ಕೊರೋನಾ ಸಂಕಷ್ಟ ಕಾಲದಲ್ಲಿ 15 ನೇ ಹಣಕಾಸು ಯೋಜನೆ ಅನುದಾನ ಸ್ವಲ್ವ ಕಡಿತಗೊಳಿಸಿರುವುದು ಸಹಜ ಪ್ರಕ್ರಿಯೆ : ವಿನಯ ಮುಳುಗಾಡು

Advt_Headding_Middle

ಸಂಪೂರ್ಣ ವಿಶ್ವವೇ ಕರೋನಾದಿಂದ ಆರ್ಥಿಕ ಹಿಂಜರಿತಕ್ಕೆ ಒಳಗಾಗಿ ಪರಿಸ್ಥಿತಿಯು ತಲ್ಲಣಗೊಂಡಂತೆ, ನಮ್ಮ ದೇಶವೂ ಕೊಂಚ ಆರ್ಥಿಕ ಹಿಂಜರಿತಕ್ಕೆ ಒಳಗಾಗಿರುವುದು ಪ್ರತಿಯೊಬ್ಬರಿಗೂ ತಿಳಿದಿರಬೇಕಾದ ವಿಚಾರ. ಆದರೂ ಕಾಂಗ್ರೆಸ್ಸಿನ ಕೆಲ ವ್ಯಕ್ತಿಗಳಿಗೆ ದೇಶದ ಸ್ಥಿತಿಗತಿಗಳ ಬಗ್ಗೆ ತಿಳಿದು ಕೊಳ್ಳುವ ಶಕ್ತಿ ಇಲ್ಲದೇ ಇರುವುದು ವಿಷಾದನೀಯ. ಕೊರೋನಾ ಸಂಕಷ್ಟ ಕಾಲದಲ್ಲಿ ೧೫ನೇ ಹಣಕಾಸು ಯೋಜನೆ ಅನುದಾನ ಸ್ವಲ್ವ ಕಡಿತಗೊಳಿಸಿರುವುದು ಸಹಜ ಪ್ರಕ್ರಿಯೆ ಎಂದು ಸುಳ್ಯ ಎಪಿಎಂಸಿ ಅಧ್ಯಕ್ಷ ವಿನಯ ಮುಳುಗಾಡು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಮ್ಮ ದೇಶದ ಭದ್ರತೆ ಮತ್ತು ರೈತರ ಹಿತದೃಷ್ಠಿಯಿಂದ ಕೆಲವು ನೆರೆ ರಾಷ್ಟ್ರಗಳಿಂದ ಅಕ್ರಮವಾಗಿ ಕಳ್ಳ ಸಾಗಾಣಿಕೆ ಮೂಲಕ ಬರುತ್ತಿದ್ದ ಅಡಿಕೆ ಮತ್ತು ಇತರ ಬೆಳೆಗಳನ್ನು ಸಂಪೂರ್ಣ ನಿಷೇಧಿಸಿದ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಇಂದು ಅದರ ಪರಿಣಾಮ ನಮ್ಮ ಸುಳ್ಯದಲ್ಲು ಗೋಚರಿಸುತ್ತಿದೆ. ಅಡಿಕೆಗೆ ರೂ.೨೦೦ರ ಆಸುಪಾಸಿನಲ್ಲಿ ಇದ್ದ ಬೆಲೆ ಇಂದು ರೂ.೫೧೦ ಕ್ಕೆ ಏರಿಕೆಯಾಗಿರುವುದು, ಇತರ ವಾಣಿಜ್ಯ ಬೆಳೆಗಳ ಬೆಲೆ ಏರಿಕೆಯಾಗುತ್ತಿರುವುದು ಸುಳ್ಯದ ಜನತೆ ಗಮನಿಸುತ್ತಿದೆ. ಇದು ಸಮರ್ಥ ಆಳ್ವಿಕೆಯ ಪರಿಣಾಮ. ಇದನ್ನು ಕಾಂಗ್ರೆಸ್ ಮೊದಲು ಸ್ವಾಗತಿಸಲಿ.

ಇಷ್ಟೆಲ್ಲ ಆರ್ಥಿಕ ಹೊಡೆತದಿಂದ ಸಹಜವಾಗಿ ಗ್ರಾಮ ಪಂಚಾಯತ್ ನಿಧಿಗೆ ಕೇಂದ್ರ ಸರಕಾರ ನೀಡುವ ೧೫ನೇ ಹಣಕಾಸು ಯೋಜನೆಯ ಹಣದಲ್ಲಿ ಸ್ವಲ್ಪ ಕಡಿತಗೊಳಿಸಿರುವುದು ಆಶ್ಚರ್‍ಯಕರವೇನಲ್ಲ. ಇದು ಸಹಜ ಪ್ರಕ್ರಿಯೆ.

೧೪ನೇ ಹಣಕಾಸಿನ ಯೋಜನೆಯ ಮೂಲಕ ಕೇಂದ್ರ ಸರಕಾರದ ಹಣ ನೇರವಾಗಿ ಸ್ಥಳೀಯಾಡಳಿತ ಗ್ರಾಮ ಪಂಚಾಯತ್‌ಗೆ ಕನಿಷ್ಠ ೨೦ ಲಕ್ಷದಿಂದ ೫೦-೬೦ ಲಕ್ಷದವರೆಗೆ ಹಣ ಬಿಡುಗಡೆಗೊಳಿಸಿರುವುದು ಮತ್ತು ೧೫ನೇ ಹಣಕಾಸಿನಲ್ಲಿ ಅದಕ್ಕಿಂತಲೂ ಹೆಚ್ಚು ಹಣ ಬಿಡುಗಡೆಗೊಳಿಸಲು, ಅದಕ್ಕೆ ಬೇಕಾದ ಹಣಕಾಸಿನ ಪೂರಕ ವ್ಯವಸ್ಥೆ ಮಾಡಿರುವ ಸಂದರ್ಭದಲ್ಲಿ ಕಳೆದ ವರ್ಷ ಕರೋನಾ ಪಿಡುಗು ಬಂದು ತೊಂದರೆ ಆಗಿರುವುದು ಮತ್ತು ಇದೀಗ ಎರಡನೇ ಅಲೆಯಿಂದ ತೊಂದರೆ ಆಗಿರುವ ಕಾರಣ ಹಣಕಾಸಿನ ಯೋಜನೆಯಲ್ಲಿ ಕಡಿತಗೊಳಿಸಿರುವುದು ಸಹಜ ಪ್ರಕ್ರಿಯೆ.

ಈ ಎಲ್ಲಾ ತೊಂದರೆಯ ಮಧ್ಯೆಯು ಬಡವರಿಗೆ ಘೋಷಿಸಿರುವ ಜೀವಾನಾವಶ್ಯಕ ಪಡಿತರ ವ್ಯವಸ್ಥೆಯನ್ನು ಪೂರೈಸಿ, ಉಚಿತವಾಗಿ ಮುಂದಿನ ಆಗಸ್ಟ್ ವರೆಗೆ ವಿಸ್ತರಣೆ ಮಾಡಿ ನೀಡಿರುವುದು, ಆಮೇಲೆ ರೈತರಿಗೆ ಭಿತ್ತನೆ ಬೀಜದ ಸಹಾಯ ಧನ ಈಗಾಗಲೇ ರೈತರ ಖಾತೆಗೆ ಜಮಾ ಮಾಡಿರುವುದು, ಭತ್ತ, ರಾಗಿ, ಜೋಳ ಸೇರಿದಂತೆ ೧೨ ಖಾರೀಫ್ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸಿ ಘೋಷಣೆ ಮಾಡಿರುವುದು ಮತ್ತು ರಾಜ್ಯ ಸರಕಾರದಿಂದ ಅಟೋ ಚಾಲಕರಿಂದ ಹಿಡಿದು ಎಲ್ಲಾ ಸಣ್ಣ ಸಣ್ಣ ಉದ್ಯೋಗ ಮಾಡುತ್ತಿದ್ದ ವ್ಯಕ್ತಿಗಳಿಗೆ ಕರೋನಾ ಸಹಾಯ ಧನ ಘೋಷಣೆ ಮಾಡಿರುವುದು, ಕೇಂದ್ರ ಸರಕಾರ ಉಚಿತವಾಗಿ ಲಸಿಕೆಗಳನ್ನು ನೀಡುತ್ತಿರುವುದು, ಔಷಧಿಗಳನ್ನ ನೀಡುತ್ತಿರುವುದು, ಉದ್ಯೋಗ ಖಾತರಿ ಯೋಜನೆ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗವಕಾಶವನ್ನು ಒದಗಿಸಿ ತಮ್ಮ ಖಾತೆಗೆ ನೇರ ಹಣವನ್ನು ಪಾವತಿಸಿರುವುದು ಕೇಂದ್ರ ಹಾಗೂ ರಾಜ್ಯ ಸರಕಾರವು ಕರೋನಾ ಮಹಾಮಾರಿಯನ್ನು ತಡೆಗಟ್ಟುವಲ್ಲಿ ಸಂಪೂರ್ಣ ತೊಡಗಿಸಿಕೊಂಡು ನಿರ್ವಹಿಸುತ್ತಿರುವುದು ಜನ ಸಾಮಾನ್ಯರ ಹೃದಯವನ್ನ ಮುಟ್ಟಿದೆ. ಜೊತೆಗೆ ಸರಕಾರ ಘೋಷಣೆ ಮಾಡಿರುವ ಸಹಾಯ ಧನ, ಬೆಂಬಲ ಬೆಲೆ ಇತ್ಯಾದಿಗಳು ಫಲಾನುಭವಿಗಳ ಖಾತೆಗಳಿಗೆ ತಲುಪುತ್ತಿರುವುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿಷ್ಪಕ್ಷಪಾತ, ನಿರಾತಂಕ, ದಕ್ಷ ಆಡಳಿತ ವ್ಯವಸ್ಥೆಗೆ ಹಿಡಿತ ಕೈಗನ್ನಡಿಯಾಗಿದೆ. ರಾಜಕೀಯ ಪ್ರೇರಿತ ಕ್ಷುಲ್ಲಕ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.