಯರ ಸಭೆ : ಜ್ವರ ಬಂದವರು ಖಾಸಗಿ ವೈದ್ಯರಲ್ಲಿಗೆ ಹೋಗಿ ಔಷಧ ಪಡೆಯುತ್ತಾರೆಂಬ ಮಾಹಿತಿ ಇದೆ. ಅದಕ್ಕಾಗಿ ಎಲ್ಲ ಖಾಸಗಿ ವೈದ್ಯರ ಸಭೆ ನಡೆಸಿ ಔಷಧ ಪಡೆದವರ ವಿವರ ಪಡೆಯಬೇಕೆಂದು ಸೂಚನೆ ನೀಡಲಾಗಿದೆ ಎಂದು ಡಿ.ಸಿ
ಹೇಳಿದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.