Breaking News

ಆಲೆಟ್ಟಿ ಸಹಕಾರಿ ಸಂಘದ ಸದಸ್ಯರ ಕೃಷಿಯೇತರ ಸಾಲದ 1 ತಿಂಗಳ ಬಡ್ಡಿ ಮನ್ನಾ

Advt_Headding_Middle

 

ಕೃಷಿ ಸಾಲ ಮರು ಪಾವತಿಗೆ ಅವಧಿ ವಿಸ್ತರಣೆ, ಬೆಳೆ ವಿಮೆಗೆ ಅರ್ಜಿ ಸಲ್ಲಿಸುವಂತೆ ಮನವಿ

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಯವರ ಅಧ್ಯಕ್ಷತೆಯಲ್ಲಿ ಜೂ.10 ರಂದು ನಡೆಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಕರುಣಾಕರ ಹಾಸ್ಪಾರೆ, ಸಿ.ಇ.ಒ.ದಿನಕರ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕೊರೊನಾ ಕಾರಣದಿಂದ ಜೂ.14 ರವರೆಗೆ ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಸಂಘದ ಸದಸ್ಯರು ಆರ್ಥಿಕ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವುದರಿಂದ ಸಂಘದ ಸ್ವಂತ ಬಂಡವಾಳದಿಂದ ನೀಡಿದ ಸದಸ್ಯರ ಕೃಷಿಯೇತರ ಸಾಲಗಳಾದ ಆಭರಣ ಈಡಿನ ಸಾಲ, ವಾಹನ ಖರೀದಿ, ಮನೆ ಕಟ್ಟಡ ನಿರ್ಮಾಣ ಸಾಲಗಳ ಒಂದು ತಿಂಗಳ ಅವಧಿಯ ಬಡ್ಡಿಯನ್ನು ಮನ್ನಾ ಮಾಡುವುದಾಗಿ ತೀರ್ಮಾನಿಸಲಾಯಿತು. ಎಪ್ರಿಲ್, ಮೇ, ಜೂನ್ ತಿಂಗಳಿನಲ್ಲಿ ವಾಯಿದೆಯಾಗುವ ಅಲ್ಪಾವಧಿ ಬೆಳೆ ಸಾಲ, ಮಧ್ಯಮಾವಧಿ, ದೀರ್ಘಾವಧಿ ಕೃಷಿ ಉದ್ದೇಶದ ಸಾಲಗಳ ಮರುಪಾವತಿ ಅವಧಿಯನ್ನು ಜೂ.30 ರವರೆಗೆ ವಿಸ್ತರಿಸಿ ಕಾಲಾವಕಾಶ ನೀಡುವುದೆಂದು ನಿರ್ಣಯಿಸಲಾಯಿತು. 2021-22 ನೇ ಸಾಲಿನ ಹವಮಾನಾಧಾರಿತ ಬೆಳೆ ವಿಮೆಯನ್ನು ಜೂ.30 ರೊಳಗೆ ಕೇಂದ್ರ ಕಛೇರಿ ಮತ್ತು ಕೋಲ್ಚಾರು, ಅರಂಬೂರು ಶಾಖೆಗಳಲ್ಲಿ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು. ನಿರ್ದೇಶಕರುಗಳಾದ ಜಯಪ್ರಕಾಶ್ ಕುಂಚಡ್ಕ, ಹರೀಶ್ ಕೆ.ಜೆ, ಸುಧಾಕರ ಆಲೆಟ್ಟಿ, ಗಂಗಾಧರ ಎನ್. ಎ, ತಂಗವೇಲು ನಾಗಪಟ್ಟಣ, ಶಿವರಾಮ ಕಾಪುಮಲೆ, ಸುದರ್ಶನ ಪಾತಿಕಲ್ಲು, ವೇದಾವತಿ ಆಲೆಟ್ಟಿ ಉಪಸ್ಥಿತರಿದ್ದರು. ಸಿ.ಇ.ಒ.ದಿನಕರ ಸ್ವಾಗತಿಸಿ, ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.